ಇದು ನಮ್ಮ ಆರ್​ಸಿಬಿ ತಂಡದ ಹೊಸ ಅಧ್ಯಾಯ -ಟ್ವೀಟ್ ಮಾಡಿ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಚೆನ್ನೈ ವಿರುದ್ಧ 27ರನ್​ಗಳ ರೋಚಕ ಗೆಲುವು ದಾಖಲಿಸಿದ ಆರ್​​ಸಿಬಿ, ಪ್ಲೇ ಆಫ್​ಗೆ ಎಂಟ್ರಿಕೊಟ್ಟು ಚರಿತ್ರೆ ಸೃಷ್ಟಿಸಿದೆ. ನಿನ್ನೆ ತಡ ರಾತ್ರಿ ವರೆಗೂ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಮತ್ತೊಂದೆಡೆ ರಾಜ್ಯದ ಸಿಎಂ ಸಿದ್ದರಾಮಯ್ಯನವರು ಟ್ವೀಟ್​​​ ಮಾಡಿ ಆರ್​ಸಿಬಿಗೆ ಶುಭ ಕೋರಿದ್ದಾರೆ. ಇದು ನಮ್ಮ ಆರ್​ಸಿಬಿ ತಂಡದ ಹೊಸ ಅಧ್ಯಾಯ ಎಂದು ಟ್ವೀಟ್ ಮಾಡಿದ್ದಾರೆ.

ಇದು ನಮ್ಮ ಆರ್​ಸಿಬಿ ತಂಡದ ಹೊಸ ಅಧ್ಯಾಯ -ಟ್ವೀಟ್ ಮಾಡಿ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸ್ ನಾಯಕರು
Follow us
Anil Kalkere
| Updated By: ಆಯೇಷಾ ಬಾನು

Updated on: May 19, 2024 | 7:23 AM

ಬೆಂಗಳೂರು, ಮೇ.19: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 (IPL) ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು 27 ರನ್‌ಗಳಿಂದ ಸೋಲಿಸಿ ಭರ್ಜರಿ ಜಯಗೊಳಿಸಿದೆ. ಈ ಮೂಲಕ ಆರ್​ಸಿಬಿ ಪ್ಲೇ ಆಫ್​ಗೆ ರಾಯಲ್ ಎಂಟ್ರಿ ಕೊಡ್ಡಿದೆ, RCB ಗೆಲುವು ಸಾಧಿಸುತ್ತಿದ್ದಂತೆ ಬೆಂಗಳೂರು ತಂಡದ ಅಭಿಮಾನಿಗಳು, ನಗರದ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಹಬ್ಬ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ರಾಜ್ಯದ ಸಿಎಂ ಸಿದ್ದರಾಮಯ್ಯನವರು (Siddaramaiah) ಆರ್​ಸಿಬಿ ಗೆಲುವಿನ ಬಗ್ಗೆ ಟ್ವೀಟ್​​​ ಮಾಡಿದ್ದಾರೆ.

ಸತತ 6ನೇ ಗೆಲುವಿನೊಂದಿಗೆ RCB ಪ್ಲೇಆಫ್​​ ರೌಂಡ್​ಗೆ ಲಗ್ಗೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಪ್ರತಿಕ್ಷಣವನ್ನು ಆನಂದಿಸಿದೆ. RCB ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಖುಷಿ ನೀಡಿದೆ. ಇದು ನಮ್ಮ ಆರ್​ಸಿಬಿ ತಂಡದ ಹೊಸ ಅಧ್ಯಾಯ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ನಿನ್ನೆ ರಾತ್ರಿ RCB ಗೆದ್ದ ಹಿನ್ನೆಲೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಆರ್​ಸಿಬಿ ಆರ್​ಸಿಬಿ ಅನ್ನೋ ಜಯಘೋಷ ಎಲ್ಲೆಡೆ ಮೊಳಗಿತ್ತು. ಆರ್​ಸಿಬಿ ಚೆನ್ನೈ ವಿರುದ್ಧ ರೋಚಕ ಜಯ ಸಾಧಿಸಿ ಪ್ಲೇ ಆಫ್​ಗೆ ರಾಯಲ್ ಆಗೇ ಎಂಟ್ರಿ ಕೊಡುತ್ತಿದ್ದಂತೆ, ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: RCB vs CSK Highlights, IPL 2024: ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರಿದ ಆರ್​ಸಿಬಿ

ಐಪಿಎಲ್ ಆರಂಭದಲ್ಲಿ ಸತತವಾಗಿ 6 ಪಂದ್ಯಗಳನ್ನು ಆರ್​ಸಿಬಿ ಸೋಲುತ್ತಿದ್ದಂತೆ, ಇಡೀ ಅಭಿಮಾನಿಗಳ ಪಡೆಗೆ ಸಾಕಷ್ಟು ನಿರಾಸೆಯಾಗಿತ್ತು. ಈ ಬಾರಿಯೂ ಕಪ್ ಗೆಲ್ಲೋ ಕನಸು ಭಗ್ನ ಅಂತ ಬಹುತೇಕ ಜನ ನೊಂದುಕೊಂಡಿದ್ರು. ಇನ್ನೂ ಕೆಲವರಂತೂ, ಆರ್​ಸಿಬಿ ಮ್ಯಾನೇಜ್ಮೆಂಟ್ ಹಾಗೂ ಬೌಲರ್​ಗಳ ಕಳಪೆ ಪ್ರದರ್ಶನದ ವಿರುದ್ಧ ಶಾಪ ಹಾಕಿದ್ರು. ಸತತ ಸೋಲು, ಅಭಿಮಾನಿಗಳ ಬೇಸರದಿಂದ ಕಂಗೆಟ್ಟ ಆರ್​ಸಿಬಿ ಪಡೆ, ಅದ್ಯಾವ ಶಪಥ ಮಾಡಿದ್ಯೋ ಗೊತ್ತಿಲ್ಲ. ಆದ್ರೆ, ಕಳೆದ ಸತತ 6 ಪಂದ್ಯಗಳಲ್ಲಿ ನಡೆದಿದ್ದು ಮಾತ್ರ ಹೊಸ ಅಧ್ಯಾಯವೇ ಸರಿ. ಗುಜರಾತ್, ಹೈದರಾಬಾದ್, ಪಂಜಾಬ್, ಡೆಲ್ಲಿ, ಚೆನ್ನೈ ಹೀಗೆ ಎಲ್ಲಾ ತಂಡಗಳ ವಿರುದ್ಧ ಸಾಲು ಸಾಲು ಗೆಲುವಿನ ಮೂಲಕ ಆರ್​ಸಿಬಿ ಪುಟಿದೆದ್ದಿದೆ. ಎಲ್ಲಾ ಮುಗಿದೇ ಹೋಯ್ತು ಎಂದಿದ್ದ ಅಭಿಮಾನಿಗಳ ಮುಖದಲ್ಲಿ ಮತ್ತೆ ಕಪ್ ಗೆದ್ದು ಇತಿಹಾಸ ಸೃಷ್ಟಿಸುವ ಕನಸನ್ನು ಚಿಗುರೊಡೆಸಿದೆ. ಪ್ಲೇ ಆಫ್​ಗೆ ನೆಚ್ಚಿನ ತಂಡ ಬೆಂಗಳೂರು ಲಗ್ಗೆ ಇಡುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.

ಈ ಬಾರಿಯ ಐಪಿಎಲ್ ಆರಂಭವಾಗುತ್ತಿದ್ದಂತೆ ಇಡೀ ಆರ್​ಸಿಬಿ ಅಭಿಮಾನಿಗಳ ಬಾಯಲ್ಲೊ ಬಾಯ್​ಪಾಠ ಆಗಿದ್ದು ಒಂದೇ ಮಾತು. ಇದು ಆರ್​ಸಿಬಿ ಹೊಸ ಅಧ್ಯಾಯ ಅನ್ನೋ ಘೋಷವಾಖ್ಯವದು. ಸತತ 6 ಪಂದ್ಯ ಸೋತ ಕ್ಯಾಪ್ಟನ್ ಡುಪ್ಲೆಸಿ ಸೇನೆ, ವಿಶ್ವಾಸ ಕಳೆದುಕೊಳ್ಳಲಿಲ್ಲ. ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವುದೇ ಆಟಗಾರನ ತಲೆಗೆ ಸೋಲಿನ ಭಾರ ಹೊರಿಸದೇ, ಮುಂದಿನ ಗೆಲುವಿಗಾಗಿ ಒಗ್ಗಟ್ಟಿನ ಸಮರ ಆರಂಭಿಸಿದ್ದೇ ಆರ್​ಸಿಬಿ ಗೆಲುವಿನ ಆಶ್ವಮೇಧ ಯಾಗಕ್ಕೆ ಕಾರಣ. ಡ್ರೆಸ್ಸಿಂಗ್ ರೂಮ್​ನ ಈ ಸತ್ಯದ ಬಗ್ಗೆ ಸ್ವತಃ ಬೌಲರ್ ಯಶ್ ದಯಾಳ್ ರಿವೀಲ್ ಮಾಡಿದ್ರು. ನಾವು ಸತತವಾಗಿ ಸೋತಾಗ. ಯಾವುದೇ ಆಟಗಾರನ ಮೇಲೆ ದೂಷಣೆ ಮಾಡಿಲ್ಲ. ಎಲ್ಲರೂ ಸಮಾನ ನೋವು ಜವಾಬ್ದಾರಿ ತೆಗೆದುಕೊಂಡೆವು. ಆ ಪಾಸಿಟಿವ್ ನಡೆಯಿಂದಲೇ, ಅಭಿಮಾನಿಗಳಿಗಾಗಿ ನಾವು ಗೆಲ್ಲಲೇಬೇಕು ಅನ್ನೋ ಛಲ ಬಂದಿದೆ ಅಂತ ಯಶ್ ದಯಾಳ್ ಹೇಳಿದ್ದಾರೆ. ಇದೇ ಮನಸ್ಥಿತಿಯಿಂದ ಆಡಿದ ಆರ್​ಸಿಬಿ ಪಡೆ ಇದೀಗ, ಸತತ 6 ಗೆಲುವುಗಳ ಮೂಲಕ ಪ್ಲೇ ಆಫ್​ಗೆ ಲಗ್ಗೆ ಇಟ್ಟು ಅಬ್ಬರಿಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್