ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ದಿನಾಂಕ ನಿಗದಿ: ರಿಯಾದ್​ನಿಂದ ಜಿದ್ದಾಗೆ ಶಿಫ್ಟ್​

|

Updated on: Nov 05, 2024 | 9:37 PM

IPL 2025: ಬಹು ನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ನ(ಐಪಿಎಲ್​) ಪಂದ್ಯಾವಳಿಗೆ ಸಿದ್ಧತೆ ಶುರುವಾಗಿದೆ. ಈಗಾಗಲೇ ಆಟಗಾರರ ರಿಟೈನ್ ಪ್ರಕ್ರಿಯೆ ಮುಗಿದಿದ್ದು,ಇದೀಗ ಆಟಗಾರರ ಮೆಗಾ ಹರಾಜು​ ಪ್ರಕ್ರಿಯೆ ದಿನಾಂಕ ಫಿಕ್ಸ್ ಆಗಿದೆ. ಆದರೆ, ಈ ಬಾರಿಯ ಹರಾಜು ಪ್ರಕ್ರಿಯೆ ಹೊರದೇಶದಲ್ಲಿ ನಡೆಯಲಿದೆ. ಹಾಗಾದ್ರೆ, ಎಲ್ಲಿ ಹರಾಜು ? ಯಾವಾಗ ಎನ್ನುವ ವಿವರ ಇಲ್ಲಿದೆ.

ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ದಿನಾಂಕ ನಿಗದಿ: ರಿಯಾದ್​ನಿಂದ ಜಿದ್ದಾಗೆ ಶಿಫ್ಟ್​
IPL 2025
Follow us on

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ನ(ಐಪಿಎಲ್​) ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕ ನಿಗದಿಯಾಗಿದೆ. ಇದೇ ನವೆಂಬರ್​​ 24, 25ರಂದು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಐಪಿಎಲ್ ಆಟಗಾರರ​ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಇಂದು (ನವೆಂಬರ್ 05) ಅಧಿಕೃತವಾಗಿ ಘೋಷನೆ ಮಾಡಿದೆ. ಆದ್ರೆ, ಈ ಮೊದಲು ಸೌದಿ ಅರೇಬಿಯಾದ ರಿಯಾದ್​ಲ್ಲಿ ನಿಗದಿಯಾಗಿದ್ದ ಹರಾಜು ಪ್ರಕ್ರಿಯೆ ಜಿದ್ದಾಗೆ ಶಿಫ್ಟ್ ಆಗಿದೆ. ಈ ಬಾರಿಯ ಮೆಗಾ  ಹರಾಜು ಮಹತ್ವದ ಪಡೆದುಕೊಂಡಿದೆ. ಯಾಕಂದ್ರೆ ಹರಾಜಿನಲ್ಲಿ ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಭಾರತದ ಕ್ರಿಕೆಟ್ ತಾರೆಗಳನ್ನು ಸೆಳೆಯಲು ಫ್ರಾಂಚೈಸಿಗಳು ಪೈಪೋಟಿ ನಡೆಸಲಿವೆ.

2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರಂದು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಬಿಸಿಸಿಐ ರೂಪಿಸಿದ್ದ ಧಾರಣ ನಿಯಮವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಿದ್ದವು. ಇದೀಗ ಆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಮೆಗಾ ಹರಾಜಿನತ್ತ ನೆಟ್ಟಿದೆ. ಏಕೆಂದರೆ ಮೆಗಾ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಾದ ಆಟಗಾರರನ್ನು ಖರೀದಿಸುವುದು ಈ ಫ್ರಾಂಚೈಸಿಗಳ ಪ್ರಮುಖ ಗುರಿಯಾಗಿದೆ.

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ?

ಐಪಿಎಲ್ 2025 ಕ್ಕೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ ಗಾತ್ರವನ್ನು ಹೆಚ್ಚಿಸಿತ್ತು. ಈ ಹಿಂದೆ ಪ್ರತಿ ತಂಡವು 100 ಕೋಟಿ ರೂ. ಹರಾಜು ಮೊತ್ತದೊಂದಿಗೆ ಹರಾಜಿಗಿಳಿಯುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ ಈಗ ಫ್ರಾಂಚೈಸಿಗಳಿಗೆ 125 ಕೋಟಿ ರೂ. ಹರಾಜು ಮೊತ್ತ ಸಿಗಲಿದೆ.

ಪ್ರಸ್ತುತ ಪಂಜಾಬ್ ಕಿಂಗ್ಸ್ ಬಳಿ ಅಧಿಕ ಮೊತ್ತವಿದೆ. ಈ ಫ್ರಾಂಚೈಸಿ ಕೇವಲ ಇಬ್ಬರನ್ನು ಉಳಿಸಿಕೊಂಡಿದ್ದು, ಇದರ ಬಳಿ ಇನ್ನು 110.5 ರೂಪಾಯಿ ಹಣ ಉಳಿದಿದೆ. ಉಳಿದಂತೆ ಆರ್‌ಸಿಬಿ ಬಳಿ 83 ಕೋಟಿ , ಎಸ್‌ಆರ್‌ಎಚ್‌ ಬಳಿ 45 ಕೋಟಿ, ಎಲ್‌ಎಸ್‌ಜಿ ಬಳಿ 69 ಕೋಟಿ, ರಾಜಸ್ಥಾನ ಬಳಿ 79 ಕೋಟಿ, ಸಿಎಸ್‌ಕೆ ಬಳಿ 69 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್‌ ಬಳಿ 73 ಕೋಟಿ ರೂ. ಹಣವಿದೆ.

ಈಗಾಗಲೇ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿವೆ. 10 ತಂಡಗಳು ಒಟ್ಟು 46 ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಇನ್ನುಳಿದಂತೆ 204 ಆಟಗಾರರು ಈಗ ಹರಾಜಿನಲ್ಲಿದ್ದು, ಈ ಪೈಕಿ 70 ವಿದೇಶಿ ಆಟಗಾರರು ಇದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಆಟಗಾರ ಯಾವ ತಂಡ ಸೇರಲಿದ್ದಾನೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Tue, 5 November 24