ಜೋಫ್ರಾ ಆರ್ಚರ್ ವೈಡಾಟದಿಂದ ಕೈ ತಪ್ಪಿದ ಕ್ವಿಂಟನ್ ಡಿಕಾಕ್ ಭರ್ಜರಿ ಸೆಂಚುರಿ

|

Updated on: Mar 27, 2025 | 8:25 AM

IPL 2025 RR vs KKR: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕ್ವಿಂಟನ್ ಡಿಕಾಕ್ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿದರು. ಈ ಮೂಲಕ 17.3 ಓವರ್​ಗಳಲ್ಲಿ 153 ರನ್ ಬಾರಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ದಾಖಲಿಸಿದೆ.

ಜೋಫ್ರಾ ಆರ್ಚರ್ ವೈಡಾಟದಿಂದ ಕೈ ತಪ್ಪಿದ ಕ್ವಿಂಟನ್ ಡಿಕಾಕ್ ಭರ್ಜರಿ ಸೆಂಚುರಿ
Archer - De Kock
Follow us on

IPL 2025: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 6ನೇ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ (Quinton de Kock) ಭರ್ಜರಿ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಡಿಕಾಕ್ ಶತಕದತ್ತ ಮುನ್ನುಗ್ಗಿದ್ದರು. ಪರಿಣಾಮ 17 ಓವರ್​ಗಳ ಮುಕ್ತಾಯದ ವೇಳೆಗೆ ಕೆಕೆಆರ್ ತಂಡ 135 ರನ್ ಕಲೆಹಾಕಿತು. ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿಗೆ 17 ರನ್ ಬೇಕಿದ್ದರೆ, ಅತ್ತ ಕ್ವಿಂಟನ್ ಡಿಕಾಕ್ ಶತಕ ಪೂರೈಸಲು 19 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಜೋಫ್ರಾ ಆರ್ಚರ್ ಅವರ ಮೊದಲ ಎಸೆತದಲ್ಲೇ ಡಿಕಾಕ್ ಫೋರ್ ಬಾರಿಸಿದರು. ಎಡರನೇ ಎಸೆತದಲ್ಲಿ ಪುಲ್ ಶಾಟ್​ನೊಂದಿಗೆ ಸಿಕ್ಸ್ ಸಿಡಿಸಿದರು. ಆದರೆ ಮೂರನೇ ಎಸೆತದಲ್ಲಿ ಜೋಫ್ರಾ ಆರ್ಚರ್ ವೈಡ್ ಎಸೆದರು. ಮರು ಎಸೆತದಲ್ಲಿ ಮತ್ತೊಂದು ವೈಡ್ ಎಸೆದಿದ್ದಾರೆ.

ಪರಿಣಾಮ ಕೆಕೆಆರ್ ತಂಡವು ಕೇವಲ 5 ರನ್​ಗಳ ಗುರಿ ಪಡೆಯಿತು. ಇತ್ತ ಒಂದು ಫೋರ್ ಹಾಗೂ ಒಂದು ಸಿಕ್ಸ್​ನೊಂದಿಗೆ ಅಥವಾ 2 ಸಿಕ್ಸ್​ಗಳೊಂದಿಗೆ ಶತಕ ಪೂರೈಸುವ ವಿಶ್ವಾಸದಲ್ಲಿದ್ದ ಡಿಕಾಕ್, ಜೋಫ್ರಾ ಆರ್ಚರ್ ಅವರ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 8 ವಿಕೆಟ್​ಗಳ ಜಯ ತಂದುಕೊಟ್ಟರು.

ಈ ಮೂಲಕ ಭರ್ಜರಿ ಸೆಂಚುರಿ ಸಿಡಿಸುವ ನಿರೀಕ್ಷೆಯಲ್ಲಿದ್ದ ಕ್ವಿಂಟನ್ ಡಿಕಾಕ್ ಅಜೇಯ 97 ರನ್​ಗಳೊಂದಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಇತ್ತ ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿಯೇ ಎಸೆದಂತಿದ್ದ ವೈಡ್​ಗಳಿಂದಾಗಿ ಕ್ವಿಂಟನ್ ಡಿಕಾಕ್ ಅವರಿಗೆ ಶತಕ ಕೈ ತಪ್ಪಿತು.

ಡಿಕಾಕ್ ಅಬ್ಬರ:

ಇದೀಗ ವೈಡ್​ಗಳನ್ನು ಎಸೆದು ಶತಕ ತಪ್ಪಿಸಿದ ಜೋಫ್ರಾ ಆರ್ಚರ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೆದ್ದು ಬೀಗಿದ ಕೆಕೆಆರ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕ್ವಿಂಟನ್ ಡಿಕಾಕ್ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿದರು. ಈ ಮೂಲಕ 17.3 ಓವರ್​ಗಳಲ್ಲಿ 153 ರನ್ ಬಾರಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 8 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.