IPL 2023: ಐಪಿಎಲ್​ನಲ್ಲಿ ಸೋಲುಗಳ ಸರದಾರ ಕಿಂಗ್​ ಕೊಹ್ಲಿ! ಹೆಚ್ಚು ಗೆಲುವು ಯಾರ ಹೆಸರಲ್ಲಿದೆ ಗೊತ್ತಾ?

|

Updated on: Apr 07, 2023 | 4:44 PM

IPL 2023: ವಾಸ್ತವವಾಗಿ ಕಿಂಗ್ ಕೊಹ್ಲಿ ಐಪಿಎಲ್​ನ ಮೊದಲ ಸೀಸನ್​ನಿಂದಲೂ ಆಡುತ್ತಿದ್ದಾರೆ. ಆದರೆ ಕೊಹ್ಲಿ ಈ ಟೂರ್ನಿಯಲ್ಲಿ ಗೆಲುವು ಕಂಡಿದ್ದಕ್ಕಿಂತ ಸೋಲನ್ನೇ ಹೆಚ್ಚಾಗಿ ಅನುಭವಿಸಿದ್ದಾರೆ.

IPL 2023: ಐಪಿಎಲ್​ನಲ್ಲಿ ಸೋಲುಗಳ ಸರದಾರ ಕಿಂಗ್​ ಕೊಹ್ಲಿ! ಹೆಚ್ಚು ಗೆಲುವು ಯಾರ ಹೆಸರಲ್ಲಿದೆ ಗೊತ್ತಾ?
ವಿರಾಟ್ ಕೊಹ್ಲಿ
Follow us on

ಫಾಫ್ ಡು ಪ್ಲೆಸಿಸ್ (Faf du Plessis) ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ (Royal Challengers Bangalore vs Kolkata Knight Riders) ವಿರುದ್ಧ ಹೀನಾಯವಾಗಿ ಸೋತಿತ್ತು. ಬೆಂಗಳೂರು ತಂಡ ಕೇವಲ 123 ರನ್‌ಗಳಿಗೆ ಆಲೌಟ್ ಆಯಿತು. ಕಳಪೆ ಆರಂಭದ ಹೊರತಾಗಿಯೂ ಕೋಲ್ಕತ್ತಾ 204 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರ ವಿರುದ್ಧ ಬೆಂಗಳೂರು ತಂಡ 81 ರನ್‌ಗಳಿಂದ ಸೋಲನುಭವಿಸಿತು. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿ ಇನ್ನೊಂದು ಬೇಡದ ದಾಖಲೆಯೊಂದು ಸೃಷ್ಟಿಯಾಗಿದೆ. ವಾಸ್ತವವಾಗಿ ಕಿಂಗ್ ಕೊಹ್ಲಿ ಐಪಿಎಲ್​ನ (IPL) ಮೊದಲ ಸೀಸನ್​ನಿಂದಲೂ ಆಡುತ್ತಿದ್ದಾರೆ. ಆದರೆ ಕೊಹ್ಲಿ ಈ ಟೂರ್ನಿಯಲ್ಲಿ ಗೆಲುವು ಕಂಡಿದ್ದಕ್ಕಿಂತ ಸೋಲನ್ನೇ ಹೆಚ್ಚಾಗಿ ಅನುಭವಿಸಿದ್ದಾರೆ. ಅಂದರೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಸೋಲುಗಳನ್ನು ಎದುರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್

ಕೊಹ್ಲಿ ನಂತರ ಈ ದಾಖಲೆಯಲ್ಲಿ ದಿನೇಶ್ ಕಾರ್ತಿಕ್ ಎರಡನೇ ಸ್ಥಾನದಲ್ಲಿದ್ದಾರೆ. ಕಾರ್ತಿಕ್ ಆರ್​ಸಿಬಿ ಸೇರುವ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು. ಇದುವರೆಗೆ ಕೊಹ್ಲಿ ಐಪಿಎಲ್​ನಲ್ಲಿ 111 ಸೋಲುಗಳನ್ನು ಎದರುಸಿದ್ದರೆ, ಎರಡನೇ ಸ್ಥಾನದಲ್ಲಿರುವ ಕಾರ್ತಿಕ್ ಇದುವರೆಗೆ 109 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಕಾರ್ತಿಕ್ ಬೆಂಗಳೂರು ಈ ಹಿಂದೆ ಕೋಲ್ಕತ್ತಾ, ದೆಹಲಿ ಮತ್ತು ಗುಜರಾತ್ ತಂಡಗಳ ಪರ ಐಪಿಎಲ್ ಆಡಿದ್ದಾರೆ.

IPL 2023: ಆರಂಭಿಕರೇ ಆರ್​ಸಿಬಿ ಜೀವಾಳ; ಈ ಭಾರತೀಯನನ್ನು ಹೊರಗಿಡಿ ಎಂದ ಸೆಹ್ವಾಗ್!

ಈ ಇಬ್ಬರ ನಂತರ ಮೂರನೇ ಸ್ಥಾನದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಇದ್ದಾರೆ. ಉತ್ತಪ್ಪ ಒಟ್ಟು 106 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದ್ದಾರೆ. ರಾಬಿನ್ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ಭಾಗವಾಗಿದ್ದರು. ಈ ಪಟ್ಟಿಯಲ್ಲಿ ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಸೇರಿದ್ದು, ರೋಹಿತ್ ಶರ್ಮಾ 103 ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದ್ದರೆ, ಧೋನಿ 99 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

ಧೋನಿ ಹೆಸರಲ್ಲಿ ಹೆಚ್ಚು ಗೆಲುವು

ಇದು ಸೋಲಿನ ವಿಷಯವಾಗಿದ್ದರೆ, ಇನ್ನು ಯಾವ ಆಟಗಾರ ಹೆಚ್ಚು ಗೆಲುವು ಸಾಧಿಸಿದ್ದಾರೆ ಎಂಬುದನ್ನು ನೋಡುವುದಾದರೆ, ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಧೋನಿ ಆಟಗಾರನಾಗಿ ಒಟ್ಟು 136 ಪಂದ್ಯಗಳನ್ನು ಗೆದ್ದಿದ್ದಾರೆ. ಎರಡನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದು, ಅವರು ಕೂಡ 122 ಗೆಲುವುಗಳನ್ನು ಅನುಭವಿಸಿದ್ದಾರೆ. ಸದ್ಯ ಎರಡನೇ ಸ್ಥಾನದಲ್ಲಿರುವ ರೈನಾ ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಕುಸಿಯಲ್ಲಿದ್ದಾರೆ. ಏಕೆಂದರೆ ರೈನಾ ಹಿಂದಿರುವ ರೋಹಿತ್ ಶರ್ಮಾ ಅವರಿಗಿಂತ ಒಂದು ಪಂದ್ಯ ಹಿಂದಿದ್ದಾರೆ. ರೋಹಿತ್ ಒಟ್ಟು 121 ಪಂದ್ಯಗಳನ್ನು ಗೆದ್ದಿದ್ದಾರೆ.

ಹೀಗಾಗಿ ರೋಹಿತ್ ಈಗ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆಯುವ ಅವಕಾಶ ಹೊಂದಿದ್ದಾರೆ. ಇನ್ನು ಮತ್ತೊಬ್ಬ ಸಿಎಸ್​ಕೆ ಆಟಗಾರ ರವೀಂದ್ರ ಜಡೇಜಾ 119 ಪಂದ್ಯಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಸೋಲುಗಳನ್ನು ಎದುರಿಸಿದ ಆಟಗಾರನ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕಾರ್ತಿಕ್ 117 ಪಂದ್ಯಗಳ ಗೆಲುವಿನೊಂದಿಗೆ ಗೆಲುವಿನ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Fri, 7 April 23