IPL 2023: ಐಪಿಎಲ್ 2023 ನಿಯಮದಲ್ಲಿ ದೊಡ್ಡ ಬದಲಾವಣೆ: ಪ್ಲೇಯಿಂಗ್ XI ನಲ್ಲಿ ಅಚ್ಚರಿಯ ನಿರ್ಧಾರ

| Updated By: Vinay Bhat

Updated on: Dec 02, 2022 | 10:50 AM

Impact Player IPL 2023: ಐಪಿಎಲ್ 2023 ಟೂರ್ನಿಯಲ್ಲಿ ಬಿಸಿಸಿಐ (BCCI) ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಐಪಿಎಲ್ ಮುಂದಿನ ಸೀಸನ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.

IPL 2023: ಐಪಿಎಲ್ 2023 ನಿಯಮದಲ್ಲಿ ದೊಡ್ಡ ಬದಲಾವಣೆ: ಪ್ಲೇಯಿಂಗ್ XI ನಲ್ಲಿ ಅಚ್ಚರಿಯ ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ (IPL 2023) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ತಯಾರಿ ಆರಂಭಿಸಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿದ್ದು ಎಲ್ಲ ಫ್ರಾಂಚೈಸಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಪ್ಲೇಯರ್ಸ್ ಆಗಿದ್ದಾರೆ. ಹೀಗಿರುವಾಗ ಐಪಿಎಲ್ 2023 ಟೂರ್ನಿಯಲ್ಲಿ ಬಿಸಿಸಿಐ (BCCI) ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಐಪಿಎಲ್ ಮುಂದಿನ ಸೀಸನ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ಬಿಸಿಸಿಐ ಪ್ರಯೋಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಈ ರೂಲ್ ತರಲು ಮುಂದಾಗಿದೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ:

ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಆಟದ ನಡುವೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆ. ಈ ನಿಯಮ ಭಾರತಕ್ಕೆ ಹೊಸದಾಗಿದ್ದರೂ ಕ್ರಿಕೆಟ್ ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಈ ಹಿಂದೆ ಬಿಗ್​ಬ್ಯಾಶ್ ಟಿ20 ಲೀಗ್​​ನಲ್ಲಿ ಕೂಡ ಇದನ್ನು ಅಳವಡಿಸಲಾಗಿತ್ತು. ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಮಧ್ಯೆ ಬದಲಿಬಹುದು. ಹಾಗಂತ ಈ ನಿಯಮವನ್ನು ಬಳಸಲೇಬೇಕೆಂದಿಲ್ಲ. ಈ ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.

ಇದನ್ನೂ ಓದಿ
IND vs BAN 1st ODI: ಏಕದಿನದ ಗುಂಗಿನಲ್ಲಿ ಟೀಮ್ ಇಂಡಿಯಾ ಆಟಗಾರರು: ಇಂದು ಢಾಕಾದಲ್ಲಿ ಮೊದಲ ಅಭ್ಯಾಸ ಸೆಷನ್
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
Ben Stokes: ನಿವೃತ್ತಿಯಿಂದ ಯು-ಟರ್ನ್​: ವಿಶ್ವಕಪ್​ಗಾಗಿ ಬೆನ್​ ಸ್ಟೋಕ್ಸ್​ ಕಂಬ್ಯಾಕ್?
IPL 2023: ಐಪಿಎಲ್ ಮಿನಿ ಹರಾಜಿಗಾಗಿ ಹೆಸರು ನೀಡಿದ 991 ಆಟಗಾರರು..!

ಈ ನಿಯಮದ ಪ್ರಕಾರ, ಪ್ರತಿ ತಂಡವು ಟಾಸ್ ಪ್ರಕ್ರಿಯೆ ವೇಳೆ ಪ್ಲೇಯಿಂಗ್ ಇಲೆವೆನ್ ಹೆಸರಿಸುವಾಗ ಹೆಚ್ಚುವರಿ 4 ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಅಂದರೆ ಟಾಸ್ ಸಮಯದಲ್ಲೇ ಒಟ್ಟು 11+4 ಆಟಗಾರರ ಹೆಸರನ್ನು ಘೋಷಿಸಬೇಕು. ಪಂದ್ಯ ಆರಂಭದ ನಂತರ ತಂಡಗಳು ಈ 4 ಆಟಗಾರರಲ್ಲಿ ಯಾರನ್ನಾದರೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇಲ್ಲೂ ಒಂದು ನಿಯಮವಿದೆ. ಇನಿಂಗ್ಸ್​ನ 14ನೇ ಓವರ್​ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನಂತರ ಈ ಆಯ್ಕೆಯನ್ನು ಬಳಸುವಂತಿಲ್ಲ.

Rishabh Pant: ರಿಷಭ್ ಪಂತ್​​ಗೆ ಗಾಯ: ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್​?

ಪ್ಲೇಯಿಂಗ್ XI ಒಬ್ಬ ಪ್ಲೇಯರ್ ಹೊರಕ್ಕೆ:

ಇಲ್ಲಿ ಬದಲಿ ಆಟಗಾರನಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಿದರೆ, ಒಬ್ಬ ಆಟಗಾರ ಹೊರಹೋಗಬೇಕಾಗುತ್ತದೆ. ಅಂತೆಯೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಬದಲಿ ಫೀಲ್ಡರ್, ರನ್ನರ್ ಆಗಿಯೂ ಕೂಡ ಕಣಕ್ಕಿಳಿಯಲು ಅವಕಾಶ ಇರುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಓವರ್‌ನ ಮಧ್ಯದಲ್ಲಿ ಕೂಡ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶವಿಲ್ಲ. ಒಂದು ವೇಳೆ ಆಟಗಾರನೊಬ್ಬ ಗಾಯಗೊಂಡರೆ ಈ ಆಯ್ಕೆಯನ್ನು ಬಳಸಿಕೊಳ್ಳಬಹುದಷ್ಟೆ.

ಇಂಪ್ಯಾಕ್ಟ್ ಪ್ಲೇಯರ್ ಏನು ಮಾಡಬಹುದು?:

ಬ್ಯಾಟಿಂಗ್ ತಂಡವು ವಿಕೆಟ್ ಕಳೆದುಕೊಂಡ ಸಂದರ್ಭ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಬಹುದು. ಹೀಗೆ ಕಣಕ್ಕಿಳಿದ ಆಟಗಾರನಿಗೆ ಪ್ಲೇಯಿಂಗ್​ XI ನಲ್ಲಿದ್ದ ಆಟಗಾರರಷ್ಟೇ ಅಧಿಕಾರ ಇರುತ್ತದೆ. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್​ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ. ಇದಾಗ್ಯೂ ಮಳೆ ಬಂದು ಅಥವಾ ಇತರೆ ಕಾರಣಗಳಿಂದ 10 ಓವರ್​ಗಳಿಗೆ ಸೀಮಿತವಾಗಿರುವ ಪಂದ್ಯಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:45 am, Fri, 2 December 22