IPL 2022: 22 ಮಂದಿಗೆ ಚಾನ್ಸ್ ಸಿಕ್ಕರೂ, ಅರ್ಜುನ್ ತೆಂಡೂಲ್ಕರ್​ಗಿಲ್ಲ ಅವಕಾಶ

| Updated By: ಝಾಹಿರ್ ಯೂಸುಫ್

Updated on: May 18, 2022 | 4:00 PM

Arjun Tendulkar: ಮೇ 21 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ಯುವ ಆಲ್​ರೌಂಡರ್ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ಸಿಗಲಿದೆಯಾ ಎಂಬುದೇ ಈಗ ಕುತೂಹಲ.

IPL 2022: 22 ಮಂದಿಗೆ ಚಾನ್ಸ್ ಸಿಕ್ಕರೂ, ಅರ್ಜುನ್ ತೆಂಡೂಲ್ಕರ್​ಗಿಲ್ಲ ಅವಕಾಶ
Arjun Tendulkar
Follow us on

IPL 2022: ಮುಂಬೈ ಇಂಡಿಯನ್ಸ್ (Mumbai Indians) ತಂಡವು ಈ ಬಾರಿಯ ಐಪಿಎಲ್​ನಲ್ಲಿ 13 ಪಂದ್ಯಗಳನ್ನಾಡಿದೆ. ಈ ಹದಿಮೂರು ಪಂದ್ಯಗಳಲ್ಲಿ ಹಲವು ಆಟಗಾರರಿಗೆ ಅವಕಾಶ ಸಿಕ್ಕರೂ, ಅರ್ಜುನ್ ತೆಂಡೂಲ್ಕರ್​ಗೆ (Arjun Tendulkar) ಮಾತ್ರ ಚಾನ್ಸ್ ನೀಡಿಲ್ಲ. ಈ ಬಾರಿ ಮುಂಬೈ ಪರ ರಮಣದೀಪ್ ಸಿಂಗ್, ಸ್ಟಬ್, ಟಿಮ್ ಡೇವಿಡ್, ಸಂಜಯ್ ಯಾದವ್, ಮಯಾಂಕ್ ಮಾರ್ಕಂಡೆ, ತಿಲಕ್ ವರ್ಮಾ ಅವರು ಪದಾರ್ಪಣೆ ಮಾಡಿದ್ದರು. ಇದಾಗ್ಯೂ ಅರ್ಜುನ್ ತೆಂಡೂಲ್ಕರ್​ಗೆ ಮಾತ್ರ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ.

ಅದರಲ್ಲೂ ಪ್ಲೇಅಫ್​ ರೇಸ್​ನಿಂದ ಹೊರಬಿದ್ದ ಬಳಿಕ ಕೂಡ ಮುಂಬೈ ಇಂಡಿಯನ್ಸ್ ಅರ್ಜುನ್ ತೆಂಡೂಲ್ಕರ್ ಅವರಿಗೆ ಅವಕಾಶ ನೀಡಿಲ್ಲ ಎಂಬುದು ವಿಶೇಷ. ಎಸ್​ಆರ್​ಹೆಚ್​ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಮಯಾಂಕ್ ಮಾರ್ಕಂಡೆ ಮತ್ತು ಸಂಜಯ್ ಯಾದವ್ ಅವರಿಗೆ ಅವಕಾಶ ನೀಡಲಾಗಿತ್ತು. ಇದರೊಂದಿಗೆ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಒಟ್ಟು 22 ಆಟಗಾರರಿಗೆ ಅವಕಾಶ ನೀಡಲಾಗಿದೆ. ಅಂದರೆ 13 ಪಂದ್ಯಗಳಲ್ಲಿ 22 ಆಟಗಾರರು ಪ್ಲೇಯಿಂಗ್​ ಇಲೆವೆನ್​ನ ಭಾಗವಾಗಿದ್ದಾರೆ. ಅಂದರೆ, ಕೇವಲ 3 ಆಟಗಾರರು ಮಾತ್ರ ಉಳಿದಿದ್ದಾರೆ. ಇವರಲ್ಲಿ ಅರ್ಜುನ್ ತೆಂಡೂಲ್ಕರ್ ಕೂಡ ಒಬ್ಬರು.

ಆದರೆ ಕಳೆದ ಕೆಲ ಸೀಸನ್​ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜೂನ್ ತೆಂಡೂಲ್ಕರ್ ಅವರಿಗೆ ಮಾತ್ರ ಇನ್ನೂ ಕೂಡ ಪ್ಲೇಯಿಂಗ್ ಇಲೆವೆನ್​ನ ಭಾಗವಾಗುವ ಭಾಗ್ಯ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿರುವ ಮಾಜಿ ಮುಂಬೈ ಇಂಡಿಯನ್ಸ್ ಆಟಗಾರ ಹರ್ಭಜನ್ ಸಿಂಗ್, ಮುಂಬೈ ಇಂಡಿಯನ್ಸ್ 13 ಪಂದ್ಯಗಳನ್ನು ಆಡಿದೆ. ಇನ್ನುಳಿದಿರುವುದು ಕೇವಲ 1 ಪಂದ್ಯ ಮಾತ್ರ. ಅರ್ಜುನ್ ಗೆ ಕನಿಷ್ಠ ಒಂದು ಪಂದ್ಯದಲ್ಲಾದರೂ ಅವಕಾಶ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ
IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!

ಅದರಂತೆ ಮೇ 21 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ಯುವ ಆಲ್​ರೌಂಡರ್ ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ಸಿಗಲಿದೆಯಾ ಎಂಬುದೇ ಈಗ ಕುತೂಹಲ. ಒಂದು ವೇಳೆ ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಚಾನ್ಸ್ ಸಿಗದಿದ್ದರೆ, ಮುಂದಿನ ಸೀಸನ್​ವರೆಗೆ ಕಾಯಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.