ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು 2022 (IPL Auction 2022) ರಲ್ಲಿ, ಹರಾಜುದಾರ ಹ್ಯೂ ಎಡ್ಮಿಡ್ಸ್ (Hugh Adams) ಬಿಡ್ಡಿಂಗ್ ಸಮಯದಲ್ಲಿ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದರಿಂದ ಗೊಂದಲ ಉಂಟಾಗಿತ್ತು. ಎಡ್ಮಿಡ್ಸ್ ಶ್ರೀಲಂಕಾದ ಆಲ್‌ರೌಂಡರ್ ಹಸರಂಗ ಅವರನ್ನು ಬಿಡ್ ಮಾಡುವಾಗ ತಲೆತಿರುಗಿ ಕೆಳಕ್ಕೆ ಬಿದ್ದರು. ಹೀಗಾಗಿ ಹರಾಜನ್ನು ರದ್ದುಗೊಳಿಸಲಾಯಿತು. ಎಡ್ಮಿಡ್ಸ್ ಈಗ ಆರೋಗ್ಯವಾಗಿದ್ದರೂ, ವಾಸ್ತವವಾಗಿ ಅವರ ರಕ್ತದೊತ್ತಡ ಕಡಿಮೆಯಾಗಿದೆ. ಇದರಿಂದಾಗಿ ಎಡ್ಮಿಡ್ಸ್ ಅವರ ಹದಗೆಡುತ್ತಿರುವ ಆರೋಗ್ಯದ ದೃಷ್ಟಿಯಿಂದ IPL ಹರಾಜು 2022 ರ ಹರಾಜುದಾರರನ್ನು ಕೂಡ ಬದಲಿಸಲಾಗಿದೆ. ಈಗ ಹ್ಯೂ ಎಡ್ಮಿಡ್ಸ್ ಬದಲಿಗೆ ಚಾರು ಶರ್ಮಾ (Charu Sharma) ಹರಾಜು ನಡೆಸಲಿದ್ದಾರೆ.
ಚಾರು ಶರ್ಮಾ ಭಾರತೀಯ ಕಾಮೆಂಟೇಟರ್ ಆಗಿರುವುದರ ಜೊತೆಗೆ ಕ್ವಿಜ್ ಮಾಸ್ಟರ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ, 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಇಒ ಆಗಿದ್ದರು. ಮೊದಲ ಸೀಸನ್ನಲ್ಲಿ ವಿರಾಟ್ ಕೊಹ್ಲಿಯನ್ನೂ ತಂಡಕ್ಕೆ ಸೇರಿಸಿಕೊಂಡಿದ್ದರು. ಆದಾಗ್ಯೂ, IPL 2008 ರಲ್ಲಿ RCB ನ ಪ್ರದರ್ಶನವು ತುಂಬಾ ಕಳಪೆಯಾಗಿತ್ತು, ನಂತರ ಚಾರು ಶರ್ಮಾ ಅವರನ್ನು CEO ಹುದ್ದೆಯಿಂದ ತೆಗೆದುಹಾಕಲಾಯಿತು.
ಚಾರು ಶರ್ಮಾ ಬಗ್ಗೆ ಒಂದಿಷ್ಟು
ಆರ್ಸಿಬಿಯ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಚಾರು ಶರ್ಮಾ ಫ್ರಾಂಚೈಸಿ ವಿರುದ್ಧ ಹೇಳಿಕೆ ನೀಡಿದ್ದರು. ಚಾರು ಶರ್ಮಾ ಪ್ರಕಾರ, ಅವರು ಕಷ್ಟಪಟ್ಟು ಕೆಲಸ ಮಾಡಿದರು ಆದರೆ ತಂಡವು ಮೊದಲ ಕೆಲವು ಪಂದ್ಯಗಳಲ್ಲಿ ಸೋತ ನಂತರ RCB ತಂಡದಲ್ಲಿ ಒತ್ತಡವು ಬಹಳಷ್ಟು ಹೆಚ್ಚಾಯಿತು. ಇದರಿಂದ ತಂಡ ಹೀನಾಯ ಪ್ರದರ್ಶನ ನೀಡಿತ್ತು ಎಂದು ಹೇಳಿಕೊಂಡಿದ್ದರು.
ಚಾರು ಶರ್ಮಾ ಪ್ರೊ ಕಬಡ್ಡಿ ಲೀಗ್‌ನ ಸಂಸ್ಥಾಪಕರೂ ಹೌದು. 2014 ರಲ್ಲಿ ಅವರು 8 ತಂಡಗಳ ಈ ಲೀಗ್ ಅನ್ನು ಪ್ರಾರಂಭಿಸಿದರು. ಆದಾಗ್ಯೂ, ನಂತರ ಸ್ಟಾರ್ ಇಂಡಿಯಾ ಅವರ ಕಂಪನಿಯ ಶೇಕಡಾ 74 ರಷ್ಟು ಷೇರುಗಳನ್ನು ಖರೀದಿಸಿತು.
ಕ್ರಿಕೆಟ್ ಜೊತೆಗೆ ಕಬಡ್ಡಿ, ಗಾಲ್ಫ್‌ನಲ್ಲಿ ಚಾರು ಶರ್ಮಾ ಕಾಮೆಂಟರಿ ಮಾಡುತ್ತಾರೆ. ಅವರು ಟಿವಿಯಲ್ಲಿ ಅನೇಕ ರಸಪ್ರಶ್ನೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ. ಚಾರು ಶರ್ಮಾ ಅವರ ತಂದೆ ಎನ್‌ಸಿ ಶರ್ಮಾ ಅವರು ಪ್ರಸಿದ್ಧ ಶಿಕ್ಷಣತಜ್ಞರಾಗಿದ್ದರು. ಅವರು ಅಜ್ಮೀರ್‌ನ ಪ್ರಸಿದ್ಧ ಮೇಯೊ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಕೂಡ ಆಗಿದ್ದರು.
Published On - 3:42 pm, Sat, 12 February 22