IND vs AUS: ವಿವಾದಾತ್ಮಕ ತೀರ್ಪಿಗೆ ಬಲಿಯಾದ ರಾಹುಲ್; ಅಂಪೈರ್ ವಿರುದ್ಧ ಭುಗಿಲೆದ್ದ ಆಕ್ರೋಶ
KL Rahul Controversial Dismissal: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ವಿವಾದಾತ್ಮಕ ಔಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಮೂರನೇ ಅಂಪೈರ್ ನೀಡಿದ ತಪ್ಪು ತೀರ್ಪಿನಿಂದಾಗಿ ರಾಹುಲ್ 26 ರನ್ ಗಳಿಗೆ ಔಟ್ ಆದರು. ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಈ ತೀರ್ಪು ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು, ಪರ್ತ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಮೊದಲ ದಿನವೇ ಅಂಪೈರ್ ನೀಡಿರುವ ಕಳಪೆ ತೀರ್ಪಿನ ಮೇಲೆ ವಿವಾದವೊಂದು ಹುಟ್ಟಿಕೊಂಡಿದೆ. ಮೂರನೇ ಅಂಪೈರ್ ನೀಡಿದ ಈ ಕೆಟ್ಟ ತೀರ್ಪಿಗೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ವಾಸ್ತವವಾಗಿ ಪರ್ತ್ ಟೆಸ್ಟ್‌ನಲ್ಲಿ ಆರಂಭಿನಾಗಿ ಕಣಕ್ಕಿಳಿದಿದ್ದ ರಾಹುಲ್, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬಲಿಯಾದರು. ಆದರೆ ಫೀಲ್ಡ್ ಅಂಪೈರ್ ಔಟ್ ನೀಡದ ಹೊರತಾಗಿಯೂ, ಮೂರನೇ ಅಂಪೈರ್ ನೀಡಿದ ಕೆಟ್ಟ ತೀರ್ಪು, ಆಸ್ಟ್ರೇಲಿಯಾಕ್ಕೆ ವರವಾದರೆ, ಭಾರತಕ್ಕೆ ದುಬಾರಿಯಾಗಿದೆ. ಇದೀಗ ಮೂರನೇ ಅಂಪೈರ್ ನೀಡಿದ ವಿವಾದತ್ಮಕ ತೀರ್ಪು, ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದೆ.
ನಾಟೌಟ್ ನೀಡಿದ್ದ ಫೀಲ್ಡ್ ಅಂಪೈರ್
ವಾಸ್ತವವಾಗಿ ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ರಾಹುಲ್ ಅವರ ಬ್ಯಾಟ್ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಕೈಸೇರಿತು. ಆ ಕೂಡಲೇ ಆಸೀಸ್ ಆಟಗಾರರು ರಾಹುಲ್ ವಿಕೆಟ್ಗೆ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ಆಸೀಸ್ ಆಟಗಾರರು ರಿವ್ಯೂವ್ ಮೊರೆ ಹೋದರು. ಆಸ್ಟ್ರೇಲಿಯಾದ ಮೇಲ್ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಚೆಂಡು ಬ್ಯಾಟ್‌ಗೆ ತಾಗಿದೆಯಾ ಅಥವಾ ಪ್ಯಾಡ್‌ಗೆ ತಾಗಿದೆಯಾ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳದೆ, ರಾಹುಲ್ ಔಟೆಂದು ತೀರ್ಪು ನೀಡಿದರು. ಹೀಗಾಗಿ ಫೀಲ್ಡ್ ಅಂಪೈರ್ ಕೂಡ ತಮ್ಮ ನಿರ್ಧಾರ ಬದಲಿಸಿ, ರಾಹುಲ್ ಔಟೆಂದು ತೀರ್ಪು ಪ್ರಕಟಿಸಬೇಕಾಯಿತು.
DRS to the rescue for Australia!
Snicko shows an edge and KL Rahul goes.
Starc has 2/6 in his 7th over 🔥 #AUSvIND pic.twitter.com/R4mW3yE3VM
— 7Cricket (@7Cricket) November 22, 2024
ರಾಹುಲ್ ವಿರುದ್ಧ ತೀರ್ಪು ನೀಡದ 3ನೇ ಅಂಪೈರ್
ಆದರೆ ಇಲ್ಲಿ ಮೂಡವ ಪ್ರಶ್ನೆ ಎಂದರೆ, ಚೆಂಡು ರಾಹುಲ್ ಅವರ ಬ್ಯಾಟ್ ಬಳಿ ಹಾದು ಹೋಗುವ ವೇಳೆ ಬ್ಯಾಟ್, ರಾಹುಲ್ ಅವರ ಪ್ಯಾಡ್‌ಗೆ ತಾಗಿತ್ತು. ಇದಲ್ಲದೆ, ಚೆಂಡು ಹಾಗೂ ಬ್ಯಾಟಿನ ನಡುವೆ ಅಂತರವಿರುವುದು ಇದೀಗ ಹೊರಬಿದ್ದಿರುವ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದಗ್ಯೂ ಮೂರನೇ ಅಂಪೈರ್, ಸ್ನಿಕ್ಕೋಮೀಟರ್‌ನಲ್ಲಿ ಬಂದ ಏರಿಳಿತವನ್ನು ಆದರಿಸಿ ರಾಹುಲ್ ಔಟೆಂದು ತೀರ್ಪು ನೀಡಿದ್ದಾರೆ. ಸಾಮಾನ್ಯವಾಗಿ, ಒಬ್ಬ ಆಟಗಾರ ಖಚಿತವಾಗಿ ಔಟ್ ಎಂಬ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದಾಗ, ಮೂರನೇ ಅಂಪೈರ್, ಫೀಲ್ಡ್ ಅಂಪೈರ್ ನೀಡಿದ ತೀರ್ಪನೇ ಎತ್ತಿಹಿಡಿಯಬೇಕು. ಆದರೆ ರಾಹುಲ್ ವಿಚಾರದಲ್ಲಿ ಇದು ಸಂಭವಿಸಲಿಲ್ಲ. ನಿರ್ಧಾರ ಅಸ್ಪಷ್ಟವಾಗಿದ್ದರೂ, ಮೂರನೇ ಅಂಪೈರ್ ರಾಹುಲ್ ಔಟೆಂದು ತೀರ್ಪು ಘೋಷಿಸಿದ್ದಾರೆ.
"His pad and bat are not together at that point in time as the ball passes.
"It's (bat hitting pad) after, in fact, the ball passes the edge. Does Snicko pick up the sound of the bat hitting the pad?
"We're assuming (Snicko) may be the outside edge of the bat but that may not… pic.twitter.com/hvG0AF9rdo
— 7Cricket (@7Cricket) November 22, 2024
3 ಸಾವಿರ ರನ್ ಪೂರೈಸಿದ ರಾಹುಲ್
ಅಂಪೈರ್ ನೀಡಿದ ಈ ವಿವಾದಾತ್ಮಕ ತೀರ್ಪು ರಾಹುಲ್ರನ್ನು ಕೆರಳಿಸಿತು. ಹೀಗಾಗಿ ರಾಹುಲ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿ, ನೋವಿನಿಂದಲೇ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು. ಔಟಾಗುವ ಮುನ್ನ ರಾಹುಲ್, ತಮ್ಮ ಇನ್ನಿಂಗ್ಸ್ನಲ್ಲಿ 74 ಎಸೆತಗಳನ್ನು ಎದುರಿಸಿ 26 ರನ್‌ಗಳ ಇನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ಆಧಾರದಲ್ಲಿ ರಾಹುಲ್ ಟೆಸ್ಟ್‌ನಲ್ಲಿ ಮೂರು ಸಾವಿರ ರನ್ ಪೂರೈಸಿದ್ದಾರೆ. ಟೆಸ್ಟ್‌ನಲ್ಲಿ ಇದುವರೆಗೆ 54 ಪಂದ್ಯಗಳನ್ನಾಡಿರುವ ರಾಹುಲ್, ಸುಮಾರು 34ರ ಸರಾಸರಿಯಲ್ಲಿ ಎಂಟು ಶತಕ ಹಾಗೂ 15 ಅರ್ಧಶತಕಗಳೊಂದಿಗೆ ಈ ದಾಖಲೆ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 22 November 24