ಐಪಿಎಲ್. ಇದು ಕೇವಲ ಕ್ರಿಕೆಟ್ ಲೀಗ್ ಅಲ್ಲ. ಸಂಪತ್ತು ಮತ್ತು ಖ್ಯಾತಿಯ ಲೀಗ್ ಕೂಡ ಆಗಿದೆ. ಬಿಸಿಸಿಐ (BCCI)ನ ಈ ಗಳಿಕೆಯ ಲೀಗ್‌ನಿಂದ ಅನೇಕ ಆಟಗಾರರು ಹೆಸರು, ಮನ್ನಣೆ ಮತ್ತು ಹಣವನ್ನು ಪಡೆದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಈ ಲೀಗ್‌ನಲ್ಲಿ ದೊಡ್ಡ ಹೆಸರುಗಳಲ್ಲಿ ಒಬ್ಬರು. ಜೊತೆಗೆ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರು. ಇದು ಇಂದಿನ ಸಂಗತಿಯಾಗಿದೆ. ಆಗ ಐಪಿಎಲ್ ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾದಾಗ ಮೊದಲ ಹರಾಜು 2008 ರಲ್ಲಿ ನಡೆಯಿತು. ಅದರಲ್ಲಿ ವಿರಾಟ್ ಕೊಹ್ಲಿ ಕೂಡ ಹರಾಜಿನಲ್ಲಿ ಭಾಗವಾಹಿಸಿದ್ದರು. ಅಂದು ಸಂದರ್ಭಗಳು ಸಂಪೂರ್ಣವಾಗಿ ವಿಭಿನ್ನವಾಗಿದ್ದವು. ಆ ಕಥೆಯೇ ಬೇರೆಯಾಗಿತ್ತು. ಏಕೆಂದರೆ, ವಿರಾಟ್ ಕೊಹ್ಲಿ ಸಂಬಳದ ((Virat Kohli IPL Salary)) ಹೆಸರಿನಲ್ಲಿ ಪಡೆದ ಮೊದಲ ಮೊತ್ತ ಎಷ್ಟು ಎಂದು ಗೊತ್ತಾದರೆ ನೀವು ನಿಜಕ್ಕೂ ಶಾಕ್ ಆಗ್ತೀರ.ಮೊದಲ ಐಪಿಎಲ್ ಹರಾಜಿನಲ್ಲಿ ಕೊಹ್ಲಿ ಪಡೆದ ಸಂಭಾವನೆ ಕೇವಲ ಲಕ್ಷಗಳಾಗಿವೆ. ಆದರೆ, ನಂತರ ಐಪಿಎಲ್‌ನ ಪ್ರತಿ ಸೀಸನ್‌ನೊಂದಿಗೆ ವಿರಾಟ್ ಕೊಹ್ಲಿಯ ಸಂಭಾವನೆಯ ಗ್ರಾಫ್ ಕೂಡ ಹೆಚ್ಚಾಯಿತು. ವಿರಾಟ್ ಇಂದು ತಮ್ಮ ಆಟ, ಕೌಶಲ್ಯದಿಂದ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ.
ವಿರಾಟ್ ಕೊಹ್ಲಿಯ ಮೊದಲ ಐಪಿಎಲ್ ಸಂಭಾವನೆ ಕೇವಲ 12 ಲಕ್ಷ ರೂ
ವಿರಾಟ್ ಕೊಹ್ಲಿಯ ಮೊದಲ ಐಪಿಎಲ್ ಸಂಭಾವನೆ ಎಷ್ಟು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಹಾಗಾದರೆ ಈ ಪ್ರಶ್ನೆಗೆ ಉತ್ತರ ಕೇವಲ 12 ಲಕ್ಷ ರೂಪಾಯಿ. ಹೌದು, ವಿರಾಟ್ ಕೊಹ್ಲಿ ತಮ್ಮ ಮೊದಲ ಐಪಿಎಲ್ ಸಂಭಾವನೆಯಾಗಿ ಪಡೆದದ್ದು ಕೇವಲ 12 ಕೋಟಿ ರೂ ಮಾತ್ರ. ಇದು 2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಖರೀದಿಸಿದ ಮೊತ್ತವಾಗಿತ್ತು.
ಐಪಿಎಲ್ 2022ಕ್ಕೆ 15 ಕೋಟಿ ರೂ.ಗೆ ಉಳಿಸಿಕೊಂಡಿದೆ
ಆದರೆ, 12 ಲಕ್ಷ ರೂಪಾಯಿ ಪಡೆದ ವಿರಾಟ್ ಕೊಹ್ಲಿ ಮುಂದೊಂದು ದಿನ ಐಪಿಎಲ್ ಇತಿಹಾಸದಲ್ಲಿ ಉಳಿದ ಆಟಗಾರರಿಂದ ಅತ್ಯಧಿಕ ಮೊತ್ತವನ್ನು ಪಡೆಯುತ್ತಾರೆ ಎಂದು ಯಾರು ತಿಳಿದಿದ್ದರು. ಅದೂ ಕೂಡ ಅವರನ್ನು 12 ಲಕ್ಷಕ್ಕೆ ಖರೀದಿಸಿದ ಅದೇ ಫ್ರಾಂಚೈಸಿಯಿಂದ. ಆರ್‌ಸಿಬಿ ಕೂಡ ವಿರಾಟ್ ಕೊಹ್ಲಿಗೆ ಒಂದು ಸೀಸನ್‌ಗೆ 17 ಕೋಟಿ ರೂಪಾಯಿ ಸಂಭಾವನೆ ನೀಡಿದ್ದು ದಾಖಲೆಯಾಗಿದೆ. ಇದು ವಿರಾಟ್ ಕೊಹ್ಲಿ ಮೇಲಿನ ಆರ್‌ಸಿಬಿ ಫ್ರಾಂಚೈಸಿಯ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಈ ಫಲಿತಾಂಶದ ಪರಿಣಾಮವೆಂದರೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಸಂಪೂರ್ಣ ಲೀಗ್ ಅನ್ನು ಒಂದೇ ಫ್ರಾಂಚೈಸ್‌ನೊಂದಿಗೆ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆರ್‌ಸಿಬಿ 15 ಕೋಟಿಗೆ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಇದು ಐಪಿಎಲ್ 2022 ರಲ್ಲಿ ಅವರ ಸಂಬಳದ ಹೊಸ ಮೊತ್ತವಾಗಿದೆ, ಇದು ಹಿಂದಿನ ಸೀಸನ್‌ಗಿಂತ 2 ಕೋಟಿ ರೂಪಾಯಿ ಕಡಿಮೆಯಾಗಿದೆ. ಏಕೆಂದರೆ ಐಪಿಎಲ್ 15ನೇ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕರಾಗಿರುವುದಿಲ್ಲ. ಐಪಿಎಲ್ ಸಂಭಾವನೆಯಲ್ಲಿ ಕಡಿತ ಮಾಡಲಾಗಿದೆ, ಆದರೆ ವಿರಾಟ್ ಲೀಗ್‌ನ ಟಾಪ್ 5 ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರು.
ಇದನ್ನೂ ಓದಿ:IPL 2022 Auction: ಬರೋಬ್ಬರಿ 9 ಹರಾಜಿನಲ್ಲಿ ಭಾಗವಹಿಸಿ ದುಬಾರಿ ಬೆಲೆ ಪಡೆದ ಭಾರತದ ಬೌಲರ್ ಯಾರು ಗೊತ್ತಾ?
Published On - 4:22 pm, Thu, 10 February 22