ಮುಖ್ಯ ತಂಡವನ್ನು ಉಳಿಸಿಕೊಳ್ಳಲು RCB ಮಾಸ್ಟರ್ ಪ್ಲ್ಯಾನ್!

ಐಪಿಎಲ್ 2027ರ ಮಿನಿ ಹರಾಜು 2026ರ ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ, ಅಂದರೆ ನವೆಂಬರ್ 15, 2026ರ ಒಳಗೆ ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಅಧಿಕೃತ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಆರ್​ಸಿಬಿ ಈಗಲೇ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ.

ಮುಖ್ಯ ತಂಡವನ್ನು ಉಳಿಸಿಕೊಳ್ಳಲು RCB ಮಾಸ್ಟರ್ ಪ್ಲ್ಯಾನ್!
Rcb (6)
Image Credit source: IPL

Updated on: Oct 26, 2026 | 1:09 PM

ಐಪಿಎಲ್ 2025 ಮತ್ತು 2026ರ ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮುಂಬರುವ ಐಪಿಎಲ್ 2027ರ ಆವೃತ್ತಿಗೂ ತನ್ನ ವಿಜೇತ ಸಂಯೋಜನೆಯನ್ನು ಹಾಗೆಯೇ ಉಳಿಸಿಕೊಳ್ಳಲು ಭರ್ಜರಿ ತಂತ್ರ ರೂಪಿಸಿದೆ. ನವೆಂಬರ್ 15, 2026 ರ ಒಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಬೇಕಾಗಿದ್ದು, ಆರ್‌ಸಿಬಿ ತನ್ನ ಹಾಲಿ 25 ಆಟಗಾರರ ಬಲಿಷ್ಠ ಪಡೆಯಲ್ಲಿ ಶೇಕಡಾ 90 ರಷ್ಟು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ನಂಬಲರ್ಹ ಮೂಲಗಳು ವರದಿ ಮಾಡಿವೆ.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿ ತಂಡದಿಂದ ಕೇವಲ 3 ರಿಂದ 4 ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲು ಯೋಚಿಸುತ್ತಿದೆ. ಹೀಗಾಗಿ ಕಳೆದ ಬಾರಿ ಪ್ಲೇಯಿಂಗ್ ಇಲೆವೆನ್​​ನಲ್ಲಿ ಕಣಕ್ಕಿಳಿದ ಆಟಗಾರರು ತಂಡದಲ್ಲೇ ಹಾಗೆಯೇ ಉಳಿಯಲಿದ್ದಾರೆ.

ಕೋರ್ ತಂಡಕ್ಕೆ ಆರ್‌ಸಿಬಿ ಮಣೆ:

2025–27ರ ಮೂರು ವರ್ಷಗಳ ಸ್ಕ್ವಾಡ್ ಸೈಕಲ್‌ನ ಕೊನೆಯ ವರ್ಷ ಇದಾಗಿರುವುದರಿಂದ, ಆರ್‌ಸಿಬಿ ದೊಡ್ಡ ಮಟ್ಟದ ಬದಲಾವಣೆಗೆ ಕೈ ಹಾಕುತ್ತಿಲ್ಲ. ನಾಯಕ ರಜತ್ ಪಾಟೀದಾರ್, ರನ್‌ ಮಷಿನ್ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಮತ್ತು ಬೌಲಿಂಗ್ ಬೆನ್ನೆಲುಬಾದ ಜೋಶ್ ಹೇಝಲ್​ವುಡ್ ಹಾಗೂ ಭುವನೇಶ್ವರ್ ಕುಮಾರ್ ಅವರನ್ನೊಳಗೊಂಡ ಪ್ರಮುಖ ಕೋರ್ ತಂಡವು ಐಪಿಎಲ್ 2027 ರಲ್ಲೂ ಆರ್‌ಸಿಬಿ ಜರ್ಸಿಯಲ್ಲೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಯ ಭೀತಿಯಲ್ಲಿರುವ ಆಟಗಾರರು ಯಾರು?

ಡಿಸೆಂಬರ್ 16, 2026 ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ತಮ್ಮ ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಮತ್ತು ವಿದೇಶಿ ಕೋಟಾವನ್ನು ಬ್ಯಾಲೆನ್ಸ್ ಮಾಡಲು ಆರ್‌ಸಿಬಿ ಕೆಲವರನ್ನು ಕೈಬಿಡಬಹುದು. ಮಾಧ್ಯಮ ವರದಿಗಳ ಪ್ರಕಾರ ಈ ಕೆಳಗಿನ ಆಟಗಾರರು ರಿಲೀಸ್ ಲಿಸ್ಟ್‌ನಲ್ಲಿರುವ ಸಾಧ್ಯತೆ ದಟ್ಟವಾಗಿದೆ…

  • ಯಶ್ ದಯಾಳ್
  • ಮಂಗೇಶ್ ಯಾದವ್
  • ರೊಮಾರಿಯೊ ಶೆಫರ್ಡ್
  • ವಿಹಾನ್ ಕಾನಿಷ್ಕ

ಮಿನಿ ಹರಾಜಿನತ್ತ ಕಣ್ಣು:

ಸದ್ಯ 25 ಆಟಗಾರರ ಗರಿಷ್ಠ ಮಿತಿಯನ್ನು ಹೊಂದಿರುವ ಆರ್‌ಸಿಬಿ, ಈ 3-4 ಆಟಗಾರರನ್ನು ಬಿಡುಗಡೆ ಮಾಡುವುದರಿಂದ ಹರಾಜಿನಲ್ಲಿ ಕನಿಷ್ಠ ₹10 ರಿಂದ ₹15 ಕೋಟಿಗೂ ಅಧಿಕ ಪರ್ಸ್ ಬ್ಯಾಲೆನ್ಸ್ ಪಡೆಯಬಹುದು. ಈ ಮೊತ್ತವನ್ನು ಬಳಸಿಕೊಂಡು ಗೋವಾ ಮಿನಿ ಹರಾಜಿನಲ್ಲಿ ಬ್ಯಾಕಪ್ ಆಟಗಾರರನ್ನು ಖರೀದಿಸುವುದು ಫ್ರಾಂಚೈಸಿಯ ಯೋಜನೆಯಾಗಿದೆ.

ಇದನ್ನೂ ಓದಿ: ಕೇವಲ ಐದೇ 5 ಎಸೆತಗಳಲ್ಲಿ ವಿಶ್ವ ದಾಖಲೆಯ ಚೇಸಿಂಗ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (2026): ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us