VIDEO: ವಾಟ್ ಎ ಬಾಲ್: ಮಿಚೆಲ್ ಸ್ಟಾರ್ಕ್​ ಎಸೆತಕ್ಕೆ ಸ್ಟಂಪ್ ಚೆಲ್ಲಾಪಿಲ್ಲಿ..!

IPL 2024 KKR vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಯಿತು. 160 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್​ಗಳಲ್ಲಿ ಕೆಕೆಆರ್ ಜಯ ಸಾಧಿಸಿದೆ.

VIDEO: ವಾಟ್ ಎ ಬಾಲ್: ಮಿಚೆಲ್ ಸ್ಟಾರ್ಕ್​ ಎಸೆತಕ್ಕೆ ಸ್ಟಂಪ್ ಚೆಲ್ಲಾಪಿಲ್ಲಿ..!
Travis Head

Updated on: May 22, 2024 | 8:24 AM

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ ಕೆಕೆಆರ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc)​. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಎಸ್​ಆರ್​ಹೆಚ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಾಗ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿತ್ತು.

ಆದರೆ ಈ ನಿರೀಕ್ಷೆಗಳನ್ನು​ ಪವರ್​ಪ್ಲೇನಲ್ಲೇ ಮಿಚೆಲ್ ಸ್ಟಾರ್ಕ್ ಹುಸಿಗೊಳಿಸಿದ್ದರು. ಮೊದಲ ಓವರ್​ನ 2ನೇ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್​ ಟ್ರಾವಿಸ್ ಹೆಡ್ (0) ರನ್ನು ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡಿದ್ದರು.

ಇದಾದ ಬಳಿಕ 5ನೇ ಓವರ್​ನ 5ನೇ ಎಸೆತದಲ್ಲಿ ನಿತೀಶ್ ರೆಡ್ಡಿ ವಿಕೆಟ್ ಕಬಳಿಸಿದರು. ಇನ್ನು 6ನೇ ಎಸೆತದಲ್ಲಿ ಶಹಬಾಝ್ ಅಹ್ಮದ್​​ (0) ರನ್ನು ಬೌಲ್ಡ್ ಮಾಡಿದರು. ಅಂದರೆ ಪವರ್​ಪ್ಲೇನಲ್ಲಿ ಇಬ್ಬರನ್ನು ಶೂನ್ಯಕ್ಕೆ ಔಟ್ ಮಾಡಿದ್ದಲ್ಲದೇ ಮಿಚೆಲ್ ಸ್ಟಾರ್ ಮೂರು ವಿಕೆಟ್ ಕಬಳಿಸಿ ಎಸ್​ಆರ್​ಹೆಚ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಅದರಲ್ಲೂ ಮೊದಲ ಓವರ್​ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಅದ್ಭುತವಾಗಿತ್ತು. ಮಿಚೆಲ್ ಸ್ಟಾರ್ಕ್ ಕಡೆಯಿಂದ ಸ್ಟ್ರೈಟ್ ಬಾಲ್ ನಿರೀಕ್ಷಿಸಿದ್ದ ಹೆಡ್ ನೇರವಾಗಿ ಬಾರಿಸಲು ಅದಾಗಲೇ ಸಿದ್ಧತೆಯಲ್ಲಿದ್ದರು.

ಆದರೆ ಚೆಂಡನ್ನು ಸಣ್ಣ ಪ್ರಮಾಣದಲ್ಲಿ ಸ್ವಿಂಗ್ ಮಾಡಿ ಸ್ಟಾರ್ಕ್​ ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಸ್ಟಾರ್ಕ್ ಅವರ ಮಾರ್ಕ್​ ಎಸೆತದಲ್ಲಿ ಸ್ಟಂಪ್ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆದ್ದು ಬೀಗಿದ ಕೆಕೆಆರ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಯಿತು. 160 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್​ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ: IPL 2024: RCBಗೆ ಗುಡ್ ನ್ಯೂಸ್: RR ತಂಡದ ಸ್ಟಾರ್ ಆಟಗಾರ ಅಲಭ್ಯ.!

ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಫೈನಲ್​ಗೆ ಪ್ರವೇಶಿಸಿದೆ. ಇನ್ನು ಈ ಮ್ಯಾಚ್​ನಲ್ಲಿ 4 ಓವರ್​ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದ ಮಿಚೆಲ್ ಸ್ಟಾರ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

 

Published On - 8:24 am, Wed, 22 May 24