IPL 2024: ರಾಹುಲ್ ಬೆನ್ನಿಗೆ ನಿಂತ ಮಾಜಿ ಕೋಚ್; ಸಂಜೀವ್ ಗೋಯೆಂಕಾ ವಿರುದ್ಧ ಗಂಭೀರ್ ಗರಂ..!

|

Updated on: May 10, 2024 | 9:26 PM

IPL 2024: ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಗೌತಮ್ ಗಂಭೀರ್ ಮಾಜಿ ತಂಡದ ಮಾಲೀಕನ ಹೆಸರನ್ನುನ ತೆಗೆದುಕೊಳ್ಳದೆ ಹಾಲಿ ತಂಡದ ಮಾಲೀಕ ಶಾರುಖ್ ಖಾನ್ ಅವರನ್ನು ಉದಾಹರಣೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

IPL 2024: ರಾಹುಲ್ ಬೆನ್ನಿಗೆ ನಿಂತ ಮಾಜಿ ಕೋಚ್; ಸಂಜೀವ್ ಗೋಯೆಂಕಾ ವಿರುದ್ಧ ಗಂಭೀರ್ ಗರಂ..!
ಗೌತಮ್ ಗಂಭೀರ್
Follow us on

ಮೇ 8 ರಂದು ನಡೆದ ಸನ್​ರೈಸರ್ಸ್​ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ (SRH vs LSG) ತಂಡ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತ್ತು. ಲಕ್ನೋ ನೀಡಿದ್ದ 165 ರನ್​ಗಳ ಗುರಿಯನ್ನು ಹೈದರಾಬಾದ್‌ ತಂಡ 9.4 ಓವರ್​ಗಳಲ್ಲಿ ಬೆನ್ನಟ್ಟಿತ್ತು. ಹೀನಾಯ ಸೋಲಿನ ಬಳಿಕ ತಾಳ್ಮೆ ಕಳೆದುಕೊಂಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಲಕ್ನೋ ನಾಯಕ ಕೆಎಲ್ ರಾಹುಲ್ (KL Rahul) ಮೇಲೆ ಎಲ್ಲರೆದುರೆ ಹರಿಹಾಯ್ದಿದ್ದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆ ಬಳಿಕ ಎಲ್ಲರೂ ಸಂಜೀವ್ ಗೋಯೆಂಕಾ ಅವರ ನಡೆಯನ್ನು ಟೀಕಿಸಿದ್ದರು. ಇದೀಗ ಟೀಂ ಇಂಡಿಯಾ ಆಟಗಾರರು ಕೂಡ ಈ ವಿಚಾರದಲ್ಲಿ ಸಂಜೀವ್ ಗೋಯೆಂಕಾ ಅವರನ್ನು ಟೀಕಿಸಲು ಆರಂಭಿಸಿದ್ದಾರೆ.

ಮೊದಲಿಗೆ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಎಲ್ಲರ ಮುಂದೆ ಈ ರೀತಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ, ಡ್ರೆಸ್ಸಿಂಗ್ ರೂಮ್‌ನಲ್ಲೇ ಇದೆಲ್ಲಾ ನಡೆಯಬೇಕು ಎಂದಿದ್ದರು. ಇದೀಗ ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಗೌತಮ್ ಗಂಭೀರ್ ಮಾಜಿ ತಂಡದ ಮಾಲೀಕನ ಹೆಸರನ್ನುನ ತೆಗೆದುಕೊಳ್ಳದೆ ಹಾಲಿ ತಂಡದ ಮಾಲೀಕ ಶಾರುಖ್ ಖಾನ್ ಅವರನ್ನು ಉದಾಹರಣೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

IPL 2024: ‘ಮಾತನಾಡುವುದಕ್ಕೂ ಮಿತಿ ಇರಬೇಕು’; ಸಂಜೀವ್ ಗೋಯೆಂಕಾ ವಿರುದ್ಧ ಶಮಿ ವಾಗ್ದಾಳಿ

ಗೌತಮ್ ಗಂಭೀರ್ ಹೇಳಿದ್ದೇನು?

ಕಾರ್ಯಕ್ರಮವೊಂದರಲ್ಲಿ ಸಂವಾದದ ವೇಳೆ ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ‘ನಮ್ಮ ದೇಶದಲ್ಲಿ ತಜ್ಞರು ಮತ್ತು ತಂಡದ ಮಾಲೀಕರು ಕೇವಲ ಒಂದು ನಿಮಿಷ ಪಂದ್ಯವನ್ನು ವೀಕ್ಷಿಸಿದ ನಂತರ ಟೀಕಿಸಲು ಪ್ರಾರಂಭಿಸುತ್ತಾರೆ. ಆ ರೀತಿಯ ಒತ್ತಡವನ್ನು ಎದುರಿಸಿದಾಗಲೇ ಈ ರೀತಿಯ ಟೀಕೆ ಬರಬೇಕು. ಶಾರುಖ್ ಖಾನ್ ಅವರಿಗೆ ಈ ವಿಷಯಗಳು ತಿಳಿದಿವೆ. ಹೋರಾಟ ಮತ್ತು ಒತ್ತಡ ಏನು ಎಂದು ಅವರಿಗೆ ತಿಳಿದಿದೆ ಎಂದು ತಾನು ಕಾರ್ಯನಿರ್ವಹಿಸಿದ ಮಾಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಹೆಸರನ್ನು ಎಲ್ಲೂ ಹೇಳದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಟಗಾರರ ಬೆನ್ನಿಗೆ ನಿಲ್ಲುವ ಶಾರುಖ್

ಅಂದಹಾಗೆ, ಗೌತಮ್ ಗಂಭೀರ್ ಅವರ ಮಾತು ಸಂಪೂರ್ಣ ನಿಜ. ಕೋಲ್ಕತ್ತಾ ನೈಟ್ ರೈಡರ್ಸ್ ಈ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಚಾಂಪಿಯನ್ ಆಗಲು ದೊಡ್ಡ ಸ್ಪರ್ಧಿಯಾಗಿದೆ. ಆದರೆ ಕಳೆದ ಕೆಲವು ಸೀಸನ್​ನಲ್ಲಿ ಈ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಇದರ ಹೊರತಾಗಿಯೂ, ಶಾರುಖ್ ಖಾನ್ ತಮ್ಮ ತಂಡವನ್ನು ಬೆಂಬಲಿಸಿದ್ದರು. ಸೋಲಿನ ನಡುವೆಯೂ ತನ್ನ ಆಟಗಾರರನ್ನು ಮಾತ್ರವಲ್ಲದೆ ಎದುರಾಳಿಯ ಆಟಗಾರರನ್ನೂ ಅಪ್ಪಿಕೊಂಡು ಪ್ರೋತ್ಸಾಹ ನೀಡುತ್ತಿದ್ದರು.

ಆದರೆ ಸಂಜೀವ್ ಗೋಯೆಂಕಾ ಅವರ ವರ್ತನೆ ಸ್ವಲ್ಪ ವಿಭಿನ್ನವಾಗಿದೆ. ಸಂಜೀವ್ ಗೋಯೆಂಕಾ ಅವರ ಈ ರೀತಿಗೆ ವರ್ತನೆಗೆ ಗುರಿಯಾಗಿದ್ದು ಕೆಎಲ್ ರಾಹುಲ್ ಮಾತ್ರವಲ್ಲ. ಇದಕ್ಕೂ ಮೊದಲು ಪುಣೆ ಸೂಪರ್‌ಜೈಂಟ್ಸ್ ತಂಡದ ಮಾಲೀಕರಾಗಿದ್ದ ಸಂಜೀವ್ ಗೋಯೆಂಕಾ ಅಂದಿನ ತಂಡದ ನಾಯಕರಾಗಿದ್ದ ಧೋನಿಯನ್ನು ಕಳಪೆ ಪ್ರದರ್ಶನದ ಆಧಾರದ ಮೇಲೆ ನಾಯಕತ್ವದಿಂದ ತೆಗೆದುಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Fri, 10 May 24