
IPL 2023: ಮೊದಲ ಓವರ್ನಲ್ಲೇ ಮೊದಲ ವಿಕೆಟ್…ಟ್ರೆಂಟ್ ಬೌಲ್ಟ್ (Trent Boult) ಅವರ ಟ್ರೇಡ್ ಮಾರ್ಕ್ ಈ ಬಾರಿಯ ಐಪಿಎಲ್ನಲ್ಲೂ ಮುಂದುವರೆದಿದೆ. ಗುವಾಹಟಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಆರಂಭಿಕ ಆಘಾತ ನೀಡುವ ಮೂಲಕ ಬೌಲ್ಟ್ ಮತ್ತೊಮ್ಮೆ ಗಮನ ಸೆಳೆದರು. ಆದರೆ ಈ ಬಾರಿ ಮೊದಲ ವಿಕೆಟ್ ಪತನಕ್ಕೆ ಸಾಥ್ ನೀಡಿದ್ದು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (Sanju Samson) ಎಂಬುದು ವಿಶೇಷ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ (60) ಹಾಗೂ ಜೋಸ್ ಬಟ್ಲರ್ (79) ಸ್ಪೋಟಕ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಹೆಟ್ಮೆಯರ್ ಕೂಡ 21 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 199 ಕ್ಕೆ ತಂದು ನಿಲ್ಲಿಸಿದರು.
200 ರನ್ಗಳ ಕಠಿಣ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಆರಂಭಿಕರಾಗಿ ಮೈದಾನಕ್ಕಿಳಿದರು. ಸ್ಟ್ರೈಕ್ ತೆಗೆದುಕೊಂಡ ಪೃಥ್ವಿ ಶಾ ಟ್ರೆಂಟ್ ಬೌಲ್ಟ್ ಅವರ ಮೊದಲೆರಡು ಎಸೆತಗಳನ್ನು ಎದುರಿಸಲು ವಿಫಲರಾದರು. ಎಲ್ಬಿಡಬ್ಲ್ಯೂ ಅನ್ನೇ ಟಾರ್ಗೆಟ್ ಮಾಡಿ ಎಸೆದ ಬೌಲ್ಟ್ ಅವರ ಮೂರನೇ ಎಸೆತವು ಪೃಥ್ವಿ ಶಾ ಅವರ ಬ್ಯಾಟ್ ಸವರಿ ಸ್ಲಿಪ್ನತ್ತ ಚಿಮ್ಮಿತ್ತು.
ಕ್ಷಣಾರ್ಧದಲ್ಲೇ ಬಲಭಾಗಕ್ಕೆ ಅದ್ಭುತವಾಗಿ ಡೈವ್ ಹೊಡೆದ ಸಂಜು ಸ್ಯಾಮ್ಸನ್ ಒಂದೇ ಕೈಯಲ್ಲಿ ಚೆಂಡನ್ನು ಬಂಧಿಸಿದರು. ಈ ಅತ್ಯದ್ಭುತ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಸ್ಯಾಮ್ಸನ್ ಅವರ ವಿಕೆಟ್ ಕೀಪಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
How about THAT for a start! ?
WHAT. A. CATCH from the #RR skipper ⚡️⚡️#DC lose Impact Player Prithvi Shaw and Manish Pandey in the first over!
Follow the match ▶️ https://t.co/FLjLINwRJC#TATAIPL | #RRvDC pic.twitter.com/rpOzCFrWdQ
— IndianPremierLeague (@IPL) April 8, 2023
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಜೋಸ್ ಬಟ್ಲರ್ , ಯಶಸ್ವಿ ಜೈಸ್ವಾಲ್ , ಸಂಜು ಸ್ಯಾಮ್ಸನ್ (ನಾಯಕ) , ರಿಯಾನ್ ಪರಾಗ್ , ಶಿಮ್ರಾನ್ ಹೆಟ್ಮೆಯರ್ , ಧ್ರುವ ಜುರೆಲ್ , ರವಿಚಂದ್ರನ್ ಅಶ್ವಿನ್ , ಜೇಸನ್ ಹೋಲ್ಡರ್ , ಟ್ರೆಂಟ್ ಬೌಲ್ಟ್ , ಸಂದೀಪ್ ಶರ್ಮಾ , ಯುಜ್ವೇಂದ್ರ ಚಾಹಲ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ) , ಮನೀಶ್ ಪಾಂಡೆ , ರಿಲೀ ರೊಸೊವ್ , ರೋವ್ಮನ್ ಪೊವೆಲ್ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ಅಭಿಷೇಕ್ ಪೊರೆಲ್ , ಅನ್ರಿಕ್ ನೋಕಿಯಾ, ಖಲೀಲ್ ಅಹ್ಮದ್ , ಕುಲದೀಪ್ ಯಾದವ್ , ಮುಖೇಶ್ ಕುಮಾರ್.
Published On - 6:32 pm, Sat, 8 April 23