ನಿಧಾನವಾಗಿ 16 ನೇ ಆವೃತ್ತಿಯ ಐಪಿಎಲ್ (IPL 2023) ವೇಗವನ್ನು ಪಡೆಯುತ್ತಿದೆ. ಇದುವರೆಗೆ ಐಪಿಎಲ್ನಲ್ಲಿ 28 ಪಂದ್ಯಗಳು ನಡೆದಿದ್ದು, 29 ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (Chennai Super Kings vs Sunrisers Hyderabad) ನಡುವೆ ನಡೆಯುತ್ತಿದೆ. ಆದರೆ ಈ ಪಂದ್ಯದ ನಡುವೆ ಬಿಸಿಸಿಐ ಪ್ಲೇ ಆಫ್ (Playoffs) ಹಾಗೂ ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಾಸ್ತವವಾಗಿ ಈ ಬಾರಿಯ ಐಪಿಎಲ್ ಫೈನಲ್ ಮೇ 28ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ( Narendra Modi Stadium in Ahmedabad) ನಡೆಯಲಿದೆ ಎಂಬುದು ಮೊದಲೇ ತಿಳಿದಿತ್ತು. ಆದರೆ ಅದು ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ಬಿಸಿಸಿಐ ಈ ಊಹಾಪೋಹಕ್ಕೆ ತೆರೆ ಎಳೆದಿದ್ದು, ನಿರೀಕ್ಷೆಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಿದೆ.
ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗೆಯೇ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರೊಂದಿಗೆ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ವಹಿಸುವ ಜವಾಬ್ದಾರಿ ಅಹಮದಾಬಾದ್ಗೆ ಲಭಿಸಿದೆ. 2022 ರ ಐಪಿಎಲ್ ಮುಂಬೈ ಮತ್ತು ಪುಣೆಯ 4 ಸ್ಥಳಗಳಲ್ಲಿ ನಡೆದಿತ್ತು. ಕಳೆದ ಸೀಸನ್ನಲ್ಲಿ ಕೋಲ್ಕತ್ತಾ ಎರಡು ಪ್ಲೇಆಫ್ ಪಂದ್ಯಗಳ ಆಯೋಜನೆಯ ಆತಿಥ್ಯವನ್ನು ವಹಿಸಿಕೊಂಡಿತ್ತು. ಈ ಬಾರಿ ಕೋಲ್ಕತ್ತಾಗೆ ಒಂದೇ ಒಂದು ಪ್ಲೇಆಫ್ ಪಂದ್ಯ ಆಯೋಜಿಸುವ ಅವಕಾಶ ಸಿಕ್ಕಿಲ್ಲ.
ಪ್ರಸಕ್ತ ಐಪಿಎಲ್ ಗ್ರೂಪ್ ಹಂತದಲ್ಲಿ 10 ಫ್ರಾಂಚೈಸಿಗಳು ಒಟ್ಟು 70 ಪಂದ್ಯಗಳನ್ನು ಆಡುತ್ತಿವೆ. ಮೇ 21 ರಂದು ಗುಂಪು ಹಂತದ ಕೊನೆಯ ಪಂದ್ಯ ನಡೆಯಲಿದೆ. ಒಂದು ದಿನದ ಬಳಿಕ ಅಂದರೆ,ಮೇ 23 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ನಂತರ ಮೇ 28 ಭಾರತದ ಮಿಲಿಯನೇರ್ ಲೀಗ್‌ನ ಫೈನಲ್ ನಡೆಯಲಿದೆ.
? NEWS ?
BCCI Announces Schedule and Venue Details For #TATAIPL 2023 Playoffs And Final.
Details ?https://t.co/JBLIwpUZyf
— IndianPremierLeague (@IPL) April 21, 2023
1) ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ
2) ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ
3) ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್
4) ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Fri, 21 April 23