T20 World Cup 2024: ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಗೈರು! ತಂಡ ಸೇರಿಕೊಳ್ಳುವುದು ಯಾವಾಗ?
T20 World Cup 2024: ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಿಂದ ಆರ್‌ಸಿಬಿ ಹೊರಬಿದ್ದ ನಂತರ ವಿರಾಟ್ ಕೊಹ್ಲಿ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಕೊಹ್ಲಿ ತಮ್ಮ ವಿರಾಮವನ್ನು ವಿಸ್ತರಿಸಲು ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಕೂಡ ವಿರಾಟ್ ನಿರ್ಧಾರವನ್ನು ಗೌರವಿಸಿದ್ದು, ಕೊಹ್ಲಿ ಅಮೆರಿಕಕ್ಕೆ ತೆರಳುವ ದಿನಾಂಕವನ್ನು ವಿಸ್ತರಿಸಿದೆ ಎಂದು ವರದಿಯಾಗಿದೆ.