AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಪ್ಲೇ ಆಫ್ ಲೆಕ್ಕಾಚಾರ; ಆರ್​ಸಿಬಿ ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ ಇತರ ತಂಡಗಳು..!

IPL 2023 Playoff Qualification: 13 ಪಂದ್ಯಗಳಲ್ಲಿ 14 ಅಂಕಗಳನ್ನು ಸಂಪಾದಿರಸಿರುವ ಆರ್​ಸಿಬಿ ಸತತ ನಾಲ್ಕನೇ ಆವೃತ್ತಿಯಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪುವ ಸನಿಹದಲ್ಲಿದೆ.

IPL 2023: ಪ್ಲೇ ಆಫ್ ಲೆಕ್ಕಾಚಾರ; ಆರ್​ಸಿಬಿ ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ ಇತರ ತಂಡಗಳು..!
ಆರ್​ಸಿಬಿ ತಂಡ
ಪೃಥ್ವಿಶಂಕರ
|

Updated on: May 19, 2023 | 6:04 PM

Share

ಐಪಿಎಲ್ 65ನೇ (IPL 2023) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ (Royal Challengers Bangalore vs Sunrisers Hyderabad) ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದೊಂದಿಗೆ ಬೆಂಗಳೂರು ತನ್ನ ಪ್ಲೇ ಆಫ್ ಸ್ಥಾನವನ್ನು ಇನ್ನಷ್ಟು ಅನುಕೂಲಕರವಾಗಿಸಿದೆ. ಐಪಿಎಲ್‌ನಲ್ಲಿ ಆರನೇ ಶತಕದೊಂದಿಗೆ ಅದ್ಭುತ ಇನ್ನಿಂಗ್ಸ್‌ ಆಡಿದ ವಿರಾಟ್‌ ಕೊಹ್ಲಿ (Virat Kohli) ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೈದರಾಬಾದ್ ನೀಡಿದ 187 ರನ್‌ಗಳ ಗುರಿಯನ್ನು ಬೆಂಗಳೂರು ತಂಡ 19.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಮಾಜಿ ಆರ್‌ಸಿಬಿ ನಾಯಕ 63 ಎಸೆತಗಳಲ್ಲಿ 100 ರನ್ ಗಳಿಸಿದರೆ, ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಜೊತೆ ಮೊದಲ ವಿಕೆಟ್‌ಗೆ 172 ರನ್ ಹಂಚಿಕೊಂಡರು.

ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಆರ್​ಸಿಬಿ ಈಗ ಅಂಕಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತಲುಪಿದೆ. 13 ಪಂದ್ಯಗಳಲ್ಲಿ 14 ಅಂಕಗಳನ್ನು ಸಂಪಾದಿರಸಿರುವ ಆರ್​ಸಿಬಿ ಸತತ ನಾಲ್ಕನೇ ಆವೃತ್ತಿಯಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪುವ ಸನಿಹದಲ್ಲಿದೆ. ಆದರೆ, ಆರ್‌ಸಿಬಿ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆಗಳು ಅಪಾಯದಲ್ಲಿದೆ.

IPL 2023: ಪ್ಲೇ ಆಫ್​ಗೂ ಮುನ್ನ ಲಕ್ನೋ ತಂಡಕ್ಕೆ ಯುವ ಆಟಗಾರನ ಎಂಟ್ರಿ..!

ಇತರೆ ತಂಡಗಳ ಮೇಲೆ RCB ಪ್ರಭಾವ..

ಚೆನ್ನೈ ಸೂಪರ್ ಕಿಂಗ್ಸ್: ಐಪಿಎಲ್ 2023 ಪಾಯಿಂಟ್ಸ್ ಪಟ್ಟಿಯಲ್ಲಿ ಸಿಎಸ್‌ಕೆ 2ನೇ ಸ್ಥಾನದಲ್ಲಿದೆ. ಶನಿವಾರ (ಮೇ 20) ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದರೆ, ಚೆನ್ನೈಗೆ ಪ್ಲೇ ಆಫ್ ಟಿಕೆಟ್ ಖಚಿತವಾಗಲಿದೆ. ಇಲ್ಲವಾದರೆ, ಲಕ್ನೋ, ಆರ್​ಸಿಬಿ, ಮುಂಬೈ ತಮ್ಮ ಕೊನೆಯ ಪಂದ್ಯವನ್ನು ಗೆದ್ದರೆ, ಚೆನ್ನೈ ಐಪಿಎಲ್​ನಿಂದ ಹೊರಹೋಗುತ್ತದೆ. ಒಂದು ವೇಳೆ ಲಕ್ನೋ, ಆರ್​ಸಿಬಿ, ಮುಂಬೈ ಈ ಮೂರು ತಂಡಗಳಲ್ಲಿ ಒಬ್ಬರು ಸೋತರೆ ಚೆನ್ನೈ ಸುಲಭವಾಗಿ ಪ್ಲೇ ಆಫ್ ಆಡಲಿದೆ.

ಲಕ್ನೋ ಸೂಪರ್‌ಜೈಂಟ್ಸ್: ಎಲ್‌ಎಸ್‌ಜಿ ತಂಡವು ಸಿಎಸ್‌ಕೆಯಂತೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಸನಿಹದಲ್ಲಿದೆ. ಶನಿವಾರ (ಮೇ 20) ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದರೆ ಪ್ಲೇ ಆಫ್​ಗೆ ಲಗ್ಗೆ ಇಡುವುದು ಖಚಿತ. ಇಲ್ಲವಾದಲ್ಲಿ ಕೊನೆಯ ಲೀಗ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಎಲ್​ಎಸ್​ಜಿ ಸೋತು ಈ ಮೂರು ತಂಡಗಳು ಗೆದ್ದರೆ ಎಲ್​ಎಸ್​ಜಿ ಲೀಗ್​ನಿಂದ ಹೊರಬೀಳಲಿದೆ. ಒಂದು ವೇಳೆ ಎಲ್​ಎಸ್​ಜಿ ಸೋತ ನಂತರವೂ ಈ ಮೂರು ತಂಡಗಳಲ್ಲಿ ಒಂದು ತಂಡ ಸೋತರೆ, ಎಲ್​ಎಸ್​ಜಿ ಮೈನಸ್ ರನ್ ರೇಟ್ ಅನ್ನು ಲೆಕ್ಕಿಸದೆ ಪ್ಲೇ ಆಫ್​ಗೆ ಮುನ್ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಭಾನುವಾರ (ಮೇ 21) ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿದರೆ ಆರ್​ಸಿಬಿ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಲಿದೆ. ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ ನಂತರ ಸಿಎಸ್​ಕೆ ಮತ್ತು ಚೆನ್ನೈ ತನ್ನ ಕೊನೆಯ ಪಂದ್ಯವನ್ನು ಸೋತರೆ ಟಾಪ್-2ಗೆ ಎಂಟ್ರಿಕೊಡಲಿದೆ. ಆರ್‌ಸಿಬಿ ಸೋತು ಮುಂಬೈ ಗೆದ್ದರೆ ಆರ್‌ಸಿಬಿ ಲೀಗ್​ನಿಂದ ಹೊರಬೀಳಲಿದೆ. ಮುಂಬೈ ಜೊತೆಗೆ ಆರ್​ಸಿಬಿ ಸಹ ಸೋತರೆ ಮುಂಬೈ ಜೊತೆಗೆ ಇತರ ತಂಡಗಳು ನೆಟ್ ರನ್ ರೇಟ್ ಅನ್ನು ಅವಲಂಬಿಸಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್: ಹೈದರಾಬಾದ್ ವಿರುದ್ಧ ಮುಂಬೈ ಗೆದ್ದರೆ ಎರಡನೇ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ನಾವು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಮುಂಬೈ ಭಾನುವಾರ ಹೈದರಾಬಾದ್ ತಂಡವನ್ನು ಸೋಲಿಸಿದರೆ ಮತ್ತು ಲಕ್ನೋ, ಆರ್​ಸಿಬಿ, ಚೆನ್ನೈ ತಮ್ಮ ಕೊನೆಯ ಪಂದ್ಯಗಳಲ್ಲಿ ಸೋತರೆ, ಮುಂಬೈ ಎರಡನೇ ಸ್ಥಾನಕ್ಕೇರಲಿದೆ. ಆದರೆ, ಈ ಮೂರು ತಂಡಗಳಲ್ಲಿ ಯಾವುದಾದರೂ ಗೆದ್ದರೆ, ಮುಂಬೈ ಅಗ್ರ ಎರಡನೇ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಅಲ್ಲದೆ, ಈ ಮೂರು ತಂಡಗಳು ಗೆದ್ದರೆ, ಮುಂಬೈ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ ಸೋತ ಹೊರತಾಗಿಯೂ, ಆರ್‌ಸಿಬಿ ಹಾಗೂ ಕೆಕೆಆರ್ ತಮ್ಮ ಕೊನೆಯ ಪಂದ್ಯವನ್ನು ಭಾರಿ ಅಂತರದಿಂದ ಕಳೆದುಕೊಂಡರೆ ಪ್ಲೇ ಆಫ್‌ಗೆ ಹೋಗುವ ಅವಕಾಶ ಪಡೆಯಲಿದೆ.

ರಾಜಸ್ಥಾನ್ ರಾಯಲ್ಸ್: ಶುಕ್ರವಾರ (ಮೇ 19) ನಡೆಯಲಿರುವ ತಮ್ಮ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ, ಕೆಕೆಆರ್ ಹಾಗೂ ಪಂಜಾಬ್ ತಂಡಗಳು ಭಾರಿ ಅಂತರದಲ್ಲಿ ಸೋತು, ರಾಜಸ್ಥಾನ್ ಗೆದ್ದರೆ ಎಲಿಮಿನೇಟರ್ ಹೋರಾಟಕ್ಕೆ ಅರ್ಹತೆ ಪಡೆಯಲಿವೆ.

ಕೋಲ್ಕತ್ತಾ ನೈಟ್ ರೈಡರ್ಸ್: ಆರ್​ಸಿಬಿ, ಲಕ್ನೋ ಹಾಗೂ ಮುಂಬೈ ತಮ್ಮ ಕೊನೆಯ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋತು, ಕೆಕೆಆರ್ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ನಾಲ್ಕನೇ ಸ್ಥಾನಕ್ಕೇರಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್, ಮುಂಬೈ, ಆರ್ಸಿಬಿ ತಲಾ 14 ಅಂಕಗಳನ್ನು ಹೊಂದಿರುತ್ತದೆ. ನಿವ್ವಳ ರನ್ ರೇಟ್ ಆಧಾರದ ಮೇಲೆ ಕೆಕೆಆರ್​ 4ನೇ ಸ್ಥಾನಕ್ಕೇರಬಹುದಾಗಿದೆ.

ಪಂಜಾಬ್ ಕಿಂಗ್ಸ್: ಪ್ಲೇ ಆಫ್​ಗೇರಲು ಪಂಜಾಬ್​ಗೆ ಅವಕಾಶಗಳು ತುಂಬಾ ಕಡಿಮೆ ಎಂದೇ ಹೇಳಬೇಕು. ಪಂಜಾಬ್ ಮುನ್ನಡೆಯಲು ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಭಾರಿ ಅಂತರದಿಂದ ಸೋಲಿಸಬೇಕಾಗಿದೆ. ಏತನ್ಮಧ್ಯೆ, ಆರ್​ಸಿಬಿ ಮುಂಬೈ ಕೆಕೆಆರ್ ತಮ್ಮ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಭಾರೀ ಅಂತರದ ಸೋಲನ್ನು ಕಾಣಬೇಕು. ಆಗ ಮಾತ್ರ ಪಿಬಿಕೆಎಸ್‌ಗೆ ಒಂದು ಅವಕಾಶ ಸಿಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ