AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾವೇ ಚಾಂಪಿಯನ್… ಟೀಕಾಕಾರರ ಬಾಯಿ ಮುಚ್ಚಿಸಿದ ವಾಸಿಂ ಅಕ್ರಮ್

Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಆಡಿತ್ತು. ಇದರಿಂದ ಭಾರತ ತಂಡಕ್ಕೆ ಹೆಚ್ಚಿನ ಪ್ರಯೋಜನಗಳಾಗಿವೆ ಎಂದು ಅನೇಕ ಮಾಜಿ ಆಟಗಾರರು ದೂರಿದ್ದರು. ಆದರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಟೀಮ್ ಇಂಡಿಯಾ ಪರ ಹೇಳಿಕೆ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಟೀಮ್ ಇಂಡಿಯಾವೇ ಚಾಂಪಿಯನ್... ಟೀಕಾಕಾರರ ಬಾಯಿ ಮುಚ್ಚಿಸಿದ ವಾಸಿಂ ಅಕ್ರಮ್
Team India - Wasim Akram
Follow us
ಝಾಹಿರ್ ಯೂಸುಫ್
|

Updated on: Mar 15, 2025 | 8:31 AM

ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ಸ್ ಟ್ರೋಫಿಯ ನಡುವೆ ಕೇಳಿ ಬಂದ ಅತೀ ದೊಡ್ಡ ಅಪಸ್ವರವೆಂದರೆ ಈ ಬಾರಿ ಭಾರತ ತಂಡಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂಬುದು. ಅಂದರೆ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯದಲ್ಲಿ ದುಬೈನಲ್ಲಿ ಆಡಿರುವುದು ಪ್ರಯೋಜನಕಾರಿಯಾಗಿದೆ. ಹೀಗಾಗಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲಾ ಆರೋಪಗಳಿಗೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಖಡಕ್ ಉತ್ತರ ನೀಡಿದ್ದಾರೆ.

ಚಾನೆಲ್​​ ಚರ್ಚೆಯೊಂದರಲ್ಲಿ ಮಾತನಾಡಿದ ವಾಸಿಂ ಅಕ್ರಮ್, ಭಾರತ ತಂಡ ಎಲ್ಲೇ ಆಡಿದ್ದರೂ ಅವರು ಚಾಂಪಿಯನ್ಸ್​ ಟ್ರೋಫಿ ಗೆಲ್ಲುತ್ತಿದ್ದರು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಇತರ ತಂಡಗಳಂತೆ ಅವರು ಪಾಕಿಸ್ತಾನದಲ್ಲಿ ಆಡಿದ್ದರೂ ಅವರೇ ಚಾಂಪಿಯನ್ ಆಗುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನ ಇಲ್ಲ.

ಹೀಗೆ ಆರೋಪಗಳನ್ನು ಹೊರಿಸುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯುಎಸ್​ಎ-ವೆಸ್ಟ್ ಇಂಡೀಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ ಎಂಬುದು. ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಅಜೇಯರಾಗಿಯೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅಲ್ಲಿನ ಪಿಚ್​ಗಳು ಅವರಿಗೆ ಅನುಕೂಲಕರವಾಗಿತ್ತೇ ಎಂದು ವಾಸಿಂ ಅಕ್ರಮ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
Image
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
Image
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
Image
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
Image
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅದೇ ಪ್ರದರ್ಶನವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸಿದ್ದಾರೆ. ಅವರಿನ್ನು ಪಾಕಿಸ್ತಾನದಲ್ಲೂ ಆಡಿದ್ದರೂ ಇದೇ ಪ್ರದರ್ಶನ ನೀಡುತ್ತಿದ್ದರು. ಎಲ್ಲರನ್ನು ಸೋಲಿಸಿ ಕಪ್ ಗೆಲ್ಲುತ್ತಿದ್ದರು. ಹೀಗಾಗಿ ಟೀಮ್ ಇಂಡಿಯಾಗೆ ಅನುಕೂಲಕರವಾಗಿದೆ ಅಥವಾ ಪಿಚ್​ನ ಪ್ರಯೋಜನ ಪಡೆದಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಅಕ್ರಮ್ ಹೇಳಿದ್ದಾರೆ.

ಒಂದು ತಂಡವು ಅವರು ಆಡುವ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ಅವರೆಷ್ಟು ಬಲಿಷ್ಠರಾಗಿದ್ದಾರೆ ಎಂಬುದನ್ನು. ಇದು ಟೀಮ್ ಇಂಡಿಯಾದ ಆಳ ಮತ್ತು ಅವರ ನಾಯಕತ್ವದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಎಲ್ಲೇ ಆಡಿದ್ದರೂ ಅವರೇ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದರು ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.

ಇದನ್ನೂ ಓದಿ: IPL 2025: RCB ಸ್ಟೆಡಿನಾ? ಕಂಬ್ಯಾಕ್​ಗೆ ಜಸ್​ಪ್ರೀತ್ ಬುಮ್ರಾ ರೆಡಿ

ಈ ಮೂಲಕ ಇಡೀ ಟೂರ್ನಿಯನ್ನು ದುಬೈನಲ್ಲಿ ಆಡಿದ ಭಾರತ ತಂಡಕ್ಕೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಆರೋಪಗಳನ್ನು ವಾಸಿಂ ಅಕ್ರಮ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ 2024ರ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನವನ್ನು ಉಲ್ಲೇಖಿಸಿ ಟೀಕಾಕಾರರಿಗೆ ಖಡಕ್ ಉತ್ತರವನ್ನು ಸಹ ನೀಡಿದ್ದಾರೆ.

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್