IPL 2025
ಐಪಿಎಲ್ ಸೀಸನ್-18ರ ಮೆಗಾ ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಅದರಂತೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಈ ಮೆಗಾ ಹರಾಜಿಗಾಗಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯ ಆಟಗಾರರಿದ್ದರೆ, 409 ವಿದೇಶಿ ಆಟಗಾರರಿದ್ದಾರೆ.
ಇನ್ನು 1574 ಆಟಗಾರರ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ 320 ಆಟಗಾರರು ಹಾಗೂ 1,224 ಅನ್‌ಕ್ಯಾಪ್ಡ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ 30 ಅಸೋಸಿಯೇಟ್ ನೇಷನ್ಸ್ ಆಟಗಾರರು ಸೇರಿದ್ದಾರೆ.
ನೋಂದಣಿ ವಿವರ ಈ ಕೆಳಗಿನಂತಿದೆ:
- ರಾಷ್ಟ್ರೀಯ ತಂಡದ ಪರ ಆಡಿದ ಭಾರತೀಯರು – 48 ಆಟಗಾರರು
- ರಾಷ್ಟ್ರೀಯ ತಂಡದ ಪರ ಆಡಿದ ವಿದೇಶಿಯರು- 272 ಆಟಗಾರರು
- ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ಭಾರತೀಯರು- 152 ಆಟಗಾರರು
- ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ವಿದೇಶಿಯರು- 3 ಆಟಗಾರರು
- ಅನ್‌ಕ್ಯಾಪ್ಡ್ ಭಾರತೀಯರು- 965 ಆಟಗಾರರು
- ಅನ್‌ಕ್ಯಾಪ್ಡ್ ವಿದೇಶಿಯರು- 104 ಆಟಗಾರರು
ಇದನ್ನೂ ಓದಿ: ಗಂಭೀರ್ ಗರಡಿಯಲ್ಲಿ ಟೀಮ್ ಇಂಡಿಯಾಗೆ ಹೀನಾಯ ಸೋಲುಗಳ ಸರಮಾಲೆ
ಜಿದ್ಧಾದಲ್ಲಿ ಮೆಗಾ ಹರಾಜು:
ಐಪಿಎಲ್ ಮೆಗಾ ಹರಾಜು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ಈ ಹಿಂದೆ ಸಿಂಗಾಪುರ್, ದುಬೈ ಅಥವಾ ಲಂಡನ್ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ ಎಂದು ವರದಿಯಾಗಿತ್ತು. ಆದರೀಗ ಸೌದಿ ಅರೇಬಿಯಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ನವೆಂಬರ್ 24 ಮತ್ತು 25 ರಂದು ಅರಬ್ಬರ ನಾಡಿನಲ್ಲಿ ಆಟಗಾರರ ಮೆಗಾ ಆಕ್ಷನ್ ನಡೆಯಲಿದೆ.
ರಿಟೈನ್ ಪ್ರಕ್ರಿಯೆ ಮುಕ್ತಾಯ:
ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಪ್ರಕ್ರಿಯೆಯನ್ನು ಮುಗಿಸಿದೆ. ಅದರಂತೆ ಈ ಬಾರಿ 10 ಫ್ರಾಂಚೈಸಿಗಳಲ್ಲಿ 46 ಆಟಗಾರರು ರಿಟೈನ್ ಆಗಿದ್ದಾರೆ.
- ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಮಥೀಶ ಪತಿರಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ.
- ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್.
- ಗುಜರಾತ್ ಟೈಟಾನ್ಸ್: ರಶೀದ್ ಖಾನ್, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್.
- ಕೊಲ್ಕತ್ತಾ ನೈಟ್ ರೈಡರ್ಸ್: ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣ್ದೀಪ್ ಸಿಂಗ್
- ಲಕ್ನೋ ಸೂಪರ್ ಜೈಂಟ್ಸ್: ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬಡೋನಿ.
- ಮುಂಬೈ ಇಂಡಿಯನ್ಸ್: ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ.
- ಪಂಜಾಬ್ ಕಿಂಗ್ಸ್: ಶಶಾಂಕ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್.
- ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರೋನ್ ಹೆಟ್ಮೆಯರ್, ಸಂದೀಪ್ ಶರ್ಮಾ
- ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್.
- ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್.