IPL 2023: ಐಡೆನ್ ಮಾರ್ಕ್ರಾಮ್​ಗೆ ಸನ್​ರೈಸರ್ಸ್​ ಹೈದರಾಬಾದ್ ನಾಯಕತ್ವ; ಕನ್ನಡಿಗನಿಗೆ ಕೈತಪ್ಪಿದ ಅವಕಾಶ

IPL 2023 SRH Captain: ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿಯೂ 16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ತಂಡಕ್ಕೆ ನೂತನ ನಾಯಕನನ್ನಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಐಡೆನ್ ಮಾರ್ಕ್ರಾಮ್ ಅವರನ್ನು ಆಯ್ಕೆ ಮಾಡಿದೆ.

IPL 2023: ಐಡೆನ್ ಮಾರ್ಕ್ರಾಮ್​ಗೆ ಸನ್​ರೈಸರ್ಸ್​ ಹೈದರಾಬಾದ್ ನಾಯಕತ್ವ; ಕನ್ನಡಿಗನಿಗೆ ಕೈತಪ್ಪಿದ ಅವಕಾಶ
ಐಡೆನ್ ಮಾರ್ಕ್ರಾಮ್- ಸನ್​ರೈಸರ್ಸ್​ ಹೈದರಾಬಾದ್Image Credit source: insidesport
Follow us
ಪೃಥ್ವಿಶಂಕರ
|

Updated on:Feb 23, 2023 | 11:58 AM

ಐಪಿಎಲ್​ನಲ್ಲಿ (IPL) ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad) ಫ್ರಾಂಚೈಸಿಯೂ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೂ ಮುನ್ನ ತನ್ನ ತಂಡಕ್ಕೆ ನೂತನ ನಾಯಕನನ್ನಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಐಡೆನ್ ಮಾರ್ಕ್ರಾಮ್ (Aiden Markaram) ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಎಸ್​ಆರ್​ಹೆಚ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನ್ಯೂಜಿಲೆಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಅವರನ್ನು ಫ್ರಾಂಚೈಸಿಯೂ ಮಿನಿ ಹರಾಜಿಗೂ ಮುನ್ನವೇ ತಂಡದಿಂದ ಬಿಡುಗಡೆ ಮಾಡಿತ್ತು. ಹೀಗಾಗಿ ಸನ್​ರೈಸರ್ಸ್​ ತಂಡ ನೂತನ ನಾಯಕನ ಹುಡುಕಾಟದಲ್ಲಿತ್ತು. ಮಿನಿ ಹರಾಜು ಮುಗಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ನಾಯಕತ್ವದ ರೇಸ್‌ನಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಐಡನ್ ಮಾರ್ಕ್ರಾಮ್ ಹೆಸರಿತ್ತು. ಅಲ್ಲದೆ ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನ ಮೊದಲ ಸೀಸನ್​ನಲ್ಲಿಯೇ ಸನ್‌ರೈಸರ್ಸ್ ಈಸ್ಟರ್ನ್ ತಂಡವನ್ನು ಮಾರ್ಕ್ರಾಮ್ ಚಾಂಪಿಯನ್ ಮಾಡಿದ್ದರು.

ಇದಲ್ಲದೆ ಮಾರ್ಕ್ರಾಮ್ ನಾಯಕತ್ವದಲ್ಲಿ 2014ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡ ವಿಶ್ವಕಪ್ ಗೆದ್ದಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೂ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಫ್ರಾಂಚೈಸ್ ಅವರನ್ನು ತನ್ನ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಹಾಗೆಯೇ ಸನ್​ರೈಸರ್ಸ್​ ತಂಡದ ನಾಯಕತ್ವವಹಿಸಿಕೊಳ್ಳುವುದರೊಂದಿಗೆ ಐಪಿಎಲ್ ತಂಡವನ್ನು ಮುನ್ನಡೆಸುವ ಐದನೇ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ಹೆಗ್ಗಳಿಕೆಗೂ ಮಾರ್ಕ್ರಾಮ್ ಪಾತ್ರರಾಗಿದ್ದಾರೆ.

IPL 2023: ಸಿಎಸ್​ಕೆಗೆ ಆನೆ ಬಲ; ಐಪಿಎಲ್ ಅಖಾಡಕ್ಕೆ ಎಂಟ್ರಿಕೊಟ್ಟ 14 ಕೋಟಿ ಬೆಲೆಯ ಆಲ್​ರೌಂಡರ್!

ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸಿದ ದಕ್ಷಿಣ ಆಫ್ರಿಕಾದ ಆಟಗಾರರು

  1. ಜೆಪಿ ಡುಮಿನಿ (ಡೆಲ್ಲಿ ಡೇರ್​ಡೆವಿಲ್ಸ್)
  2. ಫಾಫ್ ಡು ಪ್ಲೆಸಿಸ್ (ಆರ್​ಸಿಬಿ)
  3. ಡೇವಿಡ್ ಮಿಲ್ಲರ್ (ಪಂಜಾಬ್ ಕಿಂಗ್ಸ್)
  4. ಶಾನ್ ಪೊಲಾಕ್ (ಮುಂಬೈ ಇಂಡಿಯನ್ಸ್)
  5. ಐಡೆನ್ ಮಾರ್ಕ್ರಾಮ್ (ಸನ್​ರೈಸರ್ಸ್​ ಹೈದರಾಬಾದ್)*

ಕನ್ನಡಿಗನಿಗೆ ಕೈತಪ್ಪಿದ ಅವಕಾಶ

ವಾಸ್ತವವಾಗಿ ಈ ಹಿಂದೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕತ್ವಕ್ಕಾಗಿ ಮಾರ್ಕ್ರಾಮ್ ಸೇರಿದಂತೆ ಮೂವರು ಆಟಗಾರರ ನಡುವೆ ಫೈಪೋಟಿ ಏರ್ಪಟ್ಟಿತ್ತು. ಅವರಲ್ಲಿ ಒಬ್ಬರು ವೇಗಿ ಭುವನೇಶ್ವರ್ ಕುಮಾರ್ ಆಗಿದ್ದರೆ, ಇನ್ನೊಬ್ಬರು ಕನ್ನಡಿಗ ಮಯಾಂಕ್ ಅಗರ್ವಾಲ್. ಮಿನಿ ಹರಾಜಿಗೂ ಮುನ್ನ ಪಂಜಾಬ್ ತಂಡ ಮಯಾಂಕ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದಲ್ಲದೆ, ತಂಡದಿಂದಲೇ ಹೊರ ಹಾಕಿತ್ತು. ಹೀಗಾಗಿ ಮಿನಿ ಹರಾಜಿನಲ್ಲಿ ಮಯಾಂಕ್ ಅವರನ್ನು ರೂ.8.25 ಕೋಟಿಗೆ ಸನ್​​ರೈಸರ್ಸ್​ ಫ್ರಾಂಚೈಸಿ ಖರೀದಿಸಿತ್ತು. ಆಗಿನಿಂದ ಈ ತಂಡಕ್ಕೆ ಮಯಾಂಕ್ ಅವರೇ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ ಇದೆಲ್ಲ ಊಹಾಪೋಹಗಳಿಗೆ ಫುಲ್​ಸ್ಟಾಪ್ ಇಟ್ಟಿರುವ ಫ್ರಾಂಚೈಸಿ, ಚಾಂಪಿಯನ್ ನಾಯಕನಿಗೆ ತಂಡದ ನಾಯಕತ್ವ ನೀಡಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡ ಹೀಗಿದೆ

ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ನಿತೀಶ್ ಕುಮಾರ್ ರೆಡ್ಡಿ, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್‌ಹಕ್ ಫಾರೂಕಿ, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಯಾದವ್, ಮಯಾಂಕ್ ದಾಗರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 am, Thu, 23 February 23

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು