LSG vs SRH Highlights IPL 2023: ಹೈದರಾಬಾದ್ಗೆ ಸತತ 2ನೇ ಸೋಲು; ತವರಿನಲ್ಲಿ ಗೆದ್ದ ಲಕ್ನೋ
Lucknow Super Giants vs Sunrisers Hyderabad IPL 2023 Highlights in Kannada: ಲಕ್ನೋ ಸೂಪರ್ ಜೈಂಟ್ಸ್ ತವರು ನೆಲದಲ್ಲಿ ಹೈದರಾಬಾದ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಸತತ ಎರಡನೇ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಲಕ್ನೋ ಮೊದಲ ಸ್ಥಾನಕ್ಕೇರಿದೆ.
ಐಪಿಎಲ್‌ನ ಹೊಸ ಸೀಸನ್ ಆರಂಭವಾಗಿ ಒಂದು ವಾರ ಕಳೆದರೂ ಕಳೆದ ಸೀಸನ್‌ನ ವೈಫಲ್ಯದಿಂದ ಹೊರಬರಲು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ತನ್ನ ಎರಡನೇ ಪಂದ್ಯದಲ್ಲೂ ಸೋಲು ಕಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತವರು ನೆಲದಲ್ಲಿ ಹೈದರಾಬಾದ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಸತತ ಎರಡನೇ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಲಕ್ನೋ ಮೊದಲ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ಲಕ್ನೋ ಸ್ಪಿನ್ನರ್ಗಳ ಮುಂದೆ ಮಂಡಿಯೂರಿತು. ತಂಡದ ಯಾವ ಬ್ಯಾಟರ್ ಕೂಡ ಅಬ್ಬರದ ಬ್ಯಾಟಿಂಗ್ ಮಾಡಲಿಲ್ಲ. ತಂಡದ ಪರ ರಾಹುಲ್ ತ್ರಿಪಾಠಿ ಅತ್ಯಧಿಕ 32 ರನ್ ಬಾರಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭ ಪಡೆಯುವುದರೊಂದಿಗೆ ಗೆಲುವಿಗೆ ಅಡಿಪಾಯ ಹಾಕಿತು. ತಂಡದ ಪರ ನಾಯಕ ರಾಹುಲ್ 35 ರನ್ ಬಾರಿಸಿದರೆ, ಆಲ್ರೌಂಡರ್ ಕೃನಾಲ್ ಪಾಂಡ್ಯ 34 ರನ್ ಬಾರಿಸಿದರು.
LIVE NEWS & UPDATES
-
ಲಕ್ನೋಗೆ ಸುಲಭ ಗೆಲುವು
16ನೇ ಓವರ್‌ನ ಕೊನೆಯ ಎಸೆತದಲ್ಲಿ ನಿಕೋಲಸ್ ಪೂರನ್ ಅವರು ಟಿ ನಟರಾಜನ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್‌ಗಳಿಂದ ಪಂದ್ಯದಲ್ಲಿ ಜಯಗಳಿಸಿತು.
-
ಒಂದೇ ಓವರ್‌ನಲ್ಲಿ 2 ವಿಕೆಟ್
ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ ನಂತರ, ಆದಿಲ್ ರಶೀದ್ ಮುಂದಿನ ಎಸೆತದಲ್ಲಿ ರೊಮಾರಿಯೊ ಶೆಫರ್ಡ್‌ರನ್ನು ಎಲ್‌ಬಿಡಬ್ಲ್ಯು ಔಟ್ ಮಾಡಿದರು.
-
ರಾಹುಲ್ ಔಟ್
15ನೇ ಓವರ್‌ನ ಮೊದಲ ಎಸೆತದಲ್ಲಿ ರಶೀದ್ ಕೆಎಲ್ ರಾಹುಲ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ರಾಹುಲ್ 35 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಮೂರನೇ ವಿಕೆಟ್ ಪತನ
ಲಕ್ನೋ ಮೂರನೇ ವಿಕೆಟ್ ಪತನವಾಗಿದೆ. ಉಮ್ರಾನ್ ಮಲಿಕ್ ಓವರ್‌ನಲ್ಲಿ ಕೃನಾಲ್ ಪಾಂಡ್ಯ 34 ರನ್ ಗಳಿಸಿ ಔಟಾದರು, ಲಕ್ನೋ ಗೆಲುವು ಬಹುತೇಕ ಖಚಿತವಾಗಿದೆ.
ಕೃನಾಲ್ ಪಾಂಡ್ಯ ಉತ್ತಮ ಬ್ಯಾಟಿಂಗ್
ನಾಯಕ ರಾಹುಲ್ 31 ರನ್ ಹಾಗೂ ಕೃನಾಲ್ ಪಾಂಡ್ಯ 28 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಲಕ್ನೋ ಸ್ಕೋರ್ 91/2. ಲಕ್ನೋ ಗೆಲುವಿಗೆ 54 ಎಸೆತಗಳಲ್ಲಿ 31 ರನ್ ಅಗತ್ಯವಿದೆ
9 ಓವರ್‌ಗಳ ನಂತರ ಲಕ್ನೋ ಸ್ಕೋರ್ 72/2
ನಾಯಕ ರಾಹುಲ್ 30 ರನ್ ಹಾಗೂ ಕೃನಾಲ್ ಪಾಂಡ್ಯ 15 ರನ್ ಗಳಿಸಿ ಆಡುತ್ತಿದ್ದಾರೆ. 9 ಓವರ್‌ಗಳ ನಂತರ ಲಕ್ನೋ ಸ್ಕೋರ್ 72/2. ಲಕ್ನೋ ಗೆಲುವಿಗೆ 66 ಎಸೆತಗಳಲ್ಲಿ 50 ರನ್ ಅಗತ್ಯವಿದೆ
ಕೃನಾಲ್ ಬೌಂಡರಿ
8ನೇ ಓವರ್ ಎಸೆದ ನಾಯಕ ಮಾರ್ಕ್ರಾಮ್ ಈ ಓವರ್‌ನಲ್ಲಿ 8 ರನ್ ನೀಡಿದರು. ಓವರ್‌ನ 2ನೇ ಎಸೆದಲ್ಲಿ ಕೃನಾಲ್ ಡೀಪ್ ಕವರ್ ಕಡೆ ಬೌಂಡರಿ ಬಾರಿಸಿದರು.
ಹೂಡಾ ಸಿಕ್ಸರ್, ಔಟ್
ಪವರ್ ಪ್ಲೇನ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಹೂಡಾ ಸ್ಟ್ರೈಟ್ ಹಿಡ್ ಮಾಡಿ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಅಂತಿಮ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಮೊದಲ ವಿಕೆಟ್ ಪತನ
ಲಕ್ನೋದ ಮೊದಲ ವಿಕೆಟ್ ಪತನವಾಗಿದೆ. 13 ರನ್‌ಗಳಿಸಿ ಆಡುತ್ತಿದ್ದ ಮೇಯರ್ಸ್ ಡೀಪ್ ಕವರ್ ಪಾಯಿಂಟ್ನಲ್ಲಿ ಕ್ಯಾಚಿತ್ತು ಔಟಾದರು. ಲಕ್ನೋ ಸ್ಕೋರ್ 4.3 ಓವರ್‌ಗಳಲ್ಲಿ 34/1
ಮೇಯರ್ಸ್ ಬೌಂಡರಿ
3ನೇ ಓವರ್‌ನಲ್ಲಿ ರನ್ಗಳಿಗೆ ಕಡಿವಾಣ ಹಾಕಿದ್ದ ಫಾರೂಕಿ 5ನೇ ಎಸೆತದಲ್ಲಿ ಬೌಂಡರಿ ನೀಡಿದರು. ಮೇಯರ್ಸ್ ಲೆಗ್ ಸ್ಲಿಪ್ನಲ್ಲಿ ಈ ಬೌಂಡರಿ ಹೊಡೆದರು.
2 ಬೌಂಡರಿ
2 ಓವರ್‌ಗಳ ನಂತರ ಲಕ್ನೋ ಸ್ಕೋರ್ 24/0. ಮೊದಲ ಎಸೆತದಲ್ಲಿ ನಾಯಕ ರಾಹುಲ್ ಬೌಂಡರಿ ಬಾರಿಸಿದರೆ, 5ನೇ ಎಸೆತದಲ್ಲಿ ಆಲ್ ರೌಂಡರ್ ಮೈಯರ್ಸ್ ಫೋರ್ ಹೊಡೆದರು.
ಲಕ್ನೋ ಬ್ಯಾಟಿಂಗ್ ಆರಂಭ
ಕೆಎಲ್ ರಾಹುಲ್ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಖಾತೆ ತೆರೆದರು.
122 ರನ್ ಟಾರ್ಗೆಟ್
ಲಕ್ನೋ ಸ್ಪಿನ್ನರ್ಗಳ ಹಾವಳಿಗೆ ತತ್ತರಿಸಿದ ಹೈದರಾಬಾದ್ ಕೇವಲ 122 ರನ್ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ತ್ರಿಪಾಠಿ ಅತ್ಯಧಿಕ 32 ರನ್ ಬಾರಿಸಿದರೆ, ಅಂತ್ಯದಲ್ಲಿ ಬಂದ ಸಮದ್ 21 ರನ್ಗಳ ಕೊಡುಗೆ ನೀಡಿದರು.
ಮತ್ತೊಂದು ವಿಕೆಟ್, 108/7
ಸುಂದರ್ ವಿಕೆಟ್ ಬಳಿಕ ಬಂದ ರಶೀದ್ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ನಂತರದ ಎಸೆತದಲ್ಲಿ ಬಿಗ್ ಶಾಟ್ ಆಡಲು ಪ್ರಯತ್ನಿಸಿ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಮಿಶ್ರಾಗೆ 1ನೇ ವಿಕೆಟ್
19ನೇ ಓವರ್ ಬೌಲ್ ಮಾಡಲು ಬಂದ ಮಿಶ್ರಾ 2ನೇ ಎಸೆತದಲ್ಲಿ ಸುಂದರ್ ವಿಕೆಟ್ ಉರುಳಿಸಿದರು. ಸಿಕ್ಸರ್ ಬಾರಿಸುವ ಯತ್ನದಲ್ಲಿ ಸುಂದರ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ರಾಹುಲ್ ತ್ರಿಪಾಠಿ ಔಟ್
ಹೈದರಾಬಾದ್ ಪರ ಕೊಂಚ ಹೋರಾಟದ ಇನ್ನಿಂಗ್ಸ್ ಆಡಿದ ರಾಹುಲ್ ತ್ರಿಪಾಠಿ 41 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.
17 ಓವರ್ ಅಂತ್ಯ
17ನೇ ಓವರ್‌ನಲ್ಲಿ 8 ರನ್ ಬಂದವು. ಈ ಓವರ್‌ನ 5ನೇ ಎಸೆತವನ್ನು ರಿವರ್ ಸ್ವಿಪ್ ಮಾಡಿದ ತ್ರಿಪಾಠಿ ಅಗತ್ಯ ಬೌಂಡರಿ ಬಾರಿಸಿದರು.
ತ್ರಿಪಾಠಿ ಬೌಂಡರಿ
15ನೇ ಓವರ್ ಎಸೆಯಲು ಬಂದ ಅಮಿತ್ ಮಿಶ್ರಾ ತಮ್ಮ ಕೊನೆಯ ಎಸೆತದಲ್ಲಿ ಬೌಂಡರಿ ತಿಂದರು. ತ್ರಿಪಾಠಿ ಸ್ಟ್ರೈಟ್ ಹಿಟ್ ಮಾಡಿ ಬೌಂಡರಿ ಪಡೆದರು.
14 ಓವರ್‌ಗಳ ನಂತರ 76/4
14 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 76/4. ಸುಂದರ್ 9 ರನ್ ಮತ್ತು ರಾಹುಲ್ ತ್ರಿಪಾಠಿ 22 ರನ್‌ಗಳಿಸಿ ಆಡುತ್ತಿದ್ದಾರೆ.
ಬೌಂಡರಿ ಬರುತ್ತಿಲ್ಲ
ಹೈದರಾಬಾದ್ ಇನ್ನಿಂಗ್ಸ್ನ 12 ಓವರ್ ಮುಗಿದಿದ್ದು,ತಂಡದ ಪರ ಸುಂದರ್ ಹಾಗೂ ರಾಹುಲ್ ನಿಧಾನಗತಿಯ ಆಟಕ್ಕೆ ಮುಂದಾಗಿದ್ದಾರೆ. 12 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 69/4
10 ಓವರ್ ಆಟ ಅಂತ್ಯ
ಹೈದರಾಬಾದ್ ಸ್ಥಿತಿ ಹದಗೆಟ್ಟಿದೆ. ತಂಡದ 10 ಓವರ್‌ಗಳ ಇನ್ನಿಂಗ್ಸ್ ಮುಗಿದಿದ್ದು, ಸುಂದರ್ 2 ರನ್ ಮತ್ತು ರಾಹುಲ್ ತ್ರಿಪಾಠಿ 18 ರನ್‌ಗಳಿಸಿ ಆಡುತ್ತಿದ್ದಾರೆ.ಹೈದರಾಬಾದ್ 10 ಓವರ್‌ಗಳ ನಂತರ 64/4 ಸ್ಕೋರ್.
ನಾಲ್ಕನೇ ವಿಕೆಟ್ ಪತನ
ಸನ್‌ರೈಸರ್ಸ್ ಹೈದರಾಬಾದ್‌ನ ನಾಲ್ಕನೇ ವಿಕೆಟ್ ಪತನವಾಗಿದ್ದು, ರವಿ ಬಿಷ್ಣೋಯ್ ಅವರ ಓವರ್‌ನಲ್ಲಿ ಬ್ರೂಕ್ 3 ರನ್ ಗಳಿಸಿ ರನೌಟ್ ಆದರು. 9 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 55/4
ನಾಯಕ ಔಟ್
ಸನ್‌ರೈಸರ್ಸ್ ಹೈದರಾಬಾದ್‌ನ ಮೂರನೇ ವಿಕೆಟ್ ಪತನವಾಗಿದ್ದು, ಕೃನಾಲ್ ಪಾಂಡ್ಯ ಸತತ ಎರಡನೇ ಎಸೆತದಲ್ಲಿ ತಮ್ಮ 2ನೇ ವಿಕೆಟ್ ಉರುಳಿಸಿದರು. ಹೈದರಾಬಾದ್ ತಂಡದ ನಾಯಕ ಮೊದಲ ಎಸೆತದಲ್ಲಿ ಔಟಾದರು. 8 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 50/3
ಎರಡನೇ ವಿಕೆಟ್ ಪತನ
ಸನ್‌ರೈಸರ್ಸ್ ಹೈದರಾಬಾದ್‌ನ ಎರಡನೇ ವಿಕೆಟ್ ಕಳೆದುಕೊಂಡಿದೆ. ಕೃನಾಲ್ ಎಸೆದ 8ನೇ ಓವರ್‌ನಲ್ಲಿ ಅನ್ಮೋಲ್ಪ್ರೀತ್ 31 ರನ್ ಗಳಿಸಿ ಔಟಾದರು.
ನಿಧಾನಗತಿಯ ಬ್ಯಾಟಿಂಗ್
ಆರಂಭಿಕ ಆಘಾತ ಅನುಭವಿಸಿದ ಹೈದರಾಬಾದ್ ನಿಧಾನಗತಿಯ ಬ್ಯಾಟಿಂಗ್ಗೆ ಮುಂದಾಗಿದೆ. ತಂಡದ ಪರ ರಾಹುಲ್ ತ್ರಿಪಾಠಿ 8 ಮತ್ತು ಅನ್ಮೋಲ್‌ಪ್ರೀತ್ ಸಿಂಗ್ 30 ರನ್‌ಗಳೊಂದಿಗೆ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 48/1
ಪವರ್ ಪ್ಲೇ ಅಂತ್ಯ
ರಾಹುಲ್ ತ್ರಿಪಾಠಿ 7 ರನ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ 27 ರನ್‌ಗಳೊಂದಿಗೆ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 43/1. ಈ ಓವರ್‌ನಲ್ಲಿ 1 ಫೋರ್ ಕೂಡ ಬಂತು.
ಅನ್ಮೋಲ್‌ಪ್ರೀತ್ 2 ಬೌಂಡರಿ
ರಾಹುಲ್ ತ್ರಿಪಾಠಿ 2 ರನ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ 22 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಕೃನಾಲ್ ಅವರ ಓವರ್‌ನಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಕೊನೆಯ 2 ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು.
4 ಓವರ್‌ಗಳ ನಂತರ ಲಕ್ನೋ ಸ್ಕೋರ್ 24/1
ರಾಹುಲ್ ತ್ರಿಪಾಠಿ 1 ರನ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ 14 ರನ್‌ಗಳೊಂದಿಗೆ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 24/1
ಮಯಾಂಕ್ ಔಟ್
3ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ಮಯಾಂಕ್ ಅದೇ ಓವರ್‌ನ 5ನೇ ಎಸೆತದಲ್ಲಿ ಕವರ್ ಫಿಲ್ಡರ್ಗೆ ಕ್ಯಾಚಿತ್ತು ಔಟಾದರು.
ಅನ್ಮೋಲ್ಪ್ರೀತ್ ಸಿಂಗ್ ಸಿಕ್ಸರ್
2 ಓವರ್‌ಗಳ ನಂತರ ಲಕ್ನೋ ಸ್ಕೋರ್ 15/0. ಈ ಓವರ್‌ನ ಕೊನೆಯ ಎಸೆತದಲ್ಲಿ ಅನ್ಮೋಲ್ಪ್ರೀತ್ ಸಿಂಗ್ ಸಿಕ್ಸರ್ ಬಾರಿಸಿದರು.
ಹೈದರಾಬಾದ್ ಬ್ಯಾಟಿಂಗ್ ಆರಂಭ
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪೊರ ಮಯಾಂಕ್ ಅಗರ್ವಾಲ್-ಅನ್ಮೋಲ್‌ಪ್ರೀತ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಲಕ್ನೋ ಸೂಪರ್‌ಜೈಂಟ್ಸ್
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್ (ಕೀಪರ್), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್‌ರಾಮ್ (ನಾಯಕ), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರಾನ್ ಮಲಿಕ್, ಆದಿಲ್ ರಶೀದ್.
ಟಾಸ್ ಗೆದ್ದ ಹೈದರಾಬಾದ್
ಟಾಸ್ ಗೆದ್ದ ಹೈದರಾಬಾದ್ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಸೀಸನ್ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವುದು ಇದೇ ಮೊದಲು.
Published On - Apr 07,2023 7:01 PM