IPL 2024: ಐಪಿಎಲ್ ಹರಾಜಿನಲ್ಲಿ 12 ಕನ್ನಡಿಗರಿಗೆ ಭಾರೀ ನಿರಾಸೆ..!

| Updated By: ಝಾಹಿರ್ ಯೂಸುಫ್

Updated on: Dec 21, 2023 | 10:01 AM

IPL 2024 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕರ್ನಾಟಕದ ಯಾವುದೇ ಆಟಗಾರಿನಿಗೂ ಈ ಬಾರಿ ಅವಕಾಶ ನೀಡದಿರುವುದು ಅಚ್ಚರಿ. ತಂಡದಲ್ಲಿ ಮೂವರು ದೇಶೀಯ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಯಿದ್ದರೂ ಈ ಸ್ಲಾಟ್​ಗಳಲ್ಲಿ ಆರ್​ಸಿಬಿ ಹೊರರಾಜ್ಯದ ಯುವ ಆಟಗಾರರನ್ನು ಖರೀದಿಸಿ ಅಚ್ಚರಿ ಮೂಡಿಸಿದೆ.

IPL 2024: ಐಪಿಎಲ್ ಹರಾಜಿನಲ್ಲಿ 12 ಕನ್ನಡಿಗರಿಗೆ ಭಾರೀ ನಿರಾಸೆ..!
Karun-Cariappa-Suchith
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ ನಡೆದ ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಂಡಿತ್ತು. ಇವರಲ್ಲಿ ಕೇವಲ 72 ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ಲಭಿಸಿದೆ. ಇತ್ತ ಈ ಪಟ್ಟಿಯಲ್ಲಿದ್ದ 14 ಕರ್ನಾಟಕದ ಆಟಗಾರರಲ್ಲಿ ಹರಾಜಾಗಿದ್ದು ಕೇವಲ ಇಬ್ಬರು ಮಾತ್ರ. ಅದು ಕೂಡ ಬೇಸ್​ ಪ್ರೈಸ್​ಗೆ ಎಂಬುದೇ ಅಚ್ಚರಿ.

ಈ ಬಾರಿಯ ಹರಾಜಿಗಾಗಿ ಆಯ್ಕೆ ಮಾಡಲಾದ ಆಟಗಾರರ ಪಟ್ಟಿಯಲ್ಲಿ ಕರ್ನಾಟಕದ ಒಟ್ಟು 14 ಪ್ಲೇಯರ್ಸ್​ ಹೆಸರು ಕಾಣಿಸಿಕೊಂಡಿತ್ತು. ಆದರೆ ಆಕ್ಷನ್ ಟೇಬಲ್​ನಲ್ಲಿದ್ದ 10 ಫ್ರಾಂಚೈಸಿಗಳ ಪೈಕಿ 8 ತಂಡಗಳು ಕರ್ನಾಟಕದ ಆಟಗಾರರಿಗೆ ಮಣೆ ಹಾಕಲು ನಿರಾಸಕ್ತಿ ತೋರಿತು.

ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕರ್ನಾಟಕದ ಯಾವುದೇ ಆಟಗಾರಿನಿಗೂ ಈ ಬಾರಿ ಅವಕಾಶ ನೀಡದಿರುವುದು ಅಚ್ಚರಿ. ತಂಡದಲ್ಲಿ ಮೂವರು ದೇಶೀಯ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಯಿದ್ದರೂ ಈ ಸ್ಲಾಟ್​ಗಳಲ್ಲಿ ಆರ್​ಸಿಬಿ ಹೊರರಾಜ್ಯದ ಯುವ ಆಟಗಾರರನ್ನು ಖರೀದಿಸಿ ಅಚ್ಚರಿ ಮೂಡಿಸಿದೆ.

ಐಪಿಎಲ್​ 2024 ರಲ್ಲಿ ಹರಾಜಾದ ಕರ್ನಾಟಕದ ಆಟಗಾರರು:

ಶ್ರೇಯಸ್ ಗೋಪಾಲ್: ಈ ಬಾರಿಯ ಐಪಿಎಲ್​ನಲ್ಲಿ ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಬೇಸ್​ ಪ್ರೈಸ್​ಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ.

ಮನೀಶ್ ಪಾಂಡೆ: ಈ ಬಾರಿಯ ಐಪಿಎಲ್ ಹರಾಜಿನ ಮೊದಲ ಸೆಟ್​ನಲ್ಲೇ ಕಾಣಿಸಿಕೊಂಡಿದ್ದ ಮನೀಶ್ ಪಾಂಡೆ ಅವರ ಖರೀದಿಗೆ ಆರಂಭದಲ್ಲಿ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿರಲಿಲ್ಲ. ಅಂತಿಮ ಸುತ್ತಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 50 ಲಕ್ಷ ರೂ. ಮೂಲಬೆಲೆಗೆ ಮನೀಶ್ ಪಾಂಡೆಯನ್ನು ಖರೀದಿಸಿತು.

ಹರಾಜಾಗದ ಕರ್ನಾಟಕದ ಆಟಗಾರರು:

  1. ಕರುಣ್ ನಾಯರ್
  2. ಜಗದೀಶ್ ಸುಚಿತ್
  3. ಶುಭಾಂಗ್ ಹೆಗ್ಡೆ
  4. ನಿಹಾಲ್ ಉಲ್ಲಾಳ್
  5. ಬಿಆರ್​ ಶರತ್
  6. ಮನ್ವಂತ್ ಕುಮಾರ್
  7. ಎಲ್​ಆರ್​ ಚೇತನ್
  8. ಕೆಎಲ್​ ಶ್ರೀಜಿತ್​
  9. ಎಂ. ವೆಂಕಟೇಶ್​
  10. ಮೋನಿಶ್​ ರೆಡ್ಡಿ
  11. ಅಭಿಲಾಷ್​ ಶೆಟ್ಟಿ
  12. ಕೆ.ಸಿ ಕಾರ್ಯಪ್ಪ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ಅತ್ಯಧಿಕ ವೇತನ ಪಡೆಯುವ 10 ಆಟಗಾರರು: ಲಿಸ್ಟ್​ನಲ್ಲಿಲ್ಲ ವಿರಾಟ್ ಕೊಹ್ಲಿ..!

IPL 2024 ರ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲ್​ ಆದ ಟಾಪ್-5 ಆಟಗಾರರು:

  1. ಮಿಚೆಲ್ ಸ್ಟಾರ್ಕ್ – ಕೋಲ್ಕತ್ತಾ ನೈಟ್ ರೈಡರ್ಸ್ (24.75 ಕೋಟಿ ರೂ.)
  2. ಪ್ಯಾಟ್ ಕಮಿನ್ಸ್- ಸನ್​ರೈಸರ್ಸ್ ಹೈದರಾಬಾದ್ (20.50 ಕೋಟಿ ರೂ.)
  3. ಡೇರಿಲ್ ಮಿಚೆಲ್- ಚೆನ್ನೈ ಸೂಪರ್ ಕಿಂಗ್ಸ್ (14 ಕೋಟಿ ರೂ.)
  4. ಹರ್ಷಲ್ ಪಟೇಲ್- ಪಂಜಾಬ್ ಕಿಂಗ್ಸ್ (11.75 ಕೋಟಿ ರೂ.)
  5. ಅಲ್ಝಾರಿ ಜೋಸೆಫ್- ರಾಯಲ್ ಚಾಲೆಂಜರ್ಸ್ ಬೆಂಗಳೂರು (11.50 ಕೋಟಿ ರೂ.)