SRH vs CSK Highlights IPL 2023: ಕಾನ್ವೇ ಅರ್ಧಶತಕ; ಸುಲಭ ತುತ್ತಾದ ಹೈದರಾಬಾದ್

|

Updated on:Apr 21, 2023 | 11:12 PM

Chennai Super Kings vs Sunrisers Hyderabad IPL 2023 Highlights in Kannada: ಮೊದಲು ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರೆ, ನಂತರ ಡೆವೊನ್ ಕಾನ್ವೆ ಸತತ ಮೂರನೇ ಅರ್ಧಶತಕ ದಾಖಲಿಸುವ ಮೂಲಕ ಚೆನ್ನೈಗೆ 7 ವಿಕೆಟ್‌ಗಳ ಜಯ ತಂದುಕೊಟ್ಟರು.

SRH vs CSK Highlights IPL 2023: ಕಾನ್ವೇ ಅರ್ಧಶತಕ; ಸುಲಭ ತುತ್ತಾದ ಹೈದರಾಬಾದ್
ಚೆನ್ನೈ- ಹೈದರಾಬಾದ್ ಮುಖಾಮುಖಿ

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ 29 ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭ ಜಯ ಸಾಧಿಸಿದೆ. ಮೊದಲು ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರೆ, ನಂತರ ಡೆವೊನ್ ಕಾನ್ವೆ ಸತತ ಮೂರನೇ ಅರ್ಧಶತಕ ದಾಖಲಿಸುವ ಮೂಲಕ ಚೆನ್ನೈಗೆ 7 ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 7 ವಿಕೆಟ್‌ಗೆ 134 ರನ್ ಗಳಿಸಿತು, ಉತ್ತರವಾಗಿ ಚೆನ್ನೈ 8 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. 77 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಡೆವೊನ್ ಕಾನ್ವೇ ಚೆನ್ನೈ ಗೆಲುವಿನ ಹೀರೋ ಎನಿಸಿಕೊಂಡರು.

LIVE NEWS & UPDATES

The liveblog has ended.
  • 21 Apr 2023 11:12 PM (IST)

    ಚೆನ್ನೈಗೆ 7 ವಿಕೆಟ್‌ಗಳ ಜಯ

    ಮೊಯಿನ್ ಅಲಿ 19ನೇ ಓವರ್​ನಲ್ಲಿ ಗೆಲುವಿನ ಬೌಂಡರಿ ಬಾರಿಸಿದರು ಮತ್ತು ಇದರೊಂದಿಗೆ ಚೆನ್ನೈ ಹೈದರಾಬಾದ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತು.

  • 21 Apr 2023 11:09 PM (IST)

    ಕಾನ್ವೇ ಬ್ಯಾಕ್ ಟು ಬ್ಯಾಕ್ ಬೌಂಡರಿ

    18ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಡೆವೊನ್ ಕಾನ್ವೇ ಬೌಂಡರಿ ಬಾರಿಸಿದರು.

  • 21 Apr 2023 10:49 PM (IST)

    ರಾಯುಡು ಕ್ಲೀನ್ ಬೌಲ್ಡ್

    ಮಾರ್ಕಂಡೇ, ಅಂಬಟಿ ರಾಯುಡು ಅವರನ್ನು ಕ್ಲೀನ್ ಬೌಲ್ಡ್ ಮಾಡಿ ವಾಪಸ್ ಕಳುಹಿಸಿದರು. 17ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಯುಡು ಕ್ಲೀನ್ ಬೌಲ್ಡ್ ಆದರು. ಇದು ಮಯಾಂಕ್ ಅವರ ಎರಡನೇ ವಿಕೆಟ್.

  • 21 Apr 2023 10:48 PM (IST)

    ರಾಯುಡು ಬೌಂಡರಿ

    16ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆನ್ನೈ ಫೋರ್ ರನ್ ಗಳಿಸಿತು. 8 ರನ್ ನೀಡಿದ ಈ ಓವರ್‌ನ ಕೊನೆಯ ಎಸೆತದಲ್ಲಿ ಅಂಬಟಿ ರಾಯುಡು ಶಾರ್ಟ್ ಥರ್ಡ್ ಮ್ಯಾನ್‌ ಕಡೆ ಬೌಂಡರಿ ಬಾರಿಸಿದರು.

  • 21 Apr 2023 10:42 PM (IST)

    ರಾಯುಡು ಇಂಪ್ಯಾಕ್ಟ್ ಪ್ಲೇಯರ್

    ಆಕಾಶ್ ಸಿಂಗ್ ಬದಲಿಗೆ ಅಂಬಾಟಿ ರಾಯುಡು ಬಂದಿದ್ದಾರೆ. ಧೋನಿ ಪ್ರಭಾವಿ ಆಟಗಾರನಾಗಿ ರಾಯುಡು ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದಾರೆ.

  • 21 Apr 2023 10:38 PM (IST)

    ರಹಾನೆ ಔಟ್

    ಮಾರ್ಕಂಡೇ ಚೆನ್ನೈಗೆ ಮತ್ತೊಂದು ಹೊಡೆತ ನೀಡಿದರು. ಅವರು 15ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಅವರನ್ನು ಬೇಟೆಯಾಡಿದರು.

  • 21 Apr 2023 10:35 PM (IST)

    ಕಾನ್ವೇ ಫೋರ್

    14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬ್ಯಾಕ್ ಫುಟ್‌ನಿಂದ ಡೆವೊನ್ ಕಾನ್ವೇ ಬೌಂಡರಿ ಕಟ್ ಮಾಡಿದರು.

  • 21 Apr 2023 10:35 PM (IST)

    ಗಾಯಕ್ವಾಡ್ ರನ್ ಔಟ್

    11ನೇ ಓವರ್‌ನ ಕೊನೆಯ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ರನೌಟ್ ಆದರು. ಉಮ್ರಾನ್ ಎಸೆತದಿಂದ ಗಾಯಕ್ವಾಡ್ ಅವರ ಇನ್ನಿಂಗ್ಸ್ 35 ರನ್‌ಗಳಿಗೆ ಕೊನೆಗೊಂಡಿತು. ಕಾನ್ವೇ ಜೊತೆಗಿನ ಅವರ 87 ರನ್‌ಗಳ ಇನ್ನಿಂಗ್ಸ್ ಕೂಡ ಕೊನೆಗೊಂಡಿತು. ಚೆನ್ನೈಗೆ ಮೊದಲ ಪೆಟ್ಟು ಬಿದ್ದಿತು

  • 21 Apr 2023 10:34 PM (IST)

    ಕಾನ್ವೇ ಬೌಂಡರಿ, ಅರ್ಧಶತಕ

    ಮಾರ್ಕಂಡೇಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಡೆವೊನ್ ಕಾನ್ವೆ ತಮ್ಮ ಅರ್ಧಶತಕ ಪೂರೈಸಿದರು. ಅವರು 33 ಎಸೆತಗಳಲ್ಲಿ 50 ರನ್ ಪೂರೈಸಿದರು.

  • 21 Apr 2023 10:06 PM (IST)

    3 ಓವರ್​ಗಳಿಂದ ಬೌಂಡರಿಗಳಿಲ್ಲ

    ಪವರ್​ ಪ್ಲೇಯ ಕೊನೆಯ ಓವರ್​ನಲ್ಲಿ ಕಾನ್ವೇ ಬೌಂಡರಿ ಬಾರಿಸಿದ್ದು ಬಿಟ್ಟರೆ, 9ನೇ ಓವರ್​ವರೆಗೂ ಯಾವುದೇ ಬೌಂಡರಿ ಬಂದಿಲ್ಲ. ಸದ್ಯ ಸಿಎಸ್​ಕೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬ್ಯಾಟರ್​ಗಳು ಬೌಂಡರಿಗಳ ಮೊರೆ ಹೋಗುತ್ತಿಲ್ಲ.

  • 21 Apr 2023 09:50 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇಯ ಕೊನೆಯ ಓವರ್ ಬೌಲ್ ಮಾಡಿದ ಯಾನ್ಸೆನ್ ತುಂಬಾ ದುಬಾರಿಯಾದರು. ಈ ಓವರ್​ನ ಕೊನೆಯ 5 ಎಸೆತಗಳನ್ನು ಕಾನ್ವೇ ಬೌಂಡರಿಗಟ್ಟಿದರು. 2 ಮತ್ತು 3ನೇ ಎಸೆತದಲ್ಲಿ ಬೌಂಡರಿ ಬಂದರೆ, 4ನೇ ಎಸೆತದಲ್ಲಿ ಸಿಕ್ಸರ್ ಬಂತು. ಇನ್ನುಳಿದ 2 ಎಸೆತಗಳಲ್ಲಿ ಬೌಂಡರಿ ಬಂದವು.

  • 21 Apr 2023 09:48 PM (IST)

    5 ಓವರ್‌ ಮುಕ್ತಾಯ

    ಚೆನ್ನೈ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ. ಕಾನ್ವೆ ಮತ್ತು ಗಾಯಕ್ವಾಡ್ ಕ್ರೀಸ್‌ನಲ್ಲಿದ್ದಾರೆ. ಈ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ.

  • 21 Apr 2023 09:47 PM (IST)

    ಕಾನ್ವೇ ಅಬ್ಬರ

    ಏಡನ್ ಮಾರ್ಕ್ರಾಮ್ ಎಸೆದ ಮೂರನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕಾನ್ವೇ ಬೌಂಡರಿ ಬಾರಿಸಿದರು.

  • 21 Apr 2023 09:43 PM (IST)

    ಗಾಯಕ್ವಾಡ್- ಕಾನ್ವೇ ಬೌಂಡರಿ

    ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಡೆವೊನ್ ಕಾನ್ವೆ ಬೌಂಡರಿ ಬಾರಿಸಿದರು. ನಂತರ ಗಾಯಕ್ವಾಡ್ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಚೆನ್ನೈ 11 ರನ್ ಗಳಿಸಿತು.

  • 21 Apr 2023 09:33 PM (IST)

    ಚೆನ್ನೈ ಬ್ಯಾಟಿಂಗ್ ಆರಂಭ

    ಚೆನ್ನೈ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಭುವನೇಶ್ವರ್ ಕುಮಾರ್ ಮೊದಲ ಓವರ್ ಬೌಲ್ ಮಾಡಿ 6 ರನ್ ನೀಡಿದರು.

  • 21 Apr 2023 09:18 PM (IST)

    ಹೈದರಾಬಾದ್ ಇನ್ನಿಂಗ್ಸ್ ಅಂತ್ಯ

    ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ 134 ರನ್​ಗಳಿಗೆ ಅಂತ್ಯಗೊಂಡಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಎಂಎಸ್ ಧೋನಿ ವಿಕೆಟ್ ಹಿಂದಿನಿಂದ ರನೌಟ್ ಮಾಡಿದರು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಗರಿಷ್ಠ 34 ರನ್ ಗಳಿಸಿದರು. ಮತ್ತೊಂದೆಡೆ, ಚೆನ್ನೈ ಪರ ರವೀಂದ್ರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು.

  • 21 Apr 2023 09:02 PM (IST)

    ಆರನೇ ವಿಕೆಟ್ ಕೂಡ ಪತನ

    ಸನ್ ರೈಸರ್ಸ್ ಹೈದರಾಬಾದ್ ಆರನೇ ವಿಕೆಟ್ ಕಳೆದುಕೊಂಡಿದೆ. ಹೆನ್ರಿಚ್ ಕ್ಲಾಸೆನ್ (17) ಕೂಡ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. ಎಕ್ಸ್‌ಟ್ರಾ ಕವರ್‌ನಲ್ಲಿ ಮಾರ್ಕೊ ನೇರವಾಗಿ ಗಾಯಕ್ವಾಡ್‌ಗೆ ಕ್ಯಾಚ್ ನೀಡಿದರು.

  • 21 Apr 2023 08:49 PM (IST)

    35 ಎಸೆತಗಳ ನಂತರ ಬೌಂಡರಿ

    10ನೇ ಓವರ್​ನಲ್ಲಿ ಬೌಂಡರಿ ಬಾರಿಸಿದ್ದ ಹೈದರಾಬಾದ್ ಬ್ಯಾಟರ್ ಆ ಬಳಿಕ 17ನೇ ಓವರ್​ನಲ್ಲಿ ಇನ್ನೊಂದು ಬೌಂಡರಿ ಬಾರಿಸಿದ್ದಾರೆ. ಅಂದರೆ ಬರೋಬ್ಬರಿ 35 ಎಸೆತಗಳ ನಂತರ ಬೌಂಡರಿ ಬಂದಿದೆ.

  • 21 Apr 2023 08:45 PM (IST)

    ಶತಕ ಪೂರ್ಣ

    ಹೈದರಾಬಾದ್ ತಂಡದ 5 ವಿಕೆಟ್ ಉರುಳಿದ್ದು, ತಂಡದ ಬ್ಯಾಟಿಂಗ್ ನಿಧಾನವಾಗಿ ಸಾಗುತ್ತಿದೆ. ತಂಡ 15ನೇ ಓವರ್​ನಲ್ಲಿ ತನ್ನ ಶತಕ ಪೂರೈಸಿದೆ.

  • 21 Apr 2023 08:43 PM (IST)

    ಅಗರ್ವಾಲ್ ಕೂಡ ಔಟ್

    ಸನ್ ರೈಸರ್ಸ್ ಹೈದರಾಬಾದ್ ಐದನೇ ವಿಕೆಟ್ ಕಳೆದುಕೊಂಡಿದೆ. ಓಪನಿಂಗ್‌ನಿಂದ ಕೆಳಗಿಳಿದು ಮಧ್ಯಮ ಕ್ರಮಾಂಕಕ್ಕೆ ಕಳುಹಿಸಿದ ಮಯಾಂಕ್ ಅಗರ್ವಾಲ್ (2) ಅವರನ್ನು ಧೋನಿ ಸ್ಟಂಪ್ ಮಾಡಿದರು. ಇದು ರವೀಂದ್ರ ಜಡೇಜಾ ಅವರ ಮೂರನೇ ವಿಕೆಟ್.

  • 21 Apr 2023 08:35 PM (IST)

    ನಾಲ್ಕನೇ ವಿಕೆಟ್ ಪತನ

    ಸನ್ ರೈಸರ್ಸ್ ಇನ್ನಿಂಗ್ಸ್ ತತ್ತರಿಸುತ್ತಿದೆ. ನಾಯಕ ಏಡನ್ ಮಾರ್ಕ್ರಾಮ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಮಹಿಷ್ ತೀಕ್ಷಣ ಎಸೆತದಲ್ಲಿ ಧೋನಿ ಮಾರ್ಕ್ರಾಮ್ ಕ್ಯಾಚ್ ಪಡೆದರು.

  • 21 Apr 2023 08:35 PM (IST)

    ಮೂರನೇ ವಿಕೆಟ್ ಪತನ

    ಹೈದರಾಬಾದ್ ಕೂಡ ಮೂರನೇ ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ (21) ಅವರ ಕೆಟ್ಟ ಫಾರ್ಮ್ ಮುಂದುವರಿದಿದೆ. ಈಗಾಗಲೇ ಒಂದು ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ ತ್ರಿಪಾಠಿಯನ್ನು ಬೇಟೆಯಾಡಿದ್ದಾರೆ.

  • 21 Apr 2023 08:28 PM (IST)

    10 ಓವರ್‌ ಮುಕ್ತಾಯ

    10 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ 76-2. ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ.

  • 21 Apr 2023 08:26 PM (IST)

    ಅಭಿಷೇಕ್ ಶರ್ಮಾ ಔಟ್

    ಹೈದರಾಬಾದ್ ತಂಡದ ಎರಡನೇ ವಿಕೆಟ್ ಕೂಡ ಪತನಗೊಂಡಿದೆ. ಎಂಟನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅಭಿಷೇಕ್ ಶರ್ಮಾ (34) ಅವರ ವಿಕೆಟ್ ಪಡೆದರು.ಜಡೇಜಾ ಬೌಲಿಂಗ್​ನಲ್ಲಿ ಲಾಂಗ್ ಆನ್​ನಲ್ಲಿ ಕ್ಯಾಚಿತ್ತು ಅಭಿಷೇಕ್ ಔಟಾದರು. 9.2 ಓವರ್‌ಗಳಲ್ಲಿ ಹೈದರಾಬಾದ್ 71-2

  • 21 Apr 2023 08:17 PM (IST)

    ತ್ರಿಪಾಠಿ ಸಿಕ್ಸರ್

    ಮೊಯಿನ್ ಅಲಿ ಎಸೆದ 7ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಬೃಹತ್ ಸಿಕ್ಸರ್ ಬಾರಿಸಿದರು.

  • 21 Apr 2023 08:12 PM (IST)

    ಪವರ್ ಪ್ಲೇನಲ್ಲಿ ಹೈದರಾಬಾದ್ 45/1

    ಪವರ್ ಪ್ಲೇನ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ಅದ್ಭುತ ಬೌಂಡರಿ ಬಾರಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ ತಂಡದ ಸ್ಕೋರ್ ಒಂದು ವಿಕೆಟ್ ನಷ್ಟಕ್ಕೆ 45 ರನ್ ಆಗಿದೆ.

  • 21 Apr 2023 07:52 PM (IST)

    ಬ್ರೂಕ್ ಔಟ್

    ಆಕಾಶ್ ಸಿಂಗ್ ಎಸೆದ 5ನೇ ಓವರ್​ನ ಎರಡನೇ ಎಸೆತದಲ್ಲಿ ಬ್ರೂಕ್ ಕ್ಯಾಚಿತ್ತು ಔಟಾದರು.

  • 21 Apr 2023 07:51 PM (IST)

    ಬ್ರೂಕ್ ಬೌಂಡರಿ

    ದೇಶಪಾಂಡೆ ಎಸೆದ 4ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಬ್ರೂಕ್ ಬೌಂಡರಿ ಹೊಡೆದರು.

  • 21 Apr 2023 07:51 PM (IST)

    ಅಭಿಷೇಕ್ ಸಿಕ್ಸರ್

    ಆಕಾಶ್ ಎಸೆದ 3ನೇ ಓವರ್​ನ 4ನೇ ಎಸೆತದಲ್ಲಿ ಅಭಿಷೇಕ್ ಫೈನ್ ಲೆಗ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.

  • 21 Apr 2023 07:40 PM (IST)

    ಅಭಿಷೇಕ್ ಬೌಂಡರಿ

    ದೇಶಪಾಂಡೆ ಎಸೆದ 2ನೇ ಓವರ್​ನ ಕೊನೆಯ ಎಸೆತವನ್ನು ಅಭಿಷೇಕ್ ಥರ್ಡ್​ಮ್ಯಾನ್​ನಲ್ಲಿ ಬೌಂಡರಿಗಟ್ಟಿದರು.

  • 21 Apr 2023 07:35 PM (IST)

    ಹೈದರಾಬಾದ್ ಇನ್ನಿಂಗ್ಸ್ ಪ್ರಾರಂಭ

    ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ ಆದರೆ ಈ ಬಾರಿ ತಂಡವು ಆರಂಭಿಕ ಜೋಡಿಯನ್ನು ಬದಲಾಯಿಸಿದೆ. ಈ ಬಾರಿ, ಮಯಾಂಕ್ ಅಗರ್ವಾಲ್ ಬದಲಿಗೆ ಹ್ಯಾರಿ ಬ್ರೂಕ್ ಅವರೊಂದಿಗೆ ಅಭಿಷೇಕ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಮೊದಲ ಓವರ್​ನಲ್ಲಿ 1 ಬೌಂಡರಿ ಕೂಡ ಬಂತು.

  • 21 Apr 2023 07:14 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಕೀಪರ್/ನಾಯಕ), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮತಿಶಾ ಪತಿರಾನ.

  • 21 Apr 2023 07:14 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್.

  • 21 Apr 2023 07:01 PM (IST)

    ಟಾಸ್ ಗೆದ್ದ ಚೆನ್ನೈ

    ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - Apr 21,2023 7:00 PM

    Follow us