
ಐಪಿಎಲ್ 2025 (IPL 2025) ಮುಗಿಯಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು, ಅದರಲ್ಲಿ ಪಂಜಾಬ್ ಕಿಂಗ್ಸ್ ಕ್ವಾಲಿಫೈಯರ್ 1 ಆಡಲು ಸಜ್ಜಾಗಿದೆ. ಇಂದು ನಡೆಯಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯವು ಆರ್‌ಸಿಬಿ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತದೆಯೇ ಅಥವಾ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಬುದನ್ನು ಎದುರಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ. ನಾಲ್ಕು ಪ್ಲೇಆಫ್ ತಂಡಗಳ ಬಗ್ಗೆ ಹೇಳುವುದಾದರೆ, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಮ್ಮ ಸ್ಥಾನಗಳನ್ನು ಖಚಿತಪಡಿಸಿವೆ. ಇದೀಗ ಈ ನಾಲ್ಕು ತಂಡಗಳಲ್ಲಿ ಯಾವೆರಡು ತಂಡಗಳು ಫೈನಲ್ಗೇರುತ್ತವೆ ಎಂದು ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾದ ಮಾಜಿ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎರಡು ಫೈನಲ್ ತಂಡಗಳ ಬಗ್ಗೆ ಮಾತನಾಡಿದ್ದು, ‘ಪಂಜಾಬ್ ಕಿಂಗ್ಸ್ ಅದ್ಭುತವಾಗಿ ಆಡುವ ಮೂಲಕ ಪ್ಲೇಆಫ್‌ಗೆ ತಲುಪಿದೆ. ಪಂಜಾಬ್‌ನ ಬ್ಯಾಟಿಂಗ್ ತುಂಬಾ ಬಲಿಷ್ಠವಾಗಿ ಕಾಣುತ್ತದೆ. ಅರ್ಶ್‌ದೀಪ್ ಸಿಂಗ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದು, ಮುಂಬರುವ ಪ್ರಮುಖ ಪಂದ್ಯಗಳಲ್ಲಿಯೂ ಅವರು ಇದನ್ನು ಮುಂದುವರೆಸುವುದರ ಸೂಚನೆಯಾಗಿದೆ. ಐಪಿಎಲ್ 2025 ರ ಅಂತಿಮ ಪಂದ್ಯ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ ಎಂಬುದು ನನ್ನ ಅನಿಸಿಕೆ ಎಂದು ಉತ್ತಪ್ಪ ಹೇಳಿದ್ದಾರೆ.
ಆರ್‌ಸಿಬಿ ಬಗ್ಗೆ ಉತ್ತಪ್ಪ ಮಾತನಾಡಿ, ‘ಜೋಶ್ ಹೇಜಲ್‌ವುಡ್ ಮರಳಿರುವುದು ನನಗೆ ತುಂಬಾ ಸಂತೋಷ ತಂದಿದೆ. ತಂಡದಲ್ಲಿ ಅವರ ಉಪಸ್ಥಿತಿಯು ಆರ್‌ಸಿಬಿಯನ್ನು ಬಲಪಡಿಸುತ್ತದೆ. ಹೇಜಲ್‌ವುಡ್ ಉತ್ತಮವಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ, ಆದರೆ ವಿರಾಟ್ ಕೊಹ್ಲಿ ಚೇಸ್ ಮಾಸ್ಟರ್ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಅವರು 20 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಬೇಕಾಗುತ್ತದೆ, ಅವರು ಹಾಗೆ ಮಾಡಿದರೆ ಎದುರಾಳಿ ತಂಡ ಒತ್ತಡಕ್ಕೆ ಒಳಗಾಗುತ್ತದೆ ಎಂದಿದ್ದಾರೆ.
IPL 2025: ಭಾರತದಲ್ಲಿ ಮಾನ್ಸೂನ್ ಅಬ್ಬರ; ಆರ್‌ಸಿಬಿ- ಲಕ್ನೋ ಪಂದ್ಯಕ್ಕಿದೆಯಾ ಮಳೆಯ ಆತಂಕ?
ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಅನುಭವಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ತುಂಬಾ ದುಬಾರಿಯಾಗಿದ್ದರು. ಆದ್ದರಿಂದ ಆರ್‌ಸಿಬಿ ಅಗ್ರ -2 ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಯಸಿದರೆ ಯಾವುದೇ ಬೆಲೆ ತೆತ್ತಾದರೂ ಎಲ್‌ಎಸ್‌ಜಿ ವಿರುದ್ಧ ಗೆಲ್ಲಲೇಬೇಕು. ಆದಾಗ್ಯೂ, ಆರ್‌ಸಿಬಿಗೆ ಅದು ಅಷ್ಟು ಸುಲಭವಲ್ಲ ಏಕೆಂದರೆ ಎಲ್‌ಎಸ್‌ಜಿ ಉತ್ತಮ ಫಾರ್ಮ್‌ನಲ್ಲಿದ್ದು, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Tue, 27 May 25