IPL 2025: SRH ತಂಡದಿಂದ ಉಮ್ರಾನ್ ಮಲಿಕ್ ಔಟ್?

|

Updated on: Jul 24, 2024 | 2:01 PM

IPL 2025: ಈ ಬಾರಿಯ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಹುದು. ಅದಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡದಿಂದ ಕೈ ಬಿಡಲು ಚಿಂತಿಸಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಜಮ್ಮು ಎಕ್ಸ್​ಪ್ರೆಸ್ ಖ್ಯಾತಿ ಉಮ್ರಾನ್ ಎಸ್​ಆರ್​ಹೆಚ್ ತಂಡದಲ್ಲಿ ಕಾಣಿಸಿಕೊಳ್ಳುವುದು ಡೌಟ್.

IPL 2025: SRH ತಂಡದಿಂದ ಉಮ್ರಾನ್ ಮಲಿಕ್ ಔಟ್?
Umran Malik
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಉಮ್ರಾನ್ ಮಲಿಕ್ ಅವರನ್ನು ತಂಡದಿಂದ ಕೈ ಬಿಡಲು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಯಸಿದೆ. ಎಸ್​ಆರ್​ಹೆಚ್ ಫ್ರಾಂಚೈಸಿಯು ಮೆಗಾ ಹರಾಜಿಗಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಜಮ್ಮು ಕಾಶ್ಮೀರದ ವೇಗಿಯನ್ನು ಕೈ ಬಿಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

2021ರ ಹರಾಜಿನ ಮೂಲಕ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 2 ಕೊಟಿ ರೂ.ಗೆ ಉಮ್ರಾನ್ ಮಲಿಕ್ ಅವರನ್ನು ಖರೀದಿಸಿತ್ತು. ಅದರಂತೆ ಮೊದಲ ಸೀಸನ್​ನಲ್ಲಿ ಆಡಿದ್ದು ಕೇವಲ 3 ಪಂದ್ಯಗಳು ಮಾತ್ರ.

ಇದಾಗ್ಯೂ 2022ರ ಹರಾಜಿಗೂ ಮುನ್ನ ಉಮ್ರಾನ್ ಮಲಿಕ್ ಅವರನ್ನು 4 ಕೋಟಿ ರೂ. ನೀಡಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಉಳಿಸಿಕೊಂಡಿತ್ತು. ಅದರಂತೆ ಐಪಿಎಲ್​ 2022 ರಲ್ಲಿ ಕಣಕ್ಕಿಳಿದ ಯುವ ವೇಗಿ ತನ್ನ ಮಾರಕ ವೇಗದಿಂದ ಗಮನ ಸೆಳೆದರು. ಅಲ್ಲದೆ 14 ಪಂದ್ಯಗಳಿಂದ 22 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದರು.

ಹೀಗಾಗಿಯೇ 2023 ರಲ್ಲೂ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಲಿಕ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈ ಸೀಸನ್​ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದರೂ ಪಡೆದದ್ದು ಕೇವಲ 5 ವಿಕೆಟ್ ಮಾತ್ರ.

ಇನ್ನು ಐಪಿಎಲ್ 2024 ರಲ್ಲಿ ಉಮ್ರಾನ್ ಮಲಿಕ್ ಕೇವಲ 1 ಪಂದ್ಯದಲ್ಲಿ ಮಾತ್ರ ಅವಕಾಶ ಪಡೆದಿದ್ದರು. ಕಳೆದ ಸೀಸನ್​ನಲ್ಲಿ ಕೇವಲ ಒಂದು ಪಂದ್ಯವಾಡಿದ ಆಟಗಾರನನ್ನು ಹರಾಜಿಗೂ ಮುನ್ನ ಕೈ ಬಿಡಲು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 26 ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 493 ಎಸೆತಗಳನ್ನು ಎಸೆದಿದ್ದು, ಈ ವೇಳೆ 772 ರನ್ ನೀಡಿ 29 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರು

ವೇಗದೂತ ದಾಖಲೆ:

ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್ ಎಂಬ ದಾಖಲೆ ಉಮ್ರಾನ್ ಮಲಿಕ್ ಹೆಸರಿನಲ್ಲಿದೆ. ಐಪಿಎಲ್ 2022 ರಲ್ಲಿ ಮಲಿಕ್ 157 kmph ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಹೀಗಾಗಿ ಜಮ್ಮು ಎಕ್ಸ್​ಪ್ರೆಸ್ ಖ್ಯಾತಿಯ ಉಮ್ರಾನ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಕೆಲ ಫ್ರಾಂಚೈಸಿಗಳು ಅವರು ಖರೀದಿಗೆ ಆಸಕ್ತಿವಹಿಸುವ ಸಾಧ್ಯತೆಯಿದೆ.

 

 

Published On - 2:01 pm, Wed, 24 July 24