IPL 2024 Playoff: ಪ್ಲೇ ಆಫ್ ಪಂದ್ಯಗಳಿಗೆ ವರುಣನ ಕಾಟ: ಮಳೆ ಬಂದರೆ ಏನು ನಿಯಮ?, ಇಲ್ಲಿದೆ ಸಂಪೂರ್ಣ ಮಾಹಿತಿ

|

Updated on: May 20, 2024 | 9:49 AM

IPL 2024 Playoff Rain Rules: ಮಳೆಯಿಂದಾಗಿ ಈ ಬಾರಿಯ ಐಪಿಎಲ್​ನಲ್ಲಿ ಕೆಲ ಲೀಗ್ ಪಂದ್ಯಗಳು ವಾಷ್ ಔಟ್ ಆಯಿತು. ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಹೀಗಾದಲ್ಲಿ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ, ನಿಯಮಗಳು ಏನಿವೆ? ಎಂಬುದನ್ನು ನೋಡೋಣ.

IPL 2024 Playoff: ಪ್ಲೇ ಆಫ್ ಪಂದ್ಯಗಳಿಗೆ ವರುಣನ ಕಾಟ: ಮಳೆ ಬಂದರೆ ಏನು ನಿಯಮ?, ಇಲ್ಲಿದೆ ಸಂಪೂರ್ಣ ಮಾಹಿತಿ
IPL 2024 Playoff Rain
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿ ಅಂತಿಮ ಘಟ್ಟದತ್ತ ತಲುಪಿದೆ. ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಲ್ಕು ತಂಡಗಳು ಪ್ಲೇ ಆಫ್ ತಲುಪಿದೆ. ಕೋಲ್ಕತ್ತಾ, ಹೈದರಾಬಾದ್, ರಾಜಸ್ಥಾನ್ ಮತ್ತು ಆರ್​ಸಿಬಿ ಟಾಪ್ 4 ರಲ್ಲಿ ಸ್ಥಾನ ಪಡೆದುಕೊಂಡಿದೆ. ಮಂಗಳವಾರದಿಂದ ಪ್ಲೇ ಆಫ್ ಸುತ್ತಿನ ಪಂದ್ಯ ಶುರುವಾಗಲಿದೆ. ಮಳೆಯಿಂದಾಗಿ ಅನೇಕ ಲೀಗ್ ಪಂದ್ಯಗಳು ವಾಷ್ ಔಟ್ ಆಯಿತು. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಐಪಿಎಲ್ 2024 ರ ಅಂತಿಮ ಲೀಗ್ ಪಂದ್ಯ ಕೂಡ ಮಳೆಯಿಂದಾಗಿ ಕೊಚ್ಚಿ ಹೋಯಿತು. ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಹೀಗಾದಲ್ಲಿ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ, ನಿಯಮಗಳು ಏನಿವೆ? ಎಂಬುದನ್ನು ನೋಡೋಣ.

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 21 ಮತ್ತು 22 ರಂದು ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಈ ಎರಡು ದಿನ ಕೂಡ ಅಹ್ಮದಾಬಾದ್​ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಭಾರೀ ಮಳೆ ಬಂದರೆ ಪಂದ್ಯ ಆರಂಭವಾಗದೇ ಅನುಮಾನ. ಆದರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಪ್ಲೇ ಆಫ್ ಪಂದ್ಯಗಳು ಮೀಸಲು ದಿನವನ್ನು ಹೊಂದಿರುತ್ತವೆ. ನಿಗದಿತ ದಿನದಂದು ಪಂದ್ಯವನ್ನು ಮುಗಿಸಲು 120 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿದೆ. ಲೀಗ್ ಪಂದ್ಯಗಳಿಗೆ ಈ ಸಮಯ 60 ನಿಮಿಷಗಳಿತ್ತು. ಒಂದು ವೇಳೆ ಮಳೆಯಿಂದ ಪಂದ್ಯ ಸಾಧ್ಯವಾಗದಿದ್ದರೆ ಮೀಸಲು ದಿನದಂದು ನಡೆಯಲಿದೆ.

ನೀತಾ ಅಂಬಾನಿ ಜೊತೆ ರೋಹಿತ್ ಶರ್ಮಾ ಸುದೀರ್ಘ ಮಾತುಕತೆ: ಆರ್​ಸಿಬಿ ಸೇರುವುದು ಬಹುತೇಕ ಖಚಿತ?

ಮೀಸಲು ದಿನ ಕೂಡ ಮಳೆಯಿಂದಾಗಿ ಕ್ವಾಲಿಫೈಯರ್ 1 ಪಂದ್ಯ ನಡೆಯದಿದ್ದರೆ ಟೇಬಲ್ ಟಾಪರ್ ಕೋಲ್ಕತ್ತಾ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ. ಇದೇ ವೇಳೆ ಎಲಿಮಿನೇಟರ್ ಪಂದ್ಯ ರದ್ದಾದರೆ ರಾಜಸ್ಥಾನ್ ರಾಯಲ್ಸ್ ತಂಡ ಮುನ್ನಡೆ ಸಾಧಿಸುತ್ತದೆ. ಕ್ವಾಲಿಫೈಯರ್ 1 ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಮೇ 21 ರಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಏತನ್ಮಧ್ಯೆ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜು: ಎಲಿಮಿನೇಟರ್​ನಲ್ಲಿ ಆರ್​ಸಿಬಿಗೆ ಈ ತಂಡ ಎದುರಾಳಿ

ಐಪಿಎಲ್ 2024 ಪ್ಲೇ ಆಫ್ ವೇಳಾಪಟ್ಟಿ:

  • ಕ್ವಾಲಿಫೈಯರ್ 1: ಕೋಲ್ಕತ್ತಾ ನೈಟ್ ರೈಡರ್ಸ್ (KKR) vs ಸನ್‌ರೈಸರ್ಸ್ ಹೈದರಾಬಾದ್ (SRH) ಮಂಗಳವಾರ, ಮೇ 21 ರಂದು 7:30 PM IST ಕ್ಕೆ (ಅಹಮದಾಬಾದ್‌)
  • ಎಲಿಮಿನೇಟರ್: ರಾಜಸ್ಥಾನ್ ರಾಯಲ್ಸ್ (RR) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬುಧವಾರ, ಮೇ 22 ರಂದು 7:30 PM IST ಕ್ಕೆ (ಅಹಮದಾಬಾದ್‌)
  • ಕ್ವಾಲಿಫೈಯರ್ 2: ಕ್ವಾಲಿಫೈಯರ್ 1 ರಲ್ಲಿ ಸೋತವರು ವಿರುದ್ಧ ಎಲಿಮಿನೇಟರ್ ವಿಜೇತರು ಆಡಲಿದ್ದಾರೆ. ಈ ಪಂದ್ಯ ಶುಕ್ರವಾರ, ಮೇ 24 ರಂದು 7:30 PM IST ಕ್ಕೆ ಚೆನ್ನೈನಲ್ಲಿ ನಡೆಯಲಿದೆ.
  • ಫೈನಲ್: ಕ್ವಾಲಿಫೈಯರ್ 1 ರ ವಿಜೇತರು ಮತ್ತು ಕ್ವಾಲಿಫೈಯರ್ 2 ರ ವಿಜೇತರು ಭಾನುವಾರ, ಮೇ 26 ರಂದು 7:30 PM IST ಕ್ಕೆ ಚೆನ್ನೈನಲ್ಲಿ ಮುಖಾಮುಖಿ ಆಗಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ