IPL 2022: ಈಗ 16 ಕೋಟಿ ರೂ. ಸಂಬಳ ಪಡೆಯುವ ರೋಹಿತ್ ಮೊದಲ ಐಪಿಎಲ್​ನಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

Rohit Sharma: ಅಂದಹಾಗೆ, ಇದುವರೆಗೆ 5 ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ಈ ಲೀಗ್‌ನಲ್ಲಿ ತಮ್ಮ ಸಂಭಾವನೆ 3 ಕೋಟಿ ಆಗಿದ್ದಾಗಲೇ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

IPL 2022: ಈಗ 16 ಕೋಟಿ ರೂ. ಸಂಬಳ ಪಡೆಯುವ ರೋಹಿತ್ ಮೊದಲ ಐಪಿಎಲ್​ನಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
ರೋಹಿತ್ ಶರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on: Feb 10, 2022 | 5:22 PM

ರೋಹಿತ್ ಶರ್ಮಾ (Rohit Sharma) ಒಂದು ಐಪಿಎಲ್​ ಸೀಸನ್​ನಿಂದ ಗಳಿಸುವ ಹಣವೆಷ್ಟು? ಎಂದು ಕೇಳುವವರ ಉತ್ತರ 16 ಕೋಟಿ ರೂ. ಎಂದು ಸುಲಭವಾಗಿ ಗೊತ್ತಾಗುತ್ತದೆ. ಅದೇ ಮೊತ್ತಕ್ಕೆ ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ಉಳಿಸಿಕೊಂಡಿದೆ. ಆದರೆ, 15ನೇ ಸೀಸನ್ ಲೀಗ್​ನಲ್ಲಿ 16 ಕೋಟಿ ಸಂಭಾವನೆ ಪಡೆಯುತ್ತಿರುವ ರೋಹಿತ್ ಶರ್ಮಾ ಮೊದಲ ಐಪಿಎಲ್ ಸಂಭಾವನೆ (IPL salary) ಎಷ್ಟು ಎಂದು ನಿಮಗೆ ಗೊತ್ತಾ?.ರೋಹಿತ್ ಮೊದಲ ಮತ್ತು ಪ್ರಸ್ತುತ ಐಪಿಎಲ್ ಸಂಭಾವನೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇಂದು ಅವರು ತಮ್ಮ ಮೊದಲ ಐಪಿಎಲ್ ಸಂಬಳಕ್ಕಿಂತ 5 ಪಟ್ಟು ಹೆಚ್ಚು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಆಗ ಮತ್ತು ಇಂದಿನ ಸಂಬಳದ ವ್ಯತ್ಯಾಸ ಹೀಗಿಲ್ಲ. ಬದಲಿಗೆ, ಇದರ ಹಿಂದೆ ಒಬ್ಬ ಆಟಗಾರನಾಗಿ, ನಾಯಕನಾಗಿ ರೋಹಿತ್ ಶರ್ಮಾ ಶ್ರಮವಿದೆ.

2008 ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಹರಾಜು ನಡೆದಾಗ, ರೋಹಿತ್ ಶರ್ಮಾ ಆ ಹರಾಜಿನಲ್ಲಿ ಕ್ಯಾಪ್ಡ್ ಆಟಗಾರನಾಗಿ ಭಾಗವಹಿಸಿದ್ದರು. ಅವರು ಇಂದಿನಷ್ಟು ಪ್ರಸಿದ್ಧರಾಗಿರಲಿಲ್ಲ, ಆದರೆ ಕ್ರಿಕೆಟ್ ಜಗತ್ತಿನ ಉದಯೋನ್ಮುಖ ತಾರೆಯಾಗಿದ್ದರು. ಆಗ ಅವರು ಇಂದಿನಂತೆ ಲೀಗ್‌ನ ಅತ್ಯಂತ ಯಶಸ್ವಿ ನಾಯಕನೂ ಆಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹರಾಜಿನಲ್ಲಿ ಬಿಡ್ ಮಾಡುವುದು ಅಲ್ಲಿಯವರೆಗಿನ ಅವರ ಪ್ರದರ್ಶನವನ್ನು ಪರಿಗಣಿಸಿ ಎಂಬುದು ಸ್ಪಷ್ಟವಾಗಿತ್ತು.

ರೋಹಿತ್ ಶರ್ಮಾ ಮೊದಲ ಐಪಿಎಲ್ ಸಂಭಾವನೆ 3 ಕೋಟಿ ರೂ

2008ರಲ್ಲಿ ನಡೆದ ಐಪಿಎಲ್‌ನ ಮೊದಲ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ 3 ಕೋಟಿ ರೂ. ಸಂಬಳ ಪಡೆದಿದ್ದರು. ಇದು ಅವರ ಮೊದಲ IPL ಸಂಬಳ ಎಂದು ನೀವು ಕರೆಯಬಹುದಾದ ಮೊತ್ತವಾಗಿತ್ತು. ಅವರನ್ನು ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ ರೂ 3 ಕೋಟಿಗೆ ಬಿಡ್ ಮಾಡುವ ಮೂಲಕ ತಮ್ಮ ತೆಕ್ಕೆಗೆ ಹಾಕಿಕೊಂಡಿತು. ವಿಸ್ಮಯಕಾರಿ ಸಂಗತಿಯೆಂದರೆ 3 ಕೋಟಿ ಪಡೆದ ನಂತರವೂ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದರು.

2011 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಎಂಟ್ರಿ

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ 2011ರಲ್ಲಿ ಸೇರ್ಪಡೆಗೊಂಡರು. ಆ ವರ್ಷದ ಐಪಿಎಲ್ ಹರಾಜಿನಲ್ಲಿ, ಹಿಂದಿನ ಫ್ರಾಂಚೈಸಿಯಿಂದ ಬಿಡುಗಡೆಯಾದ ನಂತರ, ರೋಹಿತ್ ಶರ್ಮಾ ಅವರ ಹೆಸರು ಮತ್ತೊಮ್ಮೆ ಬಿಡ್ಡಿಂಗ್ ಆಗಿತ್ತು. ಈ ಬಾರಿ ನೀತಾ ಅಂಬಾನಿಯ ಮುಂಬೈ ಇಂಡಿಯನ್ಸ್ ಈ ಸೂಪರ್‌ಸ್ಟಾರ್ ಅನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಅಂದಿನಿಂದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ಆಟಗಾರನಾಗಿದ್ದಾರೆ. ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿದ್ದು, ರೋಹಿತ್ ಶರ್ಮಾ ಈ ಲೀಗ್‌ನ ಅತ್ಯಂತ ಯಶಸ್ವಿ ನಾಯಕನಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಅಂದಹಾಗೆ, ಇದುವರೆಗೆ 5 ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ಈ ಲೀಗ್‌ನಲ್ಲಿ ತಮ್ಮ ಸಂಭಾವನೆ 3 ಕೋಟಿ ಆಗಿದ್ದಾಗಲೇ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆದಾಗ, ರೋಹಿತ್ ಶರ್ಮಾ ಆ ತಂಡದ ಭಾಗವಾಗಿದ್ದರು. ಅದೇನೆಂದರೆ, ಕೇವಲ ಒಬ್ಬ ಆಟಗಾರನ ಸಾಮರ್ಥ್ಯದಲ್ಲಿ ರೋಹಿತ್ 6 ಬಾರಿ ಐಪಿಎಲ್ ಚಾಂಪಿಯನ್ನ ರುಚಿ ನೋಡಿದ್ದು ದಾಖಲೆಯಾಗಿದೆ.

ಇದನ್ನೂ ಓದಿ:ICC ODI Rankings: ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ- ರೋಹಿತ್ ನಡುವೆ ಪೈಪೋಟಿ! ಏಳನೇ ಸ್ಥಾನದಲ್ಲಿ ಬುಮ್ರಾ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ