Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಡೆಲ್ಲಿ ಆಟಗಾರರು ಕಳೆದುಕೊಂಡಿದ್ದ 16 ಬ್ಯಾಟ್, ಪ್ಯಾಡ್, ಗ್ಲೌಸ್, ಪತ್ತೆ! ಆದರೆ..?

IPL 2023: ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ಕಳುವಾಗಿದ್ದ ಡೆಲ್ಲಿ ಆಟಗಾರರ 16 ಬ್ಯಾಟ್, ಪ್ಯಾಡ್, ಗ್ಲೌಸ್, ಸನ್ ಗ್ಲಾಸ್ ಸೇರಿದಂತೆ ಇತರ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

IPL 2023: ಡೆಲ್ಲಿ ಆಟಗಾರರು ಕಳೆದುಕೊಂಡಿದ್ದ 16 ಬ್ಯಾಟ್, ಪ್ಯಾಡ್, ಗ್ಲೌಸ್, ಪತ್ತೆ! ಆದರೆ..?
ಡೇವಿಡ್ ವಾರ್ನರ್
Follow us
ಪೃಥ್ವಿಶಂಕರ
|

Updated on:Apr 21, 2023 | 5:41 PM

ತನ್ನ ಆರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಸೋಲಿಸಿ ಲೀಗ್​ನಲ್ಲಿ ಮೊದಲ ಗೆಲುವು ದಾಖಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ (Kolkata Knight Riders vs Delhi Capitals) ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ಕಳುವಾಗಿದ್ದ ಡೆಲ್ಲಿ ಆಟಗಾರರ 16 ಬ್ಯಾಟ್, ಪ್ಯಾಡ್, ಗ್ಲೌಸ್, ಸನ್ ಗ್ಲಾಸ್ ಸೇರಿದಂತೆ ಇತರ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಸ್ವತಃ ಈ ವಿಚಾರವನ್ನು ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ (David Warner) ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದರೊಂದಿಗೆ ಮಾಹಿತಿ ನೀಡಿದ್ದಾರೆ. ಡೆಲ್ಲಿ ನಾಯಕ ಡೇವಿಡ್ ಮಾರ್ನ​ರ್ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಲವು ಬ್ಯಾಟ್​ಗಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ ಆದರೆ ಇನ್ನೂ ಕೆಲವು ವಸ್ತುಗಳು ನಾಪತ್ತೆಯಾಗಿವೆ ಎಂದು ಬರೆದುಕೊಂಡಿದ್ದಾರೆ.

ಏನಿದು ಪ್ರಕರಣ?

ವಾಸ್ತವವಾಗಿ ಇದೇ ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡಿದ್ದ ಡೆಲ್ಲಿ ತಂಡ ಆ ಬಳಿಕ ದೆಹಲಿಗೆ ವಾಪಸ್ಸಾಗಿತ್ತು. ತಂಡದ ಆಟಗಾರರೆಲ್ಲರೂ ಹೋಟೆಲ್ ತಲುಪಿದ್ದರು. ಆದರೆ ಎಲ್ಲಾ ಆಟಗಾರರ ಲಗೇಜ್​ಗಳು ಒಂದು ದಿನದ ನಂತರ ಆಟಗಾರರ ಕೈ ಸೇರಿದ್ದವು. ಈ ವೇಳೆ ಆಟಗಾರರೆಲ್ಲರು ತಮ್ಮ ತಮ್ಮ ಲಗೇಜ್ ಬ್ಯಾಗ್ ತೆರೆದಾಗ ಅವರೆಲ್ಲರಿಗೂ ಶಾಕ್ ಕಾದಿತ್ತು. ಏಕೆಂದರೆ ಲಗೇಜ್ ಬ್ಯಾಗ್​ನಲ್ಲಿ ಆಟಗಾರರು ಇರಿಸಿದ್ದ ಬ್ಯಾಟ್, ಪ್ಯಾಡ್, ಶೂ ಹಾಗೂ ಗ್ಲೌಸ್‌ ಸೇರಿದಂತೆ ಹಲವು ವಸ್ತುಗಳು ಬ್ಯಾಗ್​ನಿಂದ ನಾಪತ್ತೆಯಾಗಿದ್ದವು. ಡೇವಿಡ್ ವಾರ್ನರ್, ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಅವರ ಬ್ಯಾಟ್‌ಗಳು ಮಿಸ್ ಆಗಿದ್ದು, ಈ ವಿದೇಶಿ ಆಟಗಾರರು ಕಳೆದುಕೊಂಡ ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ. ಎಂದು ವರದಿಯಾಗಿತ್ತು.

IPL 2023: ನಿಷೇಧದ ಭೀತಿಯಲ್ಲಿ ಐದು ತಂಡಗಳ ನಾಯಕರು! ಫಾಫ್ ಡು ಪ್ಲೆಸಿಸ್​ಗೂ ಸಂಕಷ್ಟ

ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ.

ಇಷ್ಟೇ ಅಲ್ಲದೆ ಕೆಲ ಆಟಗಾರರ ಶೂ ಹಾಗೂ ಗ್ಲೌಸ್‌ಗಳನ್ನೂ ಕಳವು ಮಾಡಲಾಗಿತ್ತು. ಅದರಲ್ಲೂ ಡೆಲ್ಲಿ ತಂಡದ ಯುವ ಬ್ಯಾಟರ್ ಯಶ್ ಧುಲ್ ಅವರ ಐದು ಬ್ಯಾಟ್​ಗಳನ್ನು ಕಳ್ಳತನ ಮಾಡಲಾಗಿತ್ತು. ಮಿಚೆಲ್‌ ಮಾರ್ಷ್‌ ಅವರ ಎರಡು ಬ್ಯಾಟ್‌ಗಳನ್ನೂ ಕಳವು ಮಾಡಲಾಗಿತ್ತು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಮೂರು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದರು. ಇನ್ನು ಕೆಲ ಆಟಗಾರರ ಬಗ್ಗೆ ಹೇಳುವುದಾದರೆ ಅವರ ಕೈಗವಸು, ಬೂಟು ಮತ್ತಿತರ ವಸ್ತುಗಳನ್ನು ಕಳವು ಮಾಡಲಾಗಿತ್ತು.

ಡೆಲ್ಲಿಗೆ ಮೊದಲ ಗೆಲುವು

ಸತತ ಐದು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2023 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಫಿರೋಜ್ ಷಾ ಕೋಟ್ಲಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ ತಂದುಕೊಟ್ಟಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ 6ನೇ ಪಂದ್ಯದಲ್ಲಿ ಸುಲಭವಾಗಿ ಗುರಿ ಮುಟ್ಟುವ ಸೂಚನೆ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆ ಕೊನೆಯಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡು ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ನಾಯಕ ವಾರ್ನರ್ ಅರ್ಧಶತಕದ ಸ್ಫೋಟಕ ಆರಂಭ ನೀಡಿದರಾದರೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಡೆಲ್ಲಿ ತಿಣುಕಾಡುತ್ತ ಗೆಲುವು ಸಾಧಿಸಿತು.

ಇದೀಗ ಎರಡನೇ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ತಂಡ ತನ್ನ ಮುಂದಿನ ಪಂದ್ಯವನ್ನು ಸೋಮವಾರ ಅಂದರೆ, ಏಪ್ರಿಲ್ 24 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಡೆಲ್ಲಿ ಇದುವರೆಗೆ 6 ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ನಿರಂತರ ಗೆಲುವಿನಿಂದ ಟೂರ್ನಿಯಲ್ಲಿ ಉಳಿಯುವ ಸಾಧ್ಯತೆಯೂ ಜೀವಂತವಾಗಿರಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Fri, 21 April 23

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ