IPL 2024: ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್; ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿದ ಚೆಂಡು! ವಿಡಿಯೋ ನೋಡಿ

|

Updated on: May 18, 2024 | 10:24 PM

IPL 2024: ಮೂರನೇ ಓವರ್ ಬೌಲ್ ಮಾಡಿದ ತುಷಾರ್ ದೇಶಪಾಂಡೆ ಚೆಂಡನ್ನು ವಿಕೆಟ್ ಮೇಲೆ ಬೌಲ್ ಮಾಡಿದರು. ಈ ವೇಳೆ ವಿರಾಟ್ ತಮ್ಮ ಪರಿಚಿತ ಶೈಲಿಯಲ್ಲಿ ಬ್ಯಾಟ್ ಬೀಸಿ, ಶಾರ್ಟ್ ಲೆಂಗ್ತ್ ಎಸೆತವನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಕಡೆಗೆ ಸಿಕ್ಸರ್ ಹೊಡೆದರು. ಕೊಹ್ಲಿ ಬಾರಿಸಿದ ಈ 98 ಮೀಟರ್ ಉದ್ದದ ಸಿಕ್ಸರ್ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿಯಿತು.

IPL 2024: ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್; ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿದ ಚೆಂಡು! ವಿಡಿಯೋ ನೋಡಿ
ವಿರಾಟ್ ಕೊಹ್ಲಿ
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಮಹಾ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿದೆ. ಇದರೊಂದಿಗೆ ಚೆನ್ನೈಗೆ 219 ರನ್ ಟಾರ್ಗೆಟ್ ನೀಡಿದೆ. ಆರ್​ಸಿಬಿ ಪರ ಇಂದಿನ ಪಂದ್ಯದಲ್ಲಿ ಬ್ಯಾಟರ್​ಗಳೆಲ್ಲರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಆರಂಭಿಕರಿಬ್ಬರು ತಂಡಕ್ಕೆ ಮೊದಲ 3 ಓವರ್​ಗಳಲ್ಲಿ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ವಿರಾಟ್ ಕೊಹ್ಲಿ (Virat Kohli) ರನ್ ಮಳೆ ಸುರಿಸಿದರು. ವಾಸ್ತವವಾಗಿ ಮೊದಲ ಓವರ್‌ನಲ್ಲಿ ಹೆಚ್ಚಿನ ರನ್ ಬರಲಿಲ್ಲ. ಆದರೆ ಎರಡನೇ ಓವರ್‌ನಿಂದ ಗೇರ್ ಬದಲಾಯಿಸಿದ ಕೊಹ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ಈ ವೇಳೆ ಕೊಹ್ಲಿ ಬಾರಿಸಿದ ನೋ ಲುಕ್ ಶಾಟ್, ವಿಕೆಟ್ ಹಿಂದೆ ನಿಂತಿದ್ದ ಎಂಎಸ್ ಧೋನಿಯನ್ನೂ (MS Dhoni) ಕೂಡ ಅಚ್ಚರಿಗೊಳ್ಳುವಂತೆ ಮಾಡಿತು.

ಮೇಲ್ಛಾವಣಿಗೆ ಬಿದ್ದ ಬಾಲ್

ಮೂರನೇ ಓವರ್‌ನ ಮೊದಲ ಎಸೆತದಲ್ಲಿಯೇ ವಿರಾಟ್ ಈ ನೋ ಲುಕ್ ಸಿಕ್ಸರ್ ಬಾರಿಸಿದರು. ಮೂರನೇ ಓವರ್ ಬೌಲ್ ಮಾಡಿದ ತುಷಾರ್ ದೇಶಪಾಂಡೆ ಚೆಂಡನ್ನು ವಿಕೆಟ್ ಮೇಲೆ ಬೌಲ್ ಮಾಡಿದರು. ಈ ವೇಳೆ ವಿರಾಟ್ ತಮ್ಮ ಪರಿಚಿತ ಶೈಲಿಯಲ್ಲಿ ಬ್ಯಾಟ್ ಬೀಸಿ, ಶಾರ್ಟ್ ಲೆಂಗ್ತ್ ಎಸೆತವನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಕಡೆಗೆ ಸಿಕ್ಸರ್ ಹೊಡೆದರು. ಕೊಹ್ಲಿ ಬಾರಿಸಿದ ಈ 98 ಮೀಟರ್ ಉದ್ದದ ಸಿಕ್ಸರ್ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿಯಿತು. ಕೊಹ್ಲಿಯ ಈ ನೋ ಲುಕ್ ಸಿಕ್ಸರ್ ನೋಡಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಮೂಕವಿಸ್ಮಿತರಾದರು. ಎಂಎಸ್ ಧೋನಿ ಕೂಡ ಚೆಂಡನ್ನು ನೋಡುತ್ತಲೇ ಇದ್ದರು. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಅಭಿಮಾನಿಗಳೊಂದಿಗೆ ಹುಚ್ಚೆದ್ದು ಕುಣಿದರು.

ಆಟ ನಿದಾನಗೊಳಿಸಿದ ಮಳೆ

ಆದರೆ ಈ ಓವರ್ ಮುಗಿದ ನಂತರ ಮಳೆ ಪ್ರಾರಂಭವಾಯಿತು. ಮಳೆ ನಿಂತ ಬಳಿಕ ಪಂದ್ಯ ಮರು ಆರಂಭವಾಯಿತು. ಆದರೆ ಮಳೆಯಿಂದಾಗಿ ಪಿಚ್​ನಲ್ಲಿ ಬದಲಾವಣೆ ಕಂಡುಬಂತು. ಇದರ ಲಾಭ ಪಡೆದ ಸಿಎಸ್​ಕೆ ಬೌಲರ್​ಗಳು ಆರ್​ಸಿಬಿ ಪವರ್​ ಪ್ಲೇನಲ್ಲಿ ಬಿಗ್ ಸ್ಕೋರ್ ಕಲೆಹಾಕದಂತೆ ತಡೆದರು. ಕ್ರಮೇಣ ಪಿಚ್​ನ ಸ್ವರೂಪ ಅರ್ಥಮಾಡಿಕೊಂಡ ಆರ್​ಸಿಬಿ ಬ್ಯಾಟರ್​​ಗಳು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

ಅದ್ಭುತ ಬ್ಯಾಟಿಂಗ್ ಪ್ರದರ್ಶನ

ಆರಂಭಿಕ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಫಾಫ್ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಕಲೆಹಾಕಿದರು. ಮೂರನೇ ಕ್ರಮಾಂಕದಲ್ಲಿ ಬಂದ ರಜತ್ 23 ಎಸೆತಗಳಲ್ಲಿ 43 ರನ್ ಬಾರಿಸಿದರೆ ಅವರಿಗೆ ಉತ್ತಮ ಸಾಥ್ ನೀಡಿದ ಕ್ಯಾಮರೂನ್ ಗ್ರೀನ್ 17 ಎಸೆತಗಳಲ್ಲಿ 38 ರನ್ ಬಾರಿಸಿದರು. ಉಳಿದಂತೆ ದಿನೇಶ್ ಕಾರ್ತಿಕ್ (14 ರನ್) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (16 ರನ್) ಅಲ್ಪ ಇನ್ನಿಂಗ್ಸ್ ಮೂಲಕ ತಂಡಕ್ಕೆ ಕಾಣಿಕೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Sat, 18 May 24