IPL 2022: RCB ವಿರುದ್ದ ಗುಜರಾತ್ ಟೈಟನ್ಸ್ ಗೆದ್ದರೆ ಹೊಸ ದಾಖಲೆ..!

IPL 2022: RCB ವಿರುದ್ದ ಗುಜರಾತ್ ಟೈಟನ್ಸ್ ಗೆದ್ದರೆ ಹೊಸ ದಾಖಲೆ..!
RCB vs GT

IPL 2022: 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್​) ತಂಡವು 14 ಲೀಗ್ ಪಂದ್ಯಗಳಲ್ಲಿ 11 ರಲ್ಲಿ ಜಯ ಸಾಧಿಸುವ ಮೂಲಕ ಒಟ್ಟು 22 ಅಂಕ ಪಡೆದು ಅಗ್ರಸ್ಥಾನ ಅಲಂಕರಿಸಿತ್ತು.

TV9kannada Web Team

| Edited By: Zahir PY

May 18, 2022 | 4:28 PM

IPL 2022: ಐಪಿಎಲ್​ನ 67ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್  ಹಾಗೂ ಆರ್​ಸಿಬಿ (RCB vs GT) ಮುಖಾಮುಖಿಯಾಗಲಿದೆ. ಈ ಪಂದ್ಯವು ಗುಜರಾತ್ ಟೈಟನ್ಸ್ ಪಾಲಿಗೆ ಔಪಚಾರಿಕ ಪಂದ್ಯವಷ್ಟೇ. ಏಕೆಂದರೆ ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ 10 ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್ ತಂಡವು 20 ಪಾಯಿಂಟ್ಸ್ ಕಲೆಹಾಕಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದುನ್ನು ಖಚಿತಪಡಿಸಿಕೊಂಡಿದೆ. ಇದಾಗ್ಯೂ ಈ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಗೆದ್ದರೆ ವಿಶೇಷ ದಾಖಲೆಯೊಂದು ಗುಜರಾತ್ ಟೈಟನ್ಸ್ ಪಾಲಾಗಲಿದೆ.

ಏಕೆಂದರೆ ಕಳೆದ 14 ಸೀಸನ್ ಐಪಿಎಲ್ ಇತಿಹಾಸದಲ್ಲಿ ಕೇವಲ 4 ತಂಡಗಳು ಮಾತ್ರ ಪಾಯಿಂಟ್ಸ್ ಟೇಬಲ್​ನಲ್ಲಿ 22 ಅಂಕ ಪಡೆದುಕೊಂಡಿದೆ. ಈ ಸಾಧನೆ ಮಾಡಿದ ಮೊದಲ ತಂಡವೆಂದರೆ ರಾಜಸ್ಥಾನ್ ರಾಯಲ್ಸ್. 2008 ರಲ್ಲಿ ರಾಜಸ್ಥಾನ್ ರಾಯಲ್ಸ್ 14 ಪಂದ್ಯಗಳಲ್ಲಿ 11 ಗೆಲುವು ದಾಖಲಿಸಿ 22 ಅಂಕ ಕಲೆಹಾಕಿತ್ತು. ಅಲ್ಲದೆ ಶೇನ್ ವಾರ್ನ್​ ನೇತೃತ್ವದ ಆರ್​ಆರ್​ ತಂಡವು ಚೊಚ್ಚಲ ಐಪಿಎಲ್​ನಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.

ಇದಾದ ಬಳಿಕ ಮತ್ತೊಮ್ಮೆ 22 ಅಂಕ ಪಡೆದ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್​. 2012 ರ ಐಪಿಎಲ್​ನಲ್ಲಿ 16 ಲೀಗ್​ ಪಂದ್ಯಗಳಿಂದ ಡೆಲ್ಲಿ ತಂಡವು 11 ಗೆಲುವು ದಾಖಲಿಸಿ 22 ಪಾಯಿಂಟ್ಸ್ ಪಡೆದು ಅಗ್ರಸ್ಥಾನ ಅಲಂಕರಿಸಿತ್ತು. ಇನ್ನು 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 16 ಪಂದ್ಯಗಳಿಂದ 11 ಗೆಲುವು ದಾಖಲಿಸುವ ಮೂಲಕ 22 ಅಂಕ ಪಡೆದು ಮಿಂಚಿತ್ತು.

ಹಾಗೆಯೇ 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್​) ತಂಡವು 14 ಲೀಗ್ ಪಂದ್ಯಗಳಲ್ಲಿ 11 ರಲ್ಲಿ ಜಯ ಸಾಧಿಸುವ ಮೂಲಕ ಒಟ್ಟು 22 ಅಂಕ ಪಡೆದು ಅಗ್ರಸ್ಥಾನ ಅಲಂಕರಿಸಿತ್ತು. ಇದೀಗ ಈ ಸಾಧನೆ ಮಾಡಿದ ಐದನೇ ತಂಡ ಎನಿಸಿಕೊಳ್ಳುವ ಅವಕಾಶವೊಂದು ಗುಜರಾತ್ ಟೈಟನ್ಸ್ ಮುಂದಿದೆ. ಇದಕ್ಕಾಗಿ ಆರ್​ಸಿಬಿ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಗೆಲ್ಲಬೇಕು.

ಒಂದು ವೇಳೆ ಗುಜರಾತ್ ಟೈಟನ್ಸ್ ತಂಡವು ಗೆದ್ದರೆ ಹೊಸ ಇತಿಹಾಸ ಕೂಡ ನಿರ್ಮಾಣವಾಗಲಿದೆ. ಏಕೆಂದರೆ ಐಪಿಎಲ್​ನಲ್ಲಿ ಹೊಸ ತಂಡವೊಂದು ಮೊದಲ ಸೀಸನ್​ನಲ್ಲೇ 22 ಅಂಕ ಪಡೆದ ದಾಖಲೆ ಗುಜರಾತ್ ಟೈಟನ್ಸ್ ಪಾಲಾಗಲಿದೆ. 2008 ಸೀಸನ್ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲ ಸೀಸನ್​ನಲ್ಲೇ ಈ ಸಾಧನೆ ಮಾಡಿತ್ತು. ಇದೀಗ ಐಪಿಎಲ್​ ನಡುವೆ ಎಂಟ್ರಿ ಕೊಟ್ಟಿರುವ ತಂಡವೊಂದು​ ಮೊದಲ ಸೀಸನ್​ನಲ್ಲೇ 22 ಅಂಕ ಕಲೆಹಾಕುವ ಮೂಲಕ ವಿಶೇಷ ದಾಖಲೆಯನ್ನು ಗುಜರಾತ್ ತಂಡವು ತನ್ನದಾಗಿಸಿಕೊಳ್ಳಬಹುದು. ಹೀಗಾಗಿ ಆರ್​ಸಿಬಿ ವಿರುದ್ದದ ಔಪಚಾರಿಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಹೊಸ ದಾಖಲೆ ಬರೆಯಲಿದೆಯಾ ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಗುಜರಾತ್ ಟೈಟನ್ಸ್ (GT): ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ಬಿ ಸಾಯಿ ಸುದರ್ಶನ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada