IPL 2022: ವಿರಾಟ್ ಕೊಹ್ಲಿ, ನಾವಿಲ್ಲಿ ಕಣ್ಣೀರಿಡ್ತಿದ್ದೀವಿ ಎಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Apr 24, 2022 | 6:02 PM

IPL 2022: ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಈ ಸೀಸನ್​ನಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಕೊಹ್ಲಿ 119 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

IPL 2022: ವಿರಾಟ್ ಕೊಹ್ಲಿ, ನಾವಿಲ್ಲಿ ಕಣ್ಣೀರಿಡ್ತಿದ್ದೀವಿ ಎಂದ ಮಾಜಿ ಕ್ರಿಕೆಟಿಗ
Virat kohli
Follow us on

ವಿರಾಟ್ ಕೊಹ್ಲಿ ಇದೀಗ ಅತ್ಯಂತ ಕೆಟ್ಟ ಫಾರ್ಮ್​ನಲ್ಲಿದ್ದಾರೆ. ಈ ಬಾರಿಯ ಐಪಿಎಲ್​ಗೂ ಮುನ್ನ ನಾಯಕತ್ವವನ್ನು ತ್ಯಜಿಸಿದ್ದ ಕೊಹ್ಲಿ ಮೇಲೆ ನಿರೀಕ್ಷೆಗಳು ಹೆಚ್ಚಿತ್ತು. ಆದರೆ 8 ಪಂದ್ಯಗಳಲ್ಲಿ ಕೊಹ್ಲಿ ಕಲೆಹಾಕಿದ್ದು ಮಾತ್ರ ಕೇವಲ 119 ರನ್​. ಅದರಲ್ಲೂ ಎರಡು ಬಾರಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಕೊಹ್ಲಿಯ ಈ ಕಳಪೆ ಫಾರ್ಮ್​ನಿಂದ ಅಭಿಮಾನಿಗಳಷ್ಟೇ ಅಲ್ಲ, ಕ್ರಿಕೆಟ್ ಪರಿಣತರೂ ನಿರಾಸೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಈ ರೀತಿ ರನ್ ಗಳಿಸಲು ಕೊಹ್ಲಿ ಹರಸಾಹಸ ಪಡುತ್ತಿರುವುದನ್ನು ನೋಡಿದರೆ ನೋವಾಗುತ್ತದೆ ಎಂದಿದ್ದಾರೆ. ಕೊಹ್ಲಿಯ ಕಳಪೆ ಫಾರ್ಮ್ ನೋಡಿ ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಚೋಪ್ರಾ ನೋವನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಯಾವಾಗ ರನ್ ಗಳಿಸುತ್ತಾರೆ, ಅವರು ರನ್ ಗಳಿಸುತ್ತಾರೆಯೇ ಅಥವಾ ಇಲ್ಲವೇ? ಎಂಬುದೇ ಈಗ ದೊಡ್ಡ ಪ್ರಶ್ನೆ. ಇದಲ್ಲದೇ ಈ ಸೀಸನ್​ನಲ್ಲಿ ಎರಡು ಬಾರಿ ರನೌಟ್ ಆಗಿದ್ದಾರೆ. ಎರಡು ಬಾರಿ ಡಕ್​ ಔಟ್ ಕೂಡ ಆಗಿದ್ದಾರೆ. ಇದೆಲ್ಲವನ್ನು ನೋಡ್ತಿದ್ದರೆ ಕಣ್ಣೀರು ಬರುತ್ತಿದೆ ಎಂದು ಆಕಾಶ್ ಚೋಪ್ರಾ ಹೇಳಿದರು.

ಕಳಪೆ ಫಾರ್ಮ್​ನಲ್ಲಿ ಕೊಹ್ಲಿ:
ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಈ ಸೀಸನ್​ನಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಕೊಹ್ಲಿ 119 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ವೇಳೆ ಕೇವಲ ಎರಡು ಪಂದ್ಯಗಳಲ್ಲಿ 40 ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಲು ಮಾತ್ರ ಸಮರ್ಥರಾಗಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲಿಯೇ ಔಟಾದರು. ಒಂದು ಪಂದ್ಯದಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾದರೂ RCB ಕೂಡ ಗೆದ್ದಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲನುಭವಿಸಬೇಕಾಯಿತು. ಎರಡೂ ಸಂದರ್ಭಗಳಲ್ಲಿ, ಅವರು ವೇಗದ ಬೌಲರ್‌ಗಳಿಗೆ ಬಲಿಯಾಗಿರುವುದು ಅಚ್ಚರಿ. ಇದು ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿರುವುದನ್ನು ತೋರಿಸುತ್ತದೆ.

ಕಂಬ್ಯಾಕ್ ಮಾಡುವ ವಿಶ್ವಾಸ:
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಡುವೆಯೂ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರಾ. ಈ ಸಮಯದಲ್ಲಿ ಕೊಹ್ಲಿಗೆ ಎಲ್ಲರ ಬೆಂಬಲದ ಅಗತ್ಯವಿದೆ. ಧೋನಿ, ರೋಹಿತ್, ಕೊಹ್ಲಿ ಎಂದು ನಾನು ಯಾವಾಗಲೂ ಹೇಳುತ್ತೇನೆ, ಅದು ಒಂದು ಭಾವನೆಯಾಗಿದೆ. ಕೊಹ್ಲಿ ಕೇವಲ ಆಟಗಾರನಲ್ಲ, ನಮ್ಮ ಭಾವನೆಯೊಳಗೆ ಸೇರಿದ ಆಟಗಾರ. ಹೀಗಾಗಿ ಕೊಹ್ಲಿಯ ಫಾರ್ಮ್​ ನಮಗೂ ಕೂಡ ಬಹಳ ಮುಖ್ಯ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್