Breaking News: ಮಾರ್ಚ್​ 14 ರಿಂದ ಐಪಿಎಲ್ ಆರಂಭ; ಮುಂದಿನ 3 ಆವೃತ್ತಿಗಳ ವೇಳಾಪಟ್ಟಿ ಬಹಿರಂಗ

|

Updated on: Nov 22, 2024 | 9:52 AM

IPL 2025 Schedule: 18ನೇ ಆವೃತ್ತಿಯ ಐಪಿಎಲ್ ಯಾವಾಗ ಆರಂಭ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇಎಸ್​ಪಿಎನ್ ವರದಿಯ ಪ್ರಕಾರ, ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್​ 14 ರಿಂದ ಆರಂಭವಾಗಲಿದ್ದು, ಮೇ 25 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಇದರ ಜೊತೆಗೆ ಮುಂದಿನ ಮೂರು ಆವೃತ್ತಿಗಳ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.

Breaking News: ಮಾರ್ಚ್​ 14 ರಿಂದ ಐಪಿಎಲ್ ಆರಂಭ; ಮುಂದಿನ 3 ಆವೃತ್ತಿಗಳ ವೇಳಾಪಟ್ಟಿ ಬಹಿರಂಗ
ಐಪಿಎಲ್ 2025
Follow us on

2025 ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 574 ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಮುಂದಿನ ಆವೃತ್ತಿಯ ಅಂದರೆ 18ನೇ ಆವೃತ್ತಿಯ ಐಪಿಎಲ್ ಯಾವಾಗ ಆರಂಭ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇಎಸ್​ಪಿಎನ್ ಕ್ರಿಕ್​ಇನ್ಫೋ ವರದಿಯ ಪ್ರಕಾರ, ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್​ 14 ರಿಂದ ಆರಂಭವಾಗಲಿದ್ದು, ಮೇ 25 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಇದರ ಜೊತೆಗೆ ಮುಂದಿನ ಮೂರು ಆವೃತ್ತಿಗಳ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, 2026 ರಲ್ಲಿ ನಡೆಯಲ್ಲಿರುವ ಐಪಿಎಲ್ ಮಾರ್ಚ್​ 15 ರಿಂದ ಮೇ 31 ರವರೆಗೆ ನಡೆದರೆ, 2027 ರ ಐಪಿಎಲ್ ಮಾರ್ಚ್​ 14 ರಿಂದ ಮೇ 30 ರವರೆಗೆ ನಡೆಯಲ್ಲಿದೆ.

ಮೂರು ಆವೃತ್ತಿಗಳ ವೇಳಾಪಟ್ಟಿ

ಇಎಸ್​ಪಿಎನ್ ಕ್ರಿಕ್​ಇನ್ಫೋ ವರದಿ ಮಾಡಿರುವಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ಬಿಸಿಸಿಐ, ಇ-ಮೇಲ್ ಮುಖಾಂತರ ಈ ಮಾಹಿತಿ ರವಾನೆ ಮಾಡಿದೆ. ಆ ಪ್ರಕಾರ, ಇದೀಗ ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಮೂರರ ಪೈಕಿ, ಮುಂದಿನ ವರ್ಷ ನಡೆಯಲ್ಲಿರುವ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ. ಇನ್ನು ಮುಂದಿನ ಆವೃತ್ತಿಯ ವಿಚಾರಕ್ಕೆ ಬರುವುದಾದರೆ… ಕಳೆದ ಮೂರು ಆವೃತ್ತಿಗಳಂತೆ ಮುಂದಿನ ಆವೃತ್ತಿಯಲ್ಲೂ 74 ಪಂದ್ಯಗಳು ನಡೆಯಲ್ಲಿವೆ ಎಂಬುದು ಬಿಸಿಸಿಐ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಐಪಿಎಲ್

ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣ ಟೂರ್ನಿ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಆಯೋಜಿಸಲಾಗಿದೆ. ಅಂದರೆ 2025 ರ ಐಪಿಎಲ್ ಸೀಸನ್, ಚಾಂಪಿಯನ್ಸ್ ಟ್ರೋಫಿ ಮುಗಿದ 5 ದಿನಗಳ ನಂತರ ಪ್ರಾರಂಭವಾಗಲಿದೆ. ಐಪಿಎಲ್‌ನ ಕೊನೆಯ ಸೀಸನ್ ಮಾರ್ಚ್ 23 ರಿಂದ ಪ್ರಾರಂಭವಾಗಿತ್ತು. ಆದರೆ ಈ ಬಾರಿ ಪಂದ್ಯಾವಳಿಯನ್ನು 9 ದಿನ ಮುಂಚಿತವಾಗಿ ಪ್ರಾರಂಭಿಸಲಾಗುತ್ತಿದೆ. ಪಂದ್ಯಾವಳಿಯ ಪಂದ್ಯಗಳ ಸಮಯದಲ್ಲಿ ತಂಡಗಳಿಗೆ ಗರಿಷ್ಠ ಸಮಯವನ್ನು ನೀಡುವುದು ಇದಕ್ಕೆ ಒಂದು ದೊಡ್ಡ ಕಾರಣವೆಂದು ತೋರುತ್ತದೆ. ಏಕೆಂದರೆ ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಫೈನಲ್ ಆಡಲು ಟೀಂ ಇಂಡಿಯಾ ಕೂಡ ಪ್ರಬಲ ಸ್ಪರ್ಧಿಯಾಗಿರುವ ಕಾರಣ, ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಫೈನಲ್ ನಂತರ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯು ಜೂನ್ 18-19 ರಿಂದ ಪ್ರಾರಂಭವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Fri, 22 November 24