ಐ ಲವ್ ಯೂ ಎಂದ ಅಭಿಮಾನಿಯನ್ನು 20 ವರ್ಷಗಳ ಬಳಿಕ ಭೇಟಿಯಾದ ಝಹೀರ್ ಖಾನ್

Zaheer Khan: ಟೀಮ್ ಇಂಡಿಯಾದ ಮಾಜಿ ವೇಗಿ ಝಹೀರ್ ಖಾನ್ ಈ ಬಾರಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಎಲ್​ಎಸ್​ಜಿ ತಂಡ ಮೆಂಟರ್ ಆಗಿ ಆಯ್ಕೆಯಾಗಿರುವ ಝ್ಯಾಕ್ ಬೌಲಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಲಕ್ನೋ ಪಡೆಯನ್ನು ಕೂಡಿಕೊಂಡಿರುವ ಝಹೀರ್ ಖಾನ್ ಅವರ ವಿಡಿಯೋವೊಂದು ವೈರಲ್ ಆಗಿದೆ.

ಐ ಲವ್ ಯೂ ಎಂದ ಅಭಿಮಾನಿಯನ್ನು 20 ವರ್ಷಗಳ ಬಳಿಕ ಭೇಟಿಯಾದ ಝಹೀರ್ ಖಾನ್
Zaheer Khan - Fan

Updated on: Mar 15, 2025 | 7:40 AM

ಅದು 2005, ಮಾರ್ಚ್ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್​ನಲ್ಲಿ 570 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿತು. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಝಹೀರ್ ಖಾನ್ ಅವರ ಮಹಿಳಾ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದರು. ಅದು ಸಹ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಪ್ಲೆಕಾರ್ಡ್‌ ಹಿಡಿದು..!

ಇತ್ತ ಕ್ಯಾಮೆರಾಮ್ಯಾನ್ ಕಣ್ಣು ಝಹೀರ್ ಐ ಲವ್ ಯೂ ಎಂದು ಪ್ಲೆಕಾರ್ಡ್‌ ಹಿಡಿದು ಕೂತಿದ್ದ ಯುವತಿಯತ್ತ ನೆಟ್ಟಿತು. ಲೈವ್ ಪಂದ್ಯದ ವೇಳೆ ಝಹೀರ್ ಖಾನ್ ಹಾಗೂ ಯುವತಿಯನ್ನು ಪ್ರದರ್ಶಿಸಿದರು. ಅತ್ತ ಡ್ರೆಸ್ಸಿಂಗ್ ರೂಮ್​ನಲ್ಲಿ ಕೂತಿದ್ದ ಯುವರಾಜ್ ಸಿಂಗ್ ಕೂಡ ಝಹೀರ್ ಖಾನ್ ಅವರ ಕಾಲೆಳೆಯಲಾರಂಭಿಸಿದರು.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಇದರ ನಡುವೆ ಯುವತಿ ಫ್ಲೈಯಿಂಗ್ ಕಿಸ್ ಸಹ ನೀಡಿದ್ದಾರೆ. ಇದಕ್ಕೆ ಮರುತ್ತರ ನೀಡುವಂತೆ ಯುವಿ ಒತ್ತಾಯಿಸುತ್ತಿರುದಂತೆ ಕಂಡು ಬಂದರು. ತಕ್ಷಣವೇ ಝಹೀರ್ ಖಾನ್ ಕೂಡ ಫ್ಲೈಯಿಂಗ್ ಕಿಸ್ ನೀಡಿದರು. ತನ್ನ ನೆಚ್ಚಿನ ಕ್ರಿಕೆಟಿಗನಿಂದ ಕಿಸ್ ಸಿಗುತ್ತಿದ್ದಂತೆ ಯುವತಿ ನಾಚಿ ನೀರಾಗಿದ್ದಳು.

ಅಂದು ಈ ರೋಮ್ಯಾಂಟಿಕ್  ಸನ್ನಿವೇಶದಿಂದಾಗಿ ಒಂದು ನಿಮಿಷಗಳ ಕಾಲ ಪಂದ್ಯ ನಡೆದಿರಲಿಲ್ಲ ಎಂಬುದು ವಿಶೇಷ. ಅಲ್ಲದೆ ಇದು ನೈಂಟೀಸ್ ಕಿಡ್​ಗಳ ಪಾಲಿಗೆ ಸ್ಮರಣೀಯ ಕ್ಷಣಗಳಾಗಿ ದಾಖಲಾದವು.

ಝಹೀರ್ ಐ ಲವ್ ಯೂ ವಿಡಿಯೋ:

ಅದೇ ಯುವತಿ ಇದೀಗ 20 ವರ್ಷಗಳ ಬಳಿಕ ಝಹೀರ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಝ್ಯಾಕ್ ಅವರನ್ನು ಹೊಟೇಲ್​ನಲ್ಲಿ ಬರ ಮಾಡಿಕೊಳ್ಳಲು ಯುವತಿಯು ಝಹೀರ್ ಐ ಲವ್ ಯೂ ಎಂಬ ಪ್ಲೆಕಾರ್ಡ್‌ ಹಿಡಿದು ನಿಂತಿದ್ದಳು.

20 ವರ್ಷಗಳ ಬಳಿಕ ಭೇಟಿ:


20 ವರ್ಷಗಳ ಬಳಿಕ ಅದೇ ಶೈಲಿಯ ಪ್ಲೆಕಾರ್ಡ್‌ನೊಂದಿಗೆ ಕಾಣಿಸಿಕೊಂಡ ಅಭಿಮಾನಿಯನ್ನು ಝಹೀರ್ ಖಾನ್ ಗುರುತಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

 

Published On - 7:40 am, Sat, 15 March 25