AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಅರ್ಧಕ್ಕೆ ನಿಂತ ಐಪಿಎಲ್; ಆಟಗಾರರ ವೇತನಕ್ಕೆ ಬೀಳುತ್ತಾ ಕತ್ತರಿ?

IPL 2025 Suspended: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಐಪಿಎಲ್ 2025 ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಆದರೂ, ಆಟಗಾರರ ವೇತನದ ಮೇಲೆ ಇದರ ಯಾವುದೇ ಪರಿಣಾಮ ಬೀರುವುದಿಲ್ಲ. ಐಪಿಎಲ್ ನಿಯಮಗಳ ಪ್ರಕಾರ, ಆಟಗಾರರು ತಮ್ಮ ಪೂರ್ಣ ವೇತನವನ್ನು ಪಡೆಯುತ್ತಾರೆ. ಆದಾಗ್ಯೂ, ಪಂದ್ಯ ಶುಲ್ಕ ಮಾತ್ರ ಕಡಿತವಾಗಲಿದೆ. ಆಡಿದ ಪಂದ್ಯಗಳಿಗೆ ಮಾತ್ರ ಪಂದ್ಯ ಶುಲ್ಕ ನೀಡಲಾಗುವುದು.

IPL 2025: ಅರ್ಧಕ್ಕೆ ನಿಂತ ಐಪಿಎಲ್; ಆಟಗಾರರ ವೇತನಕ್ಕೆ ಬೀಳುತ್ತಾ ಕತ್ತರಿ?
Ipl 2025
ಪೃಥ್ವಿಶಂಕರ
|

Updated on:May 09, 2025 | 2:23 PM

Share

ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಕಾರ್ಯಚಾರಣೆ ನಡೆಯುತ್ತಿರುವ ಕಾರಣದಿಂದಾಗಿ ಬಿಸಿಸಿಐ (BCCI), ಐಪಿಎಲ್ 2025 ಅನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ. ಮೇ 8 ರಂದು ಕುತಂತ್ರಿ ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿ ಭಾರತದ ಹಲವು ನಗರಗಳ ಮೇಲೆ ದಾಳಿ ಮಾಡಿತ್ತು. ಈ ಕಾರಣದಿಂದಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಐಪಿಎಲ್ (IPL 2025) ಪಂದ್ಯವನ್ನು ಸಹ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆ ನಂತರ ತುರ್ತು ಸಭೆ ಕರೆದಿದ್ದ ಬಿಸಿಸಿಐ, ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸೀಸನ್ ಪೂರ್ಣಗೊಳ್ಳದ ಕಾರಣ ಆಟಗಾರರ ಸಂಬಳಕ್ಕೆ ಕತ್ತರೆ ಬೀಳುತ್ತಾ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಆಟಗಾರರಿಗೆ ಎಷ್ಟು ಹಣ ಸಿಗುತ್ತದೆ?

ಈ ಐಪಿಎಲ್ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆಯಬೇಕಿತ್ತು, ಅದರಲ್ಲಿ 57 ಪಂದ್ಯಗಳು ಪೂರ್ಣಗೊಂಡಿವೆ. ಏತನ್ಮಧ್ಯೆ, 58 ನೇ ಪಂದ್ಯವನ್ನು ಸಹ ಅರ್ಧಕ್ಕೆ ನಿಲ್ಲಿಸಲಾಯಿತು. ಇದರ ಪ್ರಕಾರ, ಈಗ ಪ್ಲೇಆಫ್ ಮತ್ತು ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬಾಕಿ ಉಳಿದಿವೆ. ಆದರೆ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿರುವುದರಿಂದ, ಈ ಪಂದ್ಯಗಳನ್ನು ಸದ್ಯಕ್ಕೆ ಆಡಲಾಗುವುದಿಲ್ಲ. ಹಾಗಾದರೆ ಇದಕ್ಕಾಗಿ ಆಟಗಾರರ ಸಂಬಳವನ್ನು ಕಡಿತಗೊಳಿಸಲಾಗುತ್ತದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಐಪಿಎಲ್ ಅರ್ಧಕ್ಕೆ ನಿಂತರೂ ಆಟಗಾರರ ವೇತನದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಂದರೆ ಆಟಗಾರರಿಗೆ ಸಿಗಬೇಕಿದ್ದ ಪೂರ್ಣ ವೇತನ ಸಿಗಲಿದೆ. ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಆಟಗಾರನು ಇಡೀ ಸೀಸನ್​ಗೆ ಲಭ್ಯವಿದ್ದರೆ, ಅವನ ಸಂಬಳವನ್ನು ಕಡ್ಡಾಯವಾಗಿ ಪಾವತಿಸಲಾಗುತ್ತದೆ. ಆ ಆಟಗಾರ ಎಷ್ಟು ಪಂದ್ಯಗಳನ್ನು ಆಡಿದ್ದಾನೆ ಅಥವಾ ಎಷ್ಟು ಪಂದ್ಯಗಳಿಗೆ ಆಯ್ಕೆಯಾಗಿದ್ದಾನೆ ಎಂಬುದು ಮುಖ್ಯವಲ್ಲ.

ಈ ಲೀಗ್‌ನಲ್ಲಿ ಭಾಗವಹಿಸುವ ಆಟಗಾರರು ಪ್ರತಿ ಸೀಸನ್​ನಗೂ ತಮಗೆ ನಿಗದಿಯಾದ ಸಂಬಳವನ್ನು ಪಡೆಯುತ್ತಾರೆ. ಅಂದರೆ ಒಬ್ಬ ಆಟಗಾರನನ್ನು 10 ಕೋಟಿ ರೂ.ಗೆ ಖರೀದಿಸಿದರೆ, ಅವನಿಗೆ ಪೂರ್ಣ 10 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಗಾಯದಿಂದಾಗಿ ಪಂದ್ಯಾವಳಿಯ ಮೊದಲು ಅಥವಾ ಸಮಯದಲ್ಲಿ ಟೂರ್ನಿಯಿಂದ ಹಿಂದೆ ಸರಿದ ಆಟಗಾರರ ವೇತನವನ್ನು ಮಾತ್ರ ಕಡಿತಗೊಳಿಸಲಾಗುತ್ತದೆ.

IPL 2025: ಯಾವಾಗ ನಡೆಯಲಿದೆ ಐಪಿಎಲ್ ದ್ವಿತೀಯಾರ್ಧ? ಬಿಸಿಸಿಐಗೆ ದೊಡ್ಡ ಸವಾಲು

ಪಂದ್ಯ ಶುಲ್ಕ ಮಾತ್ರ ಸಿಗುವುದಿಲ್ಲ

ವಾಸ್ತವವಾಗಿ ಐಪಿಎಲ್ 2025 ರ ಆರಂಭಕ್ಕೂ ಮೊದಲು ಇದೇ ಮೊದಲ ಬಾರಿಗೆ ಬಿಸಿಸಿಐ, ವೇತನದ ಜೊತೆಗೆ ಆಟಗಾರರಿಗೆ ಪಂದ್ಯ ಶುಲ್ಕವನ್ನು ನೀಡುವುದಾಗಿ ಘೋಷಿಸಿತ್ತು. ಈ ಪ್ರಕಾರ ಆಡುವ11 ರ ಬಳಗದಲ್ಲಿ ಸ್ಥಾನ ಪಡೆದ ಮತ್ತು ಇಂಪ್ಯಾಕ್ಟ್ ಆಟಗಾರರಿಗೆ 7.5 ಲಕ್ಷ ರೂ.ಗಳ ಪಂದ್ಯ ಶುಲ್ಕವನ್ನು ನೀಡಲಾಗುತ್ತಿತ್ತು. ಈ ಹಣವನ್ನು ಆಟಗಾರರ ಸಂಬಳದ ಜೊತೆಗೆ ನೀಡಬೇಕಾಗಿತ್ತು. ಆದರೆ ಲೀಗ್ ಅನ್ನು ಮಧ್ಯದಲ್ಲಿ ಸ್ಥಗಿತಗೊಳಿಸುವುದರಿಂದ ಪಂದ್ಯ ಶುಲ್ಕ ನಷ್ಟವಾಗಬಹುದು. ಆದರೆ, ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಪಂದ್ಯ ಶುಲ್ಕವನ್ನು ಖಂಡಿತವಾಗಿ ನೀಡಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Fri, 9 May 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ