AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs GT, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಲಖನೌ-ಗುಜರಾತ್ ನಡುವೆ ಹೈವೋಲ್ಟೇಜ್ ಕದನ

MI vs PBKS: ಐಪಿಎಲ್ 2023 ರಲ್ಲಿಂದು ಎರಡು ಪಂದ್ಯ ನಡೆಯಲಿದೆ. ಮೊದಲ ಮ್ಯಾಚ್​ನಲ್ಲಿ ಲಖನೌ ಸೂಪರ್ ಜೇಂಟ್ಸ್ ತಂಡ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್- ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ.

LSG vs GT, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಲಖನೌ-ಗುಜರಾತ್ ನಡುವೆ ಹೈವೋಲ್ಟೇಜ್ ಕದನ
LSG vs GT
Vinay Bhat
|

Updated on: Apr 22, 2023 | 7:07 AM

Share

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ಅನ್ನು ಎದುರಿಸಲಿದೆ. ಈ ಪಂದ್ಯ ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30 ಕ್ಕೆ ಆಯೋಜಿಸಲಾಗಿರುವ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ಹಾಗೂ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ (MI vs PBKS) ಮುಖಾಮುಖಿ ಆಗಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜರುಗಲಿದೆ.

ಲಖನೌ-ಗುಜರಾತ್:

ಲಖನೌ ತಂಡ ಆಡಿದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ನಾಯಕ ಕೆಎಲ್ ರಾಹುಲ್ ಹಾಗೂ ಖೈಲ್ ಮೇಯರ್ಸ್ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಆಯುಷ್ ಬದೋನಿ, ಮಾರ್ಕಸ್ ಸ್ಟಾಯಿನಿಸ್ ಹಾಗೂ ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಬಲವಾಗಿದ್ದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ. ದೀಪಕ್ ಹೂಡ ಕಡೆಯಿಂದ ಉತ್ತಮ ಆಟ ಬರುತ್ತಿಲ್ಲ. ಕ್ರುನಾಲ್ ಪಾಂಡ್ಯ ಕೂಡ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ. ಬೌಲಿಂಗ್​ನಲ್ಲಿ ನವೀನ್ ಉಲ್ ಹಖ್, ಆವೇಶ್ ಖಾನ್, ರವಿ ಬಿಷ್ಟೋಯಿ ಹಾಗೂ ಅಮಿತ್ ಮಿಶ್ರಾ ಉತ್ತಮ ಫಾರ್ಮ್​ನಲ್ಲಿದ್ದಾರೆ.

IPL 2023: ನಿಷೇಧದ ಭೀತಿಯಲ್ಲಿ ಐದು ತಂಡಗಳ ನಾಯಕರು! ಫಾಫ್ ಡು ಪ್ಲೆಸಿಸ್​ಗೂ ಸಂಕಷ್ಟ

ಇದನ್ನೂ ಓದಿ
Image
IPL 2023: ಎದುರಾಳಿ ಬ್ಯಾಟರ್ ಜೊತೆ ದೃಷ್ಟಿಯುದ್ಧಕ್ಕಿಳಿದ ಜಡೇಜಾ! ಸಮಾಧಾನ ಪಡಿಸಿದ ಧೋನಿ
Image
IPL 2023 Final: ಮೋದಿ ಮೈದಾನದಲ್ಲಿ ಫೈನಲ್! ಪ್ಲೇ ಆಫ್ ಪಂದ್ಯಕ್ಕೆ ಚೆನ್ನೈ ಆತಿಥ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Image
SRH vs CSK Highlights IPL 2023: ಕಾನ್ವೇ ಅರ್ಧಶತಕ; ಸುಲಭ ತುತ್ತಾದ ಹೈದರಾಬಾದ್
Image
IPL 2023: ಡೆಲ್ಲಿ ಆಟಗಾರರು ಕಳೆದುಕೊಂಡಿದ್ದ 16 ಬ್ಯಾಟ್, ಪ್ಯಾಡ್, ಗ್ಲೌಸ್, ಪತ್ತೆ! ಆದರೆ..?

ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿಟಿ ತಂಡದ ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದೆ. ಉತ್ತಮ ರನ್​ರೇಟ್ ಕೂಡ ಹೊಂದಿದೆ. ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್​ನಿಂದ ರನ್ ಬರುತ್ತಿಲ್ಲ. ಆದರೂ ತಂಡದಲ್ಲಿರುವ ಇತರೆ ಬ್ಯಾಟರ್​​ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಪ್ರತಿ ಪಂದ್ಯದಲ್ಲಿ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಸಾಯಿ ಸುದರ್ಶನ್ ಕೂಡ ನೆರವಾಗುತ್ತಿದ್ದಾರೆ. ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೇವಾಟಿಯ ಫಿನಿಶರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಶಮಿ, ಅಲ್ಜರಿ ಜೋಸೆಫ್, ಜೋಶ್ವಾ ಲಿಟಲ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ಮಾರಕವಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈ-ಪಂಜಾಬ್:

ಮುಂಬೈ ಆರಂಭದ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಲಯಕ್ಕೆ ಮರಳಿದೆ. ಸೂರ್ಯಕುಮಾರ್ ಯಾದವ್​​ ಕಳಪೆ ಫಾರ್ಮ್ ಬಿಟ್ಟರೆ ಉಳಿದವರು ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕ್ಯಾಮ್ರೋನ್ ಗ್ರೀನ್ ಕಡೆಯಿಂದ ಕೂಡ ಉತ್ತಮ ಆಟ ಬರುತ್ತಿದೆ. ರೋಹಿತ್-ಕಿಶನ್ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ತಿಲಕ್ ವರ್ಮಾ, ಟಿಮ್ ಡೇವಿಡ್ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಅರ್ಜುನ್ ತೆಂಡೂಲ್ಕರ್​ಗೆ ಇಂದಿನ ಪಂದ್ಯದಲ್ಲೂ ಸ್ಥಾನ ಸಿಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಡ್ಯೂಯೆನ್ ಜಾನ್ಸೆನ್, ರಿಲೆ ಮೆರೆಡಿತ್, ಹೃತಿಕ್ ಶೋಕೀನ್ ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್​ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.

ಪಂಜಾಬ್ ಆಡಿದ ಆರು ಪಂದ್ಯಗಳಲ್ಲಿ ಮೂರರಲ್ಲಿ ಜಯ ಮೂರರಲ್ಲಿ ಸೋತಿದೆ. ಪಂಜಾಬ್ ತಂಡದಲ್ಲಿ ಒಬ್ಬ ಆಟಗಾರ ವೈಫಲ್ಯ ಅನುಭವಿಸಿದರೆ ಮತ್ತೊಬ್ಬ ಪ್ಲೇಯರ್ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ್ದು ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ಮ್ಯಾಥ್ಯೂ ಶಾರ್ಟ್, ಹರ್ಪ್ರೀತ್ ಸಿಂಗ್ ಸಿಖಂದರ್ ರಾಜಾ, ಶಾರುಖ್ ಖಾನ್ ಫಾರ್ಮ್​ನಲ್ಲಿದ್ದಾರೆ. ಸ್ಯಾಮ್ ಕುರ್ರನ್, ರಬಾಡಾ, ಅರ್ಶ್​ದೀಪ್ ಸಿಂಗ್, ರಾಹುಲ್ ಚಹರ್ ಪ್ರಮುಖ ಬೌಲರ್​ಗಳಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ರೆಜಿಲ್​ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ
ಬ್ರೆಜಿಲ್​ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ
Daily Devotional: ತುಳಸಿ ಕುಂಡದಲ್ಲಿರೋ ಮಣ್ಣಿನಿಂದ ಆಗುವ ಪ್ರಯೋಜನಗಳು
Daily Devotional: ತುಳಸಿ ಕುಂಡದಲ್ಲಿರೋ ಮಣ್ಣಿನಿಂದ ಆಗುವ ಪ್ರಯೋಜನಗಳು
ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ
ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ
ನವೆಂಬರ್​ ಕ್ರಾಂತಿ ಚರ್ಚೆ ನಡುವೆ ಸುರ್ಜೇವಾಲಾ ಭೇಟಿಯಾದ ಸಚಿವ ಜಾರಕಿಹೊಳಿ
ನವೆಂಬರ್​ ಕ್ರಾಂತಿ ಚರ್ಚೆ ನಡುವೆ ಸುರ್ಜೇವಾಲಾ ಭೇಟಿಯಾದ ಸಚಿವ ಜಾರಕಿಹೊಳಿ
ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಮಾತು
ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಮಾತು
ದೆಹಲಿ ಸ್ಫೋಟ; ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಿಸಿದ ಸಿಎಂ ರೇಖಾ ಗುಪ್ತ
ದೆಹಲಿ ಸ್ಫೋಟ; ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಿಸಿದ ಸಿಎಂ ರೇಖಾ ಗುಪ್ತ
ವ್ಹೀಲಿಂಗ್​​ ಥ್ರಿಲ್​ಗಾಗಿ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದ ಸೈಕೋ ಕಳ್ಳ
ವ್ಹೀಲಿಂಗ್​​ ಥ್ರಿಲ್​ಗಾಗಿ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದ ಸೈಕೋ ಕಳ್ಳ
‘ಯುಐ’ ಸಿನಿಮಾಗೆ ಜನ ನೀಡಿದ ರೆಸ್ಪಾನ್ಸ್ ಬಗ್ಗೆ ಉಪೇಂದ್ರಗೆ ಬೇಸರ ಇದೆಯಾ?
‘ಯುಐ’ ಸಿನಿಮಾಗೆ ಜನ ನೀಡಿದ ರೆಸ್ಪಾನ್ಸ್ ಬಗ್ಗೆ ಉಪೇಂದ್ರಗೆ ಬೇಸರ ಇದೆಯಾ?
ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಮೋದಿ- ಭೂತಾನ್ ರಾಜ
ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಮೋದಿ- ಭೂತಾನ್ ರಾಜ
ಕಬ್ಬು ಬೆಳೆಗಾರರ ಕಿಚ್ಚು: ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಇಟ್ಟ ರೈತರು
ಕಬ್ಬು ಬೆಳೆಗಾರರ ಕಿಚ್ಚು: ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಇಟ್ಟ ರೈತರು