RCB vs PBKS Highlights IPL 2023: ಸಿರಾಜ್ ಮಾರಕ ದಾಳಿ; ಆರ್​ಸಿಬಿಗೆ 24 ರನ್ ಜಯ

|

Updated on:Apr 20, 2023 | 7:09 PM

Punjab Kings vs Royal Challengers Bangalore IPL 2023 Highlights in Kannada: ತವರಿನಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರು ಬಿಟ್ಟ ತಕ್ಷಣ ಭರ್ಜರಿ ಗೆಲುವು ದಾಖಲಿಸಿದೆ. ಮೊಹಾಲಿಯ ತವರು ಮೈದಾನದಲ್ಲಿ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 24 ರನ್‌ಗಳಿಂದ ಸೋಲಿಸಿತು.

RCB vs PBKS Highlights IPL 2023: ಸಿರಾಜ್ ಮಾರಕ ದಾಳಿ; ಆರ್​ಸಿಬಿಗೆ 24 ರನ್ ಜಯ
ಆರ್​ಸಿಬಿ- ಪಂಜಾಬ್ ಮುಖಾಮುಖಿ

ತವರಿನಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರು ಬಿಟ್ಟ ತಕ್ಷಣ ಭರ್ಜರಿ ಗೆಲುವು ದಾಖಲಿಸಿದೆ. ಮೊಹಾಲಿಯ ತವರು ಮೈದಾನದಲ್ಲಿ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 24 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆರನೇ ಪಂದ್ಯದಲ್ಲಿ ಬೆಂಗಳೂರು ಮೂರನೇ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ 174 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಮೊಹಮ್ಮದ್ ಸಿರಾಜ್ 4 ವಿಕೆಟ್ ಹಾಗೂ 1 ರನ್​ಔಟ್ ಮಾಡಿ ಪಂಜಾಬ್ ತಂಡವನ್ನು ಸೋಲಿನ ದವಡೆಗೆ ಸಿಲುಕಿಸಿದರು. ಅಂತಿಮವಾಗಿ ಪಂಜಾಬ್ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 138 ರನ್​ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 20 Apr 2023 07:09 PM (IST)

    24 ರನ್ ಜಯ

    19ನೇ ಓವರ್​ನಲ್ಲಿ ಜಿತೇಶ್ ಔಟಾಗುವುದರೊಂದಿಗೆ ಪಂಜಾಬ್ 24 ರನ್​ಗಳ ಸೋಲುಕಂಡಿದೆ. ಇದರೊಂದಿಗೆ ಆರ್​ಸಿಬಿ 3ನೇ ಗೆಲುವು ಸಾಧಿಸಿದೆ.

  • 20 Apr 2023 07:03 PM (IST)

    ನಾಥನ್ ಎಲ್ಲಿಸ್ ಔಟ್

    ಸಿರಾಜ್ ಬೆಂಗಳೂರಿಗೆ ಮತ್ತೊಂದು ಯಶಸ್ಸನ್ನು ನೀಡಿದ್ದಾರೆ. ನಾಥನ್ ಎಲ್ಲಿಸ್ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಪಂಜಾಬ್​ನ ಒಂಬತ್ತನೇ ವಿಕೆಟ್ ಪತನಗೊಂಡಿದೆ.

  • 20 Apr 2023 07:02 PM (IST)

    ಹರ್‌ಪ್ರೀತ್ ಬ್ರಾರ್ ಔಟ್

    ಹರ್‌ಪ್ರೀತ್ ಬ್ರಾರ್ ಔಟಾಗಿದ್ದಾರೆ. ಪಂಜಾಬ್‌ಗೆ ಎಂಟನೇ ಹೊಡೆತ ಬಿದ್ದಿದೆ. ಸಿರಾಜ್ 18ನೇ ಓವರ್​ನ ಮೂರನೇ ಎಸೆತದಲ್ಲಿ ಬ್ರಾರ್ ಅವರನ್ನು ಬೌಲ್ಡ್ ಮಾಡಿದರು.

  • 20 Apr 2023 06:46 PM (IST)

    ಜಿತೇಶ್ ಅಬ್ಬರ

    ವೈಶಾಖ್ ಎಸೆದ 16ನೇ ಓವರ್​ನಲ್ಲಿ ಜಿತೇಶ್ 2ನೇ ಎಸೆತವನ್ನು ಬೌಂಡರಿಗಟ್ಟಿದರೆ, 3ನೇ ಎಸೆತವನ್ನು ಸಿಕ್ಸರ್​ಗಟ್ಟಿದರು.

  • 20 Apr 2023 06:42 PM (IST)

    ಜಿತೇಶ್ ಸಿಕ್ಸರ್

    ಹಸರಂಗ ಎಸೆದ 15ನೇ ಓವರ್​ನ 2ನೇ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಹೊಡೆದರು.

  • 20 Apr 2023 06:37 PM (IST)

    ಆರನೇ ವಿಕೆಟ್ ಪತನ

    ಶಾರುಖ್ ಖಾನ್ 5 ಎಸೆತಗಳಲ್ಲಿ 7 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಹಸರಂಗ ಓವರ್​ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಶಾರುಖ್​ ಖಾನ್ ಸ್ಟಂಪ್ ಔಟ್ ಆದರು.

  • 20 Apr 2023 06:32 PM (IST)

    ಶಾರುಖ್ ಖಾನ್ ಸಿಕ್ಸರ್

    12 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಸ್ಕೋರ್ 103/6. ಶಾರುಖ್ 3 ಎಸೆತಗಳಲ್ಲಿ 6 ರನ್ ಮತ್ತು ಜಿತೇಶ್ ಶರ್ಮಾ 6 ಎಸೆತಗಳಲ್ಲಿ 11 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್​ನ ಕೊನೆಯ ಎಸೆತದಲ್ಲಿ ಶಾರುಖ್ ಭರ್ಜರಿ ಸಿಕ್ಸರ್ ಬಾರಿಸಿದರು.

  • 20 Apr 2023 06:31 PM (IST)

    ಪ್ರಭಾಸಿಮ್ರಾನ್ ಔಟ್

    ಪಂಜಾಬ್‌ಗೆ ಆರನೇ ಹೊಡೆತ ಬಿದ್ದಿದೆ. ಪ್ರಭಾಸಿಮ್ರಾನ್ ಸಿಂಗ್ ಔಟಾಗಿದ್ದಾರೆ. 12ನೇ ಓವರ್‌ನ ಮೂರನೇ ಎಸೆತದಲ್ಲಿ ಪ್ರಭಾಸಿಮ್ರಾನ್ ಸಿಂಗ್ ಕ್ಲೀನ್ ಬೌಲ್ಡ್ ಆದರು.

  • 20 Apr 2023 06:21 PM (IST)

    ಹರ್ಷಲ್​ ದುಬಾರಿ

    11ನೇ ಓವರ್​ ಬೌಲ್ ಮಾಡಿದ ಹರ್ಷಲ್ 1 ಸಿಕ್ಸರ್ ಹಾಗೂ 1 ಬೌಂಡರಿ ಬಿಟ್ಟುಕೊಟ್ಟು ಕೊಂಚ ದುಬಾರಿಯಾಗಿದ್ದಾರೆ. ಈ ಓವರ್​ನಲ್ಲಿ ಒಂದು ನೋ ಬಾಲ್ ಕೂಡ ಬಂತು.

  • 20 Apr 2023 06:13 PM (IST)

    ಓವರ್‌ಗಳ ನಂತರ ಪಂಜಾಬ್ ಸ್ಕೋರ್ 70/4

    9 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 70/4. ಸಿಮ್ರಾನ್ ಸಿಂಗ್ 24 ಎಸೆತಗಳಲ್ಲಿ 37 ಮತ್ತು ಸ್ಯಾಮ್ ಕರನ್ 8 ಎಸೆತಗಳಲ್ಲಿ 5 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.

  • 20 Apr 2023 06:05 PM (IST)

    ಹಸರಂಗಗೆ ಸಿಕ್ಸರ್

    8ನೇ ಓವರ್​ನ ಮೊದಲ ಎಸೆತದಲ್ಲಿ ಪ್ರಬ್ಸಿಮ್ರನ್ ಲಾಂಗ್​ ಆನ್​ನಲ್ಲಿ ಭರ್ಜರಿ ಸಿಕ್ಸರ್ ಹೊಡೆದರು. ಹಾಗೆಯೇ ಕೊನೆಉ ಎಸೆತದಲ್ಲೂ ಭರ್ಜರಿ ಸಿಕ್ಸರ್ ಬಂತು.

  • 20 Apr 2023 05:59 PM (IST)

    ಹರ್ಪ್ರೀತ್ ಸಿಂಗ್ ಭಾಟಿಯಾ ಔಟ್

    ಕನ್ನಡಿಗ ವೈಶಾಕ್ ಎಸೆದ ಪವರ್​ ಪ್ಲೇ ಕೊನೆಯ ಓವರ್​ನ ಮೊದಲ ಎಸೆತದಲ್ಲೇ ಹರ್ಪ್ರೀತ್ ಸಿಂಗ್ ಭಾಟಿಯಾ ರನ್ ಔಟ್ ಆದರು. ಆದರೆ ಓವರ್​ನ ಕೊನೆಯ ಎಸೆತದಲ್ಲಿ 1 ಸಿಕ್ಸರ್ ಬಂತು.

  • 20 Apr 2023 05:51 PM (IST)

    ಪರ್ನೆಲ್​ಗೆ ಸಿಕ್ಸರ್

    ಪರ್ನೆಲ್ ಎಸೆದ 5ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಂಗ್ ಓವರ್​ ದಿ ಡಿಪ್ ಸ್ಕ್ವೈರ್ ಲೆಗ್​ನಲ್ಲಿ ಸಿಕ್ಸರ್ ಬಾರಿಸಿದರು.

  • 20 Apr 2023 05:42 PM (IST)

    ಲಿವಿಂಗ್​​ಸ್ಟನ್ ಔಟ್

    4ನೇ ಓವರ್​ ಬೌಲ್ ಮಾಡಲು ಬಂದ ಸಿರಾಜ್​ ಆರ್​ಸಿಬಿಗೆ ಮತ್ತೊಂದು ವಿಕೆಟ್ ತಂದುಕೊಟ್ಟಿದ್ದಾರೆ. ಪಂಜಾಬ್ ಪಾಳಯದ ಡೇಂಜರಸ್ ಬ್ಯಾಟರ್ ಲಿವಿಂಗ್​ಸ್ಟನ್ ಎಲ್​ಬಿ ಬಲೆಗೆ ಬಿದ್ದರು.

  • 20 Apr 2023 05:35 PM (IST)

    ಶಾರ್ಟ್ ಔಟ್

    ಹಸರಂಗ ಎಸೆದ ಮೂರನೇ ಓವರ್​ನ ಮೊದಲ ಎಸೆತದಲ್ಲೇ ಶಾರ್ಟ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಪಂಜಾಬ್ 2ನೇ ವಿಕೆಟ್ ಪತನ

  • 20 Apr 2023 05:34 PM (IST)

    ಶಾರ್ಟ್​ ಸಿಕ್ಸ್

    ಪರ್ನೆಲ್ ಎಸೆದ 2ನೇ ಓವರ್​ನ 4ನೇ ಎಸೆತವನ್ನು ಶಾರ್ಟ್​ ಫೈನ್​ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದರು. ಕೊನೆಯ ಎಸೆತದಲ್ಲೂ ಬೌಂಡರಿ ಬಂತು.

  • 20 Apr 2023 05:26 PM (IST)

    ಪಂಜಾಬ್ ಮೊದಲ ವಿಕೆಟ್ ಪತನ

    ಗುರಿ ಬೆನ್ನಟ್ಟಿರುವ ಪಂಜಾಬ್​ಗೆ ಮೊದಲ ಓವರ್​ನಲ್ಲೇ ಆಘಾತ ಎದುರಾಗಿದೆ. ಸಿರಾಜ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಹೊಡೆದ ಟೈಡೆ, ನಂತರದ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.

  • 20 Apr 2023 05:07 PM (IST)

    175 ರನ್ ಟಾರ್ಗೆಟ್

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಹಾಗೂ ಫಾಫ್ ಅವರ ಅರ್ಧಶತಕದ ನೆರವಿನಿಂದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದೆ.

  • 20 Apr 2023 05:02 PM (IST)

    ಡಿಕೆ ಔಟ್

    19ನೇ ಓವರ್​ನಲ್ಲಿ ಮಹಿಪಾಲ್ 1 ಬೌಂಡರಿ ಹೊಡೆದರೆ, ಕಾರ್ತಿಕ್ 5ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 20 Apr 2023 04:53 PM (IST)

    3ನೇ ವಿಕೆಟ್ ಪತನ

    ನಾಯಕ ಫಾಫ್ 84 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 18ನೇ ಓವರ್​ನ 3ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಫಾಫ್ ಬೌಂಡರಿ ಬಳಿ ಕ್ಯಾಚಿತ್ತು ಔಟಾದರು.

  • 20 Apr 2023 04:52 PM (IST)

    ಫಾಫ್ ಸಿಕ್ಸರ್

    17ನೇ ಓವರ್​ನಲ್ಲಿ 2 ವಿಕೆಟ್ ಉರುಳಿದ ಬಳಿಕ ಫಾಫ್ ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು. ಆ ಬಳಿಕ 18ನೇ ಓವರ್​ನ 2ನೇ ಎಸೆತವನ್ನು ಲಾಂಗ್ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು.

  • 20 Apr 2023 04:47 PM (IST)

    ಕೊಹ್ಲಿ- ಮ್ಯಾಕ್ಸ್​ವೆಲ್ ಔಟ್

    ಪಂಜಾಬ್ ಬೌಂಡರಿಗಳಿಗೆ ಕಡಿವಾಣ ಹಾಕಿದೆ. ಇದೀಗ 17ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಕದಿಯಲು ಯತ್ನಿಸಿದ ಕೊಹ್ಲಿ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಬಂದ ಮ್ಯಾಕ್ಸ್​ವೆಲ್ ಕೂಡ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 20 Apr 2023 04:36 PM (IST)

    ಕೊಹ್ಲಿ ಲಾಂಗ್ ಆಫ್​ನಲ್ಲಿ ಸಿಕ್ಸರ್

    15ನೇ ಓವರ್​ನ ಐದನೇ ಎಸೆತವನ್ನು ಕೊಹ್ಲಿ ಲಾಂಗ್ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು.

  • 20 Apr 2023 04:31 PM (IST)

    ಕೊಹ್ಲಿ ಅರ್ಧಶತಕ

    14ನೇ ಓವರ್​ನ ಕೊನೆಯ ಎಸೆತವನ್ನ ಬೌಂಡರಿಗಟ್ಟಿದ ಕೊಹ್ಲಿ ತಮ್ಮ ಅರ್ಧಶತಕ ಪೂರೈಸಿದರು.

  • 20 Apr 2023 04:28 PM (IST)

    ಕ್ರೀಸ್‌ನಲ್ಲಿ ಕೊಹ್ಲಿ-ಡುಪ್ಲೆಸಿಸ್

    ಮೊಹಾಲಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 100 ರನ್ ಪೂರೈಸಿದೆ. 13 ಓವರ್‌ಗಳ ಅಂತ್ಯಕ್ಕೆ ತಂಡದ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 108 ರನ್ ಆಗಿದೆ. ಕೊಹ್ಲಿ (44) ಮತ್ತು ಡುಪ್ಲೆಸಿಸ್ (61) ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.

  • 20 Apr 2023 04:20 PM (IST)

    ಆರ್​ಸಿಬಿ ಶತಕ ಪೂರ್ಣ

    12ನೇ ಓವರ್​ನಲ್ಲಿ ಕೊಹ್ಲಿ ಡಬಲ್ ರನ್ ಕದಿಯುವುದರೊಂದಿಗೆ ಆರ್​ಸಿಬಿ ಮೊತ್ತವನ್ನು ಶತಕದ ಗಡಿ ದಾಟಿಸಿದ್ದಾರೆ. ಇಲ್ಲಿಂದ ಈ ಜೋಡಿ ಬಿಗ್ ಟಾರ್ಗೆಟ್ ಸೆಟ್ ಮಾಡಲು ಪ್ರಯತ್ನಿಸಬೇಕಿದೆ.

  • 20 Apr 2023 04:13 PM (IST)

    ಫಾಫ್ ಅರ್ಧಶತಕ

    10ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ಕದ್ದ ನಾಯಕ ಫಾಫ್ ತಮ್ಮ ಅರ್ಧಶತಕ ಪೂರೈಸಿದರು. ಹಾಗೆಯೇ ಈ ಓವರ್​ನಲ್ಲಿ 1 ಬೌಂಡರಿ ಕೂಡ ಬಂತು.

  • 20 Apr 2023 04:05 PM (IST)

    8 ಓವರ್ ಅಂತ್ಯ

    7ನೇ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 8ನೇ ಓವರ್​ನ ಕೊನೆಯ ಎಸೆತದಲ್ಲಿ ಫಾಫ್ ಸಿಕ್ಸರ್ ಬಾರಿಸಿದರು.

  • 20 Apr 2023 03:56 PM (IST)

    ಪವರ್ ಪ್ಲೇ ಅಂತ್ಯ

    ಸ್ಯಾಮ್ ಕರನ್ ಎಸೆದ ಪವರ್ ಪ್ಲೇಯ ಕೊನೆಯ ಓವರ್​ನಲ್ಲಿ ಫಾಫ್ ಡೀಪ್ ಮಿಡ್ ವಿಕೆಟ್​ ಮೇಲೆ ಬೌಂಡರಿ ಬಾರಿಸಿದರು. 6 ಓವರ್ ಅಂತ್ಯಕ್ಕೆ ಆರ್​ಸಿಬಿ 59/0

  • 20 Apr 2023 03:52 PM (IST)

    5 ಓವರ್ ಅಂತ್ಯ

    5ನೇ ಓವರ್​ನ 4ನೇ ಎಸೆತವನ್ನು ಸ್ಕ್ವೈರ್ ಲೆಗ್ ಕಡೆ ಬೌಂಡರಿಗಟ್ಟಿದ ಕೊಹ್ಲಿ ಕೊನೆಯ ಎಸೆತವನ್ನು ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿ ಬೌಂಡರಿಗಟ್ಟಿದರು.

  • 20 Apr 2023 03:47 PM (IST)

    ಫಾಫ್ ಸಿಕ್ಸರ್

    4ನೇ ಓವರ್​ನಲ್ಲಿ ನಾಯಕ ಫಾಫ್ 2 ಸಿಕ್ಸರ್ ಹೊಡೆದರು. ಮೊದಲ ಸಿಕ್ಸರ್ ಬೌಲರ್ ತಲೆಯ ಮೇಲೆ ಬಂದರೆ, 2ನೇ ಸಿಕ್ಸರ್ ಲಾಂಗ್ ಆನ್​ನಿಂದ ಬಂತು.

  • 20 Apr 2023 03:44 PM (IST)

    2 ಬೌಂಡರಿ

    ಅರ್ಶದೀಪ್ ಎಸೆದ ಮೂರನೇ ಓವರ್​ನಲ್ಲಿ ಕೊಹ್ಲಿ 2 ಬೌಂಡರಿ ಹೊಡೆದರು. ಮೊದಲ ಬೌಂಡರಿ ಫೈನ್ ಲೆಗ್ ಕಡೆ ಬಂದರೆ, 2ನೇ ಬೌಂಡರಿ ಪಾಯಿಂಟ್ ದಿಕ್ಕಿನಿಂದ ಬಂತು.

  • 20 Apr 2023 03:38 PM (IST)

    ಕೊಹ್ಲಿ ಬೌಂಡರಿ

    ಬ್ರಾರ್ ಎಸೆದ 2ನೇ ಓವರ್​​ನ 4ನೇ ಎಸೆತದಲ್ಲಿ ಕೊಹ್ಲಿ ಕವರ್ಸ್​ನಲ್ಲಿ ಬೌಂಡರಿ ಬಾರಿಸಿದರು.

  • 20 Apr 2023 03:36 PM (IST)

    ಆರ್​ಸಿಬಿ ಬ್ಯಾಟಿಂಗ್ ಆರಂಭ

    ಆರ್​ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ಕೊಹ್ಲಿ ಹಾಗೂ ಡುಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಶದೀಪ್ ಸಿಂಗ್ ಎಸೆದ ಮೊದಲ ಓವರ್​ನಲ್ಲಿ 5 ರನ್ ಬಂದವು.

  • 20 Apr 2023 03:16 PM (IST)

    ಪಂಜಾಬ್ ಕಿಂಗ್ಸ್‌

    ಅರ್ಥವ್ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್

  • 20 Apr 2023 03:16 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವೇಯ್ನ್ ಪಾರ್ನೆಲ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

  • 20 Apr 2023 03:03 PM (IST)

    ಟಾಸ್ ಗೆದ್ದ ಪಂಜಾಬ್

    ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 20 Apr 2023 02:46 PM (IST)

    ಆರ್​ಸಿಬಿ- ಪಂಜಾಬ್ ಮುಖಾಮುಖಿ

    ಐಪಿಎಲ್​ನ 27 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.

  • Published On - Apr 20,2023 2:44 PM

    Follow us