RCB ಅಭಿಮಾನಿಗಳಿಗೆ ಬಿಗ್ ಶಾಕ್: ಕೋವಿಡ್​ ನಿಯಮ ಜಾರಿ ಸಾಧ್ಯತೆ..!

| Updated By: ಝಾಹಿರ್ ಯೂಸುಫ್

Updated on: Apr 05, 2023 | 4:46 PM

IPL 2023 Kannada: ರಾಜ್ಯದಲ್ಲಿ ಕೋವಿಡ್ ಏರಿಕೆ ಮಧ್ಯೆ ಈ ಬೆಳವಣಿಗೆ ಕೂಡ ಕೊರೋನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕ ಮೂಡಿಸಿದೆ.

RCB ಅಭಿಮಾನಿಗಳಿಗೆ ಬಿಗ್ ಶಾಕ್: ಕೋವಿಡ್​ ನಿಯಮ ಜಾರಿ ಸಾಧ್ಯತೆ..!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ತವರು ಮೈದಾನಗಳಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಅಭಿಮಾನಿಗಳು ಕೂಡ ಸ್ಟೇಡಿಯಂಗೆ ಆಗಮಿಸಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಇತ್ತ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರು ಗುಂಪು ಸೇರುತ್ತಿರುವುದು ಇದೀಗ ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇದೇ ಕಾರಣದಿಂದಾಗಿ ಇದೀಗ ಕ್ರೀಡಾಂಗಣಗಳಲ್ಲಿ ಪ್ರತ್ಯೇಕ ಕೋವಿಡ್ ನಿಯಮಗಳನ್ನು ಜಾರಿಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಗುಂಪೂಗೂಡುವಿಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಚಿಂತನೆ:

ದೇಶ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಚುನಾವಣೆಯ ಕಾವು ಒಂದು ಕಡೆ ರಂಗೇರಿದರೆ ಮತ್ತೊಂದು ಕಡೆ ಐಪಿಎಲ್ ಹವಾ ಕೂಡ ಜೋರಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು.

ಇದನ್ನೂ ಓದಿ
IPL Records: ಧೋನಿ ಬೆಸ್ಟ್ ಫಿನಿಶರ್ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ
IPL 2023: ಭರ್ಜರಿ ದಾಖಲೆ ನಿರ್ಮಾಣ: ಐಪಿಎಲ್​ ಅಂಗಳದಲ್ಲಿ ಹೊಸ ಕ್ರಿಸ್ ಗೇಲ್
IPL 2023: RCB ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಬ್ಯಾಟ್ಸ್​ಮನ್ ಐಪಿಎಲ್​ನಿಂದ ಔಟ್
Virat Kohli Record: ಮೊದಲ ಪಂದ್ಯದಲ್ಲೇ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಏಪ್ರಿಲ್ 2 ರಂದು ನಡೆದಿದ್ದ ಈ ಪಂದ್ಯದ ವೀಕ್ಷಣೆಗೆ 35 ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ಈ ವೇಳೆ ಯಾವುದೇ ಕೊರೋನಾ ನಿಯಮಗಳು ಪಾಲನೆಯಾಗಿಲ್ಲ. ರಾಜ್ಯದಲ್ಲಿ ಕೋವಿಡ್ ಏರಿಕೆ ಮಧ್ಯೆ ಈ ಬೆಳವಣಿಗೆ ಕೂಡ ಕೊರೋನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಟೇಡಿಯಂಗಳಿಗೆ ಪ್ರತ್ಯೇಕ ರೂಲ್ಸ್ ಜಾರಿಗೆ ಜಾರಿ ಮಾಡಲು ಚಿಂತನೆ ನಡೆಸಿದೆ.

ಬೆಂಗಳೂರಿನ ಕೋವಿಡ್ ಪ್ರಕರಣಗಳ ಸಂಖ್ಯೆ:

  • 29 ಮಾರ್ಚ್ – 75 ಕೊರೋನಾ ಕೇಸ್
  • 30 ಮಾರ್ಚ್ – 143 ಕೊರೋನಾ ಕೇಸ್
  • 31 ಮಾರ್ಚ್ – 170 ಕೊರೋನಾ ಕೇಸ್
  • 1 ಏಪ್ರಿಲ್ – 146 ಕೊರೋನಾ‌ ಕೇಸ್
  • 2 ಏಪ್ರಿಲ್ – 170 ಕೊರೋನಾ ಕೇಸ್
  • 3 ಏಪ್ರಿಲ್ – 109 ಕೊರೋನಾ ಕೇಸ್

ಅಂದರೆ ಕಳೆದ 5 ದಿನಗಳಲ್ಲಿ ಪ್ರತಿದಿನ 100 ಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇತ್ತ ಸ್ಟೇಡಿಯಂನಲ್ಲಿ ಕೊರೋನಾ ನಿಯಮ ಪಾಲನೆಯಾಗದಿರುವ ಕಾರಣ ಈ ಸಂಖ್ಯೆಯು ಮುಂಬರುವ ಮತ್ತಷ್ಟು ಹೆಚ್ಚಳವಾಗುವ ಆತಂಕದಲ್ಲಿದೆ ಆರೋಗ್ಯ ಇಲಾಖೆ.

“ಕಳೆದ ಬಾರಿ ಕೋವಿಡ್ ಇರುವ ಕಾರಣದಿಂದಾಗಿ ಕ್ರೀಡಾಂಗಣಗಳಿಗೆ ಒಂದಷ್ಟು ನಿಯಮಗಳನ್ನು ಜಾರಿ ಮಾಡಲಾಗಿತ್ತು. ಕೋವಿಡ್ ಕಡಿಮೆ ಆದ ಮೇಲೆ ಅದನ್ನ ತೆರವು ಮಾಡಿದ್ದರು. ಈಗ ದೇಶದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಹಾಗೆಯೇ ರಾಜ್ಯದಲ್ಲೂ ದಿನಕ್ಕೆ 200 ರ ಸನಿಹಕ್ಕೆ ಪ್ರಕರಣಗಳು ದಾಖಲಾಗುತ್ತಿವೆ.ಈ ನಿಟ್ಟಿನಲ್ಲಿ ಕ್ರೀಡಾಂಗಣಗಳಲ್ಲಿ ಕೋವಿಡ್ ನಿಯಮ ಜಾರಿ ಮಾಡಲು ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆಯಲು ಮುಂದಾಗಿದ್ದೇವೆ” ಎಂದು ಆರೋಗ್ಯ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ.

ಯಾವ ನಿಯಮ ಜಾರಿಯಾಗಬಹುದು?

  1.  ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ಕಡ್ಡಾಯ ವ್ಯಾಕ್ಸಿನೇಷನ್‌
  2.  ಕ್ರೀಡಾಂಗಣಗಳನ್ನ ಸ್ಯಾನಿಟೇಸ್ ಮಾಡಬೇಕು
  3.  ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು
  4. ಕ್ರೀಡಾಂಗಣಗಳಲ್ಲಿ ಕೊವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು
  5. ಎಂಟ್ರಿ ಗೇಟ್ ಗಳಲ್ಲಿ ಸ್ಯಾನಿಟೇಸ್ ವ್ಯವಸ್ಥೆ .
  6.  ಕೊರೋನಾ ಪ್ರಕರಣ ಹೆಚ್ಚಾದರೆ ಮತ್ತಷ್ಟು ಕಠಿಣ ನಿಯಮ ಜಾರಿ

ಒಟ್ಟಾರೆ ಕೋವಿಡ್ ಪ್ರಕರಣಗಳ ಏರಿಕೆ ಮಧ್ಯೆಯು ಕ್ರಿಕೆಟ್​ ಪ್ರೇಮಿಗಳು ಸ್ಟೇಡಿಯಂನಲ್ಲೇ ಐಪಿಎಲ್​ ಅನ್ನು ನಿರ್ಭೀತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ಪರಿಸ್ಥಿತಿ ಕೈ ತಪ್ಪುವ ಮುನ್ನವೇ ಕ್ರೀಡಾಂಗಣಗಳಲ್ಲಿ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಏಪ್ರಿಲ್ 10 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ವೇಳೆ ಈ ನಿಯಮ ಜಾರಿಗೆ ಬರಲಿದೆಯಾ ಕಾದು ನೋಡಬೇಕಿದೆ.

ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು