ಮೇ 26 ರಂದು ಚೆನ್ನೈನಲ್ಲಿ ನಡೆದ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಕೇವಲ 113 ರನ್‌ಗಳಿಗೆ ಕಟ್ಟಿಹಾಕಿತು. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಸಾಲು ಸಾಲು ವಿಕೆಟ್ ನಷ್ಟದಿಂದ ನಾಯಕ ಪ್ಯಾಟ್ ಕಮಿನ್ಸ್ ತಂಡವು ಐಪಿಎಲ್ ಫೈನಲ್ಸ್ ಇತಿಹಾಸದಲ್ಲಿ ಸಾರ್ವಕಾಲಿಕ ಅನಗತ್ಯ ದಾಖಲೆಯನ್ನು ಬರೆದಿದೆ.
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಅತ್ಯಂತ ಕಡಿಮೆ ರನ್ಗಳನ್ನು ದಾಖಲಿಸಿತು. 2024ರ 17ನೇ ಆವೃತ್ತಿಯ ಐಪಿಎಲ್ನ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ಮೂರು ಬಾರಿ 250ಕ್ಕೂ ಹೆಚ್ಚು ಮೊತ್ತಗಳೊಂದಿಗೆ ಪ್ರಾಬಲ್ಯ ಸಾಧಿಸಿದ ಬಳಿಕ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ರೋಚಕ ಕದನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ತಮ್ಮ ಫಾರ್ಮ್ ಅನ್ನು ಪುನರಾವರ್ತಿಸಲು ಹೆಣಗಾಡಿತು.
ಇದನ್ನೂ ಓದಿ: “ಅಭಿನಂದನೆ ಕೆಕೆಆರ್” ಸಾಲು ಸಾಲು ವಿಕೆಟ್ನಿಂದ ತತ್ತರಿಸಿದ ಎಸ್‌ಆರ್‌ಹೆಚ್: ಕೋಲ್ಕತ್ತಾ ವಿನ್ ಎಂದ ನೆಟ್ಟಿಗರು
ಈ ಹಿಂದೆ ಐಪಿಎಲ್ 2017 ರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ 129/8 ಮೊತ್ತಕ್ಕೆ ಸೀಮಿತವಾದಾಗ ಐಪಿಎಲ್ ಫೈನಲ್‌ನಲ್ಲಿ ಕಡಿಮೆ ಮೊತ್ತದ ದಾಖಲೆಯನ್ನು ಹೊಂದಿತ್ತು. ಮುಖ್ಯವಾಗಿ ಐದು ಬಾರಿ ಚಾಂಪಿಯನ್‌ಗಳು ತಮ್ಮ ಎದುರಾಳಿಯನ್ನು ಕೇವಲ 125 ರನ್‌ಗಳಿಂದ ಕಟ್ಟಿಹಾಕಲಾಗಿತ್ತು.
ನಾಯಕ ಪ್ಯಾಟ್ ಕಮ್ಮಿನ್ಸ್ 19 ಎಸೆತಗಳಲ್ಲಿ 24 ರನ್ ಗಳಿಸಿ ತಮ್ಮ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇನ್-ಫಾರ್ಮ್ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಏಕ-ಅಂಕಿಯ ಸ್ಕೋರ್‌ಗಳೊಂದಿಗೆ ಕೊಡುಗೆ ನೀಡಲು ಹೆಣಗಾಡಿದರು. ಆದರೆ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 17 ಎಸೆತಗಳಲ್ಲಿ 16 ರನ್ ಕಬಳಿಸಿದರು.
ಇದನ್ನೂ ಓದಿ: IPL 2024 Final: ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಕಿರೀಟ ತೊಟ್ಟ ಕೆಕೆಆರ್..!
ಮಿಚೆಲ್ ಸ್ಟಾರ್ಕ್ ಮೊದಲ ಓವರ್‌ನಲ್ಲಿಯೇ ಅಭಿಷೇಕ್‌ರನ್ನು ಔಟ್ ಮಾಡಿದರು. ಬಳಿಕ ರಾಹುಲ್ ತ್ರಿಪಾಠಿ ವಿಕೆಟ್ ಪಡೆದುಕೊಳ್ಳುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಒತ್ತಡಕ್ಕೆ ತಳ್ಳಿದರು. ಆಂಡ್ರೆ ರಸೆಲ್ 19 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಹರ್ಷಿತ್ ರಾಣಾ 2 ವಿಕೆಟ್‌ಗಳನ್ನು ಪಡೆದುಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.