Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?
IPL 2022: ವಿರಾಟ್ ಕೊಹ್ಲಿ ಕೊಹ್ಲಿ ಇದುವರೆಗೆ ಐಪಿಎಲ್ನಲ್ಲಿ ಐದು ಬಾರಿ ಗೋಲ್ಡನ್ ಡಕ್ ಔಟ್ ಆದಂತಾಗಿದೆ. 2008 ರಲ್ಲಿ ಕೊಹ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ವಿರುದ್ದ ಎದುರಿಸಿದ ಮೊದಲ ಎಸೆತದಲ್ಲಿ ಗೋಲ್ಡನ್ ಡಕ್ ಔಟಾಗಿದ್ದರು.
Updated on:Apr 23, 2022 | 9:06 PM

IPL 2022: ಐಪಿಎಲ್ ಸೀಸನ್ 15ರ 36ನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದಾರೆ. ಇದರೊಂದಿಗೆ ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಗೋಲ್ಡನ್ ಡಕ್ಗೆ ಔಟಾದ ಅಪಖ್ಯಾತಿ ಕೊಹ್ಲಿ ಪಾಲಾಗಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು. ಇದೀಗ ಎಸ್ಆರ್ಹೆಚ್ ವಿರುದ್ದ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

ಇದರೊಂದಿಗೆ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ನಲ್ಲಿ ಐದು ಬಾರಿ ಗೋಲ್ಡನ್ ಡಕ್ ಔಟ್ ಆದಂತಾಗಿದೆ. 2008 ರಲ್ಲಿ ಕೊಹ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ವಿರುದ್ದ ಮೊದಲ ಎಸೆತದಲ್ಲಿ ಔಟಾಗಿ ಗೋಲ್ಡನ್ ಡಕ್ ಆಗಿದ್ದರು. ಆ ಬಳಿಕ ಪಂಜಾಬ್ ವಿರುದ್ದ 2014 ರಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಆನಂತರ 2017 ರಲ್ಲಿ ಕೆಕೆಆರ್ ವಿರುದ್ದ ಗೋಲ್ಡನ್ ಡಕ್ ಆಗಿದ್ದರು.

ಇನ್ನು ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಗೋಲ್ಡನ್ ಡಕ್ ಆಗಿದ್ದಾರೆ. ಅಂದರೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 5 ಬಾರಿ ಮೊದಲ ಎಸೆತದಲ್ಲೇ ಔಟಾಗಿದ್ದಾರೆ.

ಹಾಗೆಯೇ ವಿರಾಟ್ ಕೊಹ್ಲಿ ಐಪಿಎಲ್ನ ಒಂದೇ ಸೀಸನ್ನಲ್ಲಿ ಮೂರು ಬಾರಿ ಝೀರೋಗೆ ಔಟಾಗಿದ್ದರು. 2014 ರಲ್ಲಿ ಕೊಹ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಸೊನ್ನೆ ಸುತ್ತುವ ಮೂಲಕ ಪೆವಿಲಿಯನ್ ಹಾದಿ ಹಿಡಿದಿದ್ದರು.

ಇನ್ನು ಒಟ್ಟಾರೆ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ 8 ಬಾರಿ ಝೀರೋಗೆ ಔಟಾಗಿದ್ದಾರೆ. 2008 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ, 2014 ರಲ್ಲಿ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್ರೈಸರ್ಸ್ ಹೈದರಾಬಾದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಹಾಗೆಯೇ 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ದ, 2017 ರಲ್ಲಿ ಕೆಕೆಆರ್ ವಿರುದ್ದ ಝೀರೋಗೆ ಔಟಾಗಿದ್ದರು. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಝೀರೋಗೆ ವಿಕೆಟ್ ಒಪ್ಪಿಸಿದ್ದಾರೆ.

ಅಂದಹಾಗೆ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕೆಟ್ಟ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ ಐಪಿಎಲ್ನಲ್ಲಿ ಇದುವರೆಗೆ 14 ಬಾರಿ ಝೀರೋಗೆ ಔಟಾಗಿ ಈ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Published On - 8:31 pm, Sat, 23 April 22




