VIDEO: KKR vs SRH ಪಂದ್ಯ: ಸ್ಟೇಡಿಯಂನಲ್ಲಿ RCB ಅಭಿಮಾನಿಗಳದ್ದೇ ದರ್ಬಾರ್

|

Updated on: May 22, 2024 | 2:01 PM

IPL 2024 RCB vs RR: ಎಸ್​ಆರ್​ಹೆಚ್​ ವಿರುದ್ಧ ಗೆದ್ದಿರುವ ಕೆಕೆಆರ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ಎಸ್​ಆರ್​ಹೆಚ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಅಂದರೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಎಸ್​ಆರ್​ಹೆಚ್ ತಂಡವನ್ನು ಎದುರಿಸಲಿದೆ.

VIDEO: KKR vs SRH ಪಂದ್ಯ: ಸ್ಟೇಡಿಯಂನಲ್ಲಿ RCB ಅಭಿಮಾನಿಗಳದ್ದೇ ದರ್ಬಾರ್
RCB
Follow us on

ಅಹಮದಾಬಾದ್​ನಲ್ಲಿ ಮಂಗಳವಾರ (ಮೇ 21) ನಡೆದ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿತ್ತು. ನರೇಂದ್ರ ಮೋದಿ ಸ್ಡೇಡಿಯಂನಲ್ಲಿ ಜರುಗಿದ ಈ ಪಂದ್ಯವನ್ನು ವೀಕ್ಷಿಸಲು ಉಭಯ ತಂಡಗಳ ಅಭಿಮಾನಿಗಳು ಆಗಮಿಸಿದ್ದರು. ಇವರುಗಳ ನಡುವೆ ಎಲ್ಲರ ಗಮನ ಸೆಳೆದವರೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳು.

ಹೌದು, ಕೆಕೆಆರ್ ಮತ್ತು ಎಸ್​ಆರ್​​ಹೆಚ್ ನಡುವಣ ಪಂದ್ಯದ ವೇಳೆ ಆರ್​ಸಿಬಿ ಅಭಿಮಾನಿಗಳು ಸಖತ್ ಜೋಶ್​ನಲ್ಲೇ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಪಂದ್ಯದ ನಡುವೆ ಆರ್​ಸಿಬಿ ಘೋಷವಾಕ್ಯವನ್ನು ಮೊಳಗಿಸುವ ಮೂಲಕ ಗಮನ ಸೆಳೆದರು.

ಇತ್ತ ಆರ್​ಸಿಬಿ ಅಭಿಮಾನಿಗಳ ಜೋಶ್ ನಡುವೆ ಕೆಕೆಆರ್ ಮತ್ತು ಎಸ್​ಆರ್​ಹೆಚ್ ಫ್ಯಾನ್ಸ್ ಸೈಲೆಂಟ್ ಆಗಿದ್ದು ವಿಶೇಷ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ ಅಭಿಮಾನಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಇದೇ ಮೈದಾನದಲ್ಲಿ ಇಂದು (ಮೇ 22) ಆರ್​ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಇನ್ನು ಸೋಲುವ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿ ಇಂದಿನ ಮ್ಯಾಚ್ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಗೆದ್ದು ಬೀಗಿದ ಕೆಕೆಆರ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಯಿತು. 160 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್​ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಫೈನಲ್​ಗೆ ಪ್ರವೇಶಿಸಿದೆ.

ಇದನ್ನೂ ಓದಿ: IPL 2024: ಈ ಸಲ RCB ಕಪ್ ಗೆದ್ದೇ ಗೆಲ್ಲುತ್ತೆ ಎಂದ ವಿಜಯ ಮಲ್ಯ..!

ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ಎಸ್​ಆರ್​ಹೆಚ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಅಂದರೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಎಸ್​ಆರ್​ಹೆಚ್ ತಂಡವನ್ನು ಎದುರಿಸಲಿದೆ.

 

Published On - 1:58 pm, Wed, 22 May 24