IND vs SA: ಟೀಮ್ ಇಂಡಿಯಾ ಆಟಗಾರನಿಗೆ ಇದು ಲಾಸ್ಟ್ ಚಾನ್ಸ್..?
IND vs SA: ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಹ ಬಲಿಷ್ಠ ಬ್ಯಾಟರ್ಗಳಿದ್ದಾರೆ. ಇವರ ಜೊತೆಗೆ ಯುವ ದಾಂಡಿಗರಾದ ತಿಲಕ್ ವರ್ಮಾ, ರಿಂಕು ಸಿಂಗ್ ಕೂಡ ಮಿಂಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಖಾಯಂಗೊಳಿಸಲು ಇಂದಿನ ಪಂದ್ಯದಲ್ಲಿ ಸ್ಯಾಮ್ಸನ್ ಭರ್ಜರಿ ಪ್ರದರ್ಶನ ನೀಡಲೇಬೇಕು.
ಪಾರ್ಲ್ನ ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂನಲ್ಲಿ ಇಂದು ಭಾರತ-ಸೌತ್ ಆಫ್ರಿಕಾ (India vs South Africa) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಸರಣಿ ನಿರ್ಣಾಯಕ. 3 ಪಂದ್ಯಗಳ ಏಕದಿನ ಸರಣಿಯು ಇದೀಗ 1-1 ಸಮಬಲದಲ್ಲಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ. ಹೀಗಾಗಿ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಅತ್ತ ಭಾರತೀಯ ಬ್ಯಾಟರ್ಗೂ ಈ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.
ಹೌದು, ಟೀಮ್ ಇಂಡಿಯಾಗೆ ರಿಎಂಟ್ರಿ ಕೊಟ್ಟಿರುವ ಸಂಜು ಸ್ಯಾಮ್ಸನ್‌ಗೆ ಇದುವೇ ಕೊನೆಯ ಅವಕಾಶವಾಗಬಹುದು. ಏಕೆಂದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ಇನ್ನು ಎರಡನೇ ಪಂದ್ಯದಲ್ಲಿ ಅವರು ವಿಫಲರಾಗಿದ್ದರು. ಮೂರನೇ ವಿಕೆಟ್ ಪತನದ ಬಳಿಕ 27ನೇ ಓವರ್ನಲ್ಲಿ ಕ್ರೀಸ್ಗೆ ಇಳಿದ ಸ್ಯಾಮ್ಸನ್ 23 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು.
ಇದೀಗ ಸರಣಿಯ ಕೊನೆಯ ಪಂದ್ಯ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇದು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಿಗುವ ಕೊನೆಯ ಅವಕಾಶ. ಏಕೆಂದರೆ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಹ ಬಲಿಷ್ಠ ಬ್ಯಾಟರ್ಗಳಿದ್ದಾರೆ. ಇವರ ಜೊತೆಗೆ ಯುವ ದಾಂಡಿಗರಾದ ತಿಲಕ್ ವರ್ಮಾ, ರಿಂಕು ಸಿಂಗ್ ಕೂಡ ಮಿಂಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಖಾಯಂಗೊಳಿಸಲು ಇಂದಿನ ಪಂದ್ಯದಲ್ಲಿ ಸ್ಯಾಮ್ಸನ್ ವಿಶೇಷ ಸಾಧನೆ ಮಾಡಲೇಬೇಕು.
ಸಂಜು ಸತತ ವೈಫಲ್ಯ:
ಸ್ಯಾಮ್ಸನ್ 2015 ರಲ್ಲಿ ಟಿ20 ಮಾದರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಅವರಿಗೆ ಸ್ಥಿರವಾದ ಅವಕಾಶಗಳು ಸಿಗುತ್ತಿಲ್ಲ. ಕೇವಲ ಒಂದು ಅಥವಾ ಎರಡು ಪಂದ್ಯಗಳ ನಂತರ ಅವರನ್ನು ಕೈಬಿಡಲಾಗುತ್ತದೆ. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ, ಅವರು ಹಲವಾರು ಅವಕಾಶಗಳನ್ನು ಪಡೆದಿದ್ದಾರೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ.
ಇದನ್ನೂ ಓದಿ: IPL 2024: ಐಪಿಎಲ್ನಲ್ಲಿ ಅತ್ಯಧಿಕ ವೇತನ ಪಡೆಯುವ 10 ಆಟಗಾರರು: ಲಿಸ್ಟ್ನಲ್ಲಿಲ್ಲ ವಿರಾಟ್ ಕೊಹ್ಲಿ..!
ಸ್ಯಾಮ್ಸನ್ ಕಳೆದ 15 ಏಕದಿನ ಪಂದ್ಯಗಳಲ್ಲಿ 50 ಸರಾಸರಿಯಲ್ಲಿ 402 ರನ್ ಗಳಿಸಿದ್ದದ್ದಾರೆ. ಆದರೆ ಈ ವರ್ಷ ಅವರು 3 ಇನ್ನಿಂಗ್ಸ್‌ಗಳಲ್ಲಿ 72 ರನ್ ಗಳಿಸಲು ಮಾತ್ರ ಶಕ್ತರಾಗಿದ್ದಾರೆ. ಒಟ್ಟಾರೆಯಾಗಿ, 24 ಟಿ20 ಪಂದ್ಯಗಳಲ್ಲಿ ಅವರು 19 ಸರಾಸರಿಯಲ್ಲಿ 374 ರನ್ಗಳಿಸಿದ್ದಾರೆ. ಅದರಲ್ಲೂ 2023 ರಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 78 ರನ್‌ಗಳು ಮಾತ್ರ ಕಲೆಹಾಕಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್‌ಗೆ ಸೌತ್ ಆಫ್ರಿಕಾ ವಿರುದ್ಧ ಮೂರನೇ ಪಂದ್ಯ ಕೊನೆಯ ಅವಕಾಶ ಎಂದರೂ ತಪ್ಪಾಗದು.