AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡವನ್ನು ಹಾಡಿಹೊಗಳಿದ ಮಹೇಂದ್ರ ಸಿಂಗ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾದರೆ, ಅದು ಕೇವಲ ಒಂದು ಪಂದ್ಯವಾಗಿ ಉಳಿಯುವುದಿಲ್ಲ. ಬದಲಾಗಿ, ಎರಡು ರಣಪಡೆಗಳ ನಡುವಿನ ಮಹಾಯುದ್ಧದಂತೆ ಮಾರ್ಪಡುತ್ತದೆ. ಹೀಗಾಗಿಯೇ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಆಟಗಾರರು ಪರಸ್ಪರರನ್ನು ಹೊಗಳುವ ಸಾಹಸಕ್ಕೆ ಸಾಮಾನ್ಯವಾಗಿ ಕೈ ಹಾಕುವುದಿಲ್ಲ.

RCB ತಂಡವನ್ನು ಹಾಡಿಹೊಗಳಿದ ಮಹೇಂದ್ರ ಸಿಂಗ್ ಧೋನಿ
Ms Dhoni Image Credit source: IPL
ಝಾಹಿರ್ ಯೂಸುಫ್
|

Updated on: Oct 25, 2026 | 1:00 PM

Share

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಲೋಕದ ದಿಗ್ಗಜ ಎಂ.ಎಸ್. ಧೋನಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸತತ ಪ್ರದರ್ಶನವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಅಕ್ಟೋಬರ್ 24, 2026 ರಂದು ಬೆಂಗಳೂರಿನಲ್ಲಿ ನಡೆದ ಆರೋಗ್ಯ ರಕ್ಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿಎಸ್‌ಕೆಯ ಇತ್ತೀಚಿನ ಹಿನ್ನಡೆಯನ್ನು ಒಪ್ಪಿಕೊಳ್ಳುತ್ತಲೇ RCB ಸಾಧನೆಯನ್ನು ಶ್ಲಾಘಿಸಿದರು.

ಐಪಿಎಲ್ ಇತಿಹಾಸದಲ್ಲಿ ತೀವ್ರ ಪೈಪೋಟಿಗೆ ಹೆಸರಾಗಿರುವ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಡುವಿನ ಸದ್ಯದ ಪರಿಸ್ಥಿತಿಯ ಬಗ್ಗೆ ಧೋನಿ ಆಡಿದ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ವೈರಲ್ ಆಗುತ್ತಿವೆ.

ಧೋನಿ ಹೇಳಿದ್ದೇನು?

ತಮ್ಮ ಎಂದಿನ ಪ್ರಾಮಾಣಿಕ ಶೈಲಿಯಲ್ಲಿ ಮಾತನಾಡಿದ ಧೋನಿ, ಸಿಎಸ್‌ಕೆ ತಂಡದ ಇತ್ತೀಚಿನ ಕಳಪೆ ಫಾರ್ಮ್ ಅನ್ನು ಮರೆಮಾಚಲು ಪ್ರಯತ್ನಿಸಲಿಲ್ಲ.

“ಕಳೆದ ಎರಡು ವರ್ಷಗಳಿಂದ ನಾವು ಸಂಕಷ್ಟ ಎದುರಿಸುತ್ತಿದ್ದೇವೆ, ಇದು ನಿಜ. ಈ ಸತ್ಯದಿಂದ ದೂರ ಸರಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆರ್‌ಸಿಬಿ ಕಳೆದ ಕೆಲವು ವರ್ಷಗಳಿಂದ ನಿಜಕ್ಕೂ ಅದ್ಭುತವಾಗಿ ಆಡಿದೆ. ಅವರು ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ನಾವು ಅದರಲ್ಲಿ ವಿಫಲರಾಗಿದ್ದೇವೆ”.

“ಪೇಪರ್ ಮೇಲೆ ತಂಡ ಎಷ್ಟು ಬಲಿಷ್ಠವಾಗಿದೆ ಎಂಬುದು ಮುಖ್ಯವಲ್ಲ, ಆ ನಿರ್ದಿಷ್ಟ ದಿನದಂದು ನೀವು ಮೈದಾನದಲ್ಲಿ ಹೇಗೆ ಪ್ರದರ್ಶನ ನೀಡುತ್ತೀರಿ ಎಂಬುದು ಮುಖ್ಯ. ಆರ್‌ಸಿಬಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಸ್ಥಿರವಾಗಿ, ಅತ್ಯುತ್ತಮವಾಗಿ ಪ್ರದರ್ಶನ ನೀಡಿದೆ. ಈ ಸತ್ಯವನ್ನು ಒಪ್ಪಿಕೊಳ್ಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ಧೋನಿ ಪ್ರಶಂಸಿಸಿದ್ದಾರೆ.

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಳೆದ ಎರಡು ವರ್ಷಗಳು ನಿರಾಸೆ ತಂದಿವೆ. 2025ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸಿಎಸ್‌ಕೆ, 2026ರ ಆವೃತ್ತಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಫಿಟ್‌ನೆಸ್ ಸಮಸ್ಯೆಯಿಂದಾಗಿ 2026ರ ಐಪಿಎಲ್‌ನಲ್ಲಿ ಆಡದ ಧೋನಿ, ತಂಡದ ಕಷ್ಟದ ದಿನಗಳ ಬಗ್ಗೆ ಮಾತನಾಡುತ್ತಾ, “ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುವುದು ಸಹಜ. ನಾವು ಗೆಲ್ಲುತ್ತಿದ್ದಾಗ, ಎಂದೋ ಒಂದು ದಿನ ಸೋಲನ್ನು ಎದುರಿಸಬೇಕಾಗುತ್ತದೆ ಎಂಬುದು ನಮಗೆ ತಿಳಿದಿತ್ತು. ತಂಡವೊಂದರ ನಿಜವಾದ ಮನೋಬಲ ಅನಾವರಣಗೊಳ್ಳುವುದೇ ಇಂತಹ ಕಷ್ಟದ ಸಂದರ್ಭದಲ್ಲಿ” ಎಂದಿದ್ದಾರೆ.

ಧೋನಿಯ ಆಶಾವಾದ:

ಮುಂದಿನ 2027ರ ಐಪಿಎಲ್ ಆವೃತ್ತಿಯಲ್ಲಿ ಸಿಎಸ್‌ಕೆ ಬಲಿಷ್ಠವಾಗಿ ಪುನರಾಗಮನ ಮಾಡಲಿದೆ ಎಂಬ ಭರವಸೆಯನ್ನು ಧೋನಿ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ತಂಡದ ಆಟಗಾರರು ಗಾಯದ ಸಮಸ್ಯೆಯಿಂದ ಮುಕ್ತರಾಗಿ ಇಡೀ ಸರಣಿಗೆ ಲಭ್ಯವಿರಲಿ ಎಂದು ಹಾರೈಸಿದ ಅವರು, “ಮುಂದಿನ ಬಾರಿ ನಾವು ಬೆಂಗಳೂರಿಗೆ ಪಂದ್ಯ ಆಡಲು ಬಂದಾಗ ಅಭಿಮಾನಿಗಳಿಗೆ ಮತ್ತೊಂದು ರೋಮಾಂಚನಕಾರಿ ಪಂದ್ಯದ ಅನುಭವ ನೀಡುವಂತಾಗಬೇಕು” ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಧೋನಿ ಮನದಾಳ:

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ಪಿಚ್ ಬಗ್ಗೆಯೂ ಧೋನಿ ತಮಾಷೆಯಾಗಿ ಮಾತನಾಡಿದ್ದಾರೆ. “ಬೆಂಗಳೂರಿನಲ್ಲಿ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸುವುದನ್ನು ಇಷ್ಟಪಡುತ್ತಾರೆ, ಏಕೆಂದರೆ ಇಲ್ಲಿ ಮಿಸ್ ಟೈಮ್ ಆದ ಚೆಂಡು ಕೂಡ ಸಿಕ್ಸರ್ ಹೋಗುತ್ತದೆ! ಆದರೆ ಬೌಲರ್‌ಗಳಿಗೆ ಇದು ಸವಾಲಿನ ಮೈದಾನ. ಇಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವವರೇ ನಿಜವಾದ ಶ್ರೇಷ್ಠ ಬೌಲರ್ ಎನಿಸಿಕೊಳ್ಳುತ್ತಾರೆ” ಎಂದು ಪಂದ್ಯದ ರೋಮಾಂಚನವನ್ನು ನೆನೆದಿದ್ದಾರೆ.

ಇದನ್ನೂ ಓದಿ: ಬ್ಯಾಟರ್ ಅಧಿಕಾರಿ, ಬೌಲರ್ ಕಾರ್ಮಿಕ: ಕಪಿಲ್ ದೇವ್ ಕಳವಳ

ಒಟ್ಟಿನಲ್ಲಿ, ಆರ್‌ಸಿಬಿ ತಂಡದ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆಲುವಿಗೆ ‘ಕ್ಯಾಪ್ಟನ್ ಕೂಲ್’ ಧೋನಿ ನೀಡಿರುವ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಉಭಯ ತಂಡಗಳ ಅಭಿಮಾನಿಗಳ ಗಮನ ಸೆಳೆದಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ