ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ಸೆಳೆದಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ಗೆ (IPL 2022 Mega Auction) ಭರ್ಜರಿ ಚಾಲನೆ ದೊರೆತಿದೆ. ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದೆ. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಇದರಲ್ಲಿ 896 ಭಾರತೀಯ ಆಟಗಾರರಾಗಿದ್ದರೆ, 318 ವಿದೇಶಿ ಆಟಗಾರರು ಹೆಸರು ನೊಂದಾಯಿಸಿದ್ದರು. ಈ ಪಟ್ಟಿಯನ್ನು ಬಿಸಿಸಿಐ (BCCI) ಪರಿಷ್ಕರಣೆ ಮಾಡಿದ್ದು 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ, 220 ವಿದೇಶಿ ಆಟಗಾರರಾಗಿದ್ದಾರೆ.
TATA IPL 2022 ಹರಾಜಿನ ಮೊದಲ ದಿನ ಮುಗಿದಿದೆ. ಇಂದು, ಒಟ್ಟು 97 ಆಟಗಾರರನ್ನು ಬಿಡ್ ಮಾಡಲಾಗಿದ್ದು, ಇದರಲ್ಲಿ 74 ಆಟಗಾರರನ್ನು ಖರೀದಿಸಲಾಗಿದೆ, ಆದರೆ 23 ಆಟಗಾರರನ್ನು ಬಿಡ್ ಮಾಡಲಾಗಿಲ್ಲ. ಮಾರಾಟವಾದ 74 ಆಟಗಾರರಲ್ಲಿ 20 ವಿದೇಶಿ ಆಟಗಾರರು.
ತಮಿಳುನಾಡಿನ ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಹರಾಜಿನಲ್ಲಿ 3 ಕೋಟಿ ರೂ. ಪಡೆದಿದ್ದಾರೆ. ಕಳೆದ ವರ್ಷ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಸಾಯಿ ಕಿಶೋರ್‌ಗಾಗಿ ಗುಜರಾತ್ ಟೈಟಾನ್ಸ್ 3 ಕೋಟಿ ರೂ. ಖರ್ಚು ಮಾಡಿದೆ.
ಕಳೆದ ವರ್ಷದವರೆಗೆ ಎಸ್‌ಆರ್‌ಎಚ್‌ನ ಭಾಗವಾಗಿದ್ದ ಜಗದೀಶ ಸುಚಿತ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಮತ್ತೊಮ್ಮೆ SRH ಖರೀದಿಸಿದೆ.
ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಕೇವಲ 75 ಲಕ್ಷಕ್ಕೆ ಖರೀದಿಸಿದೆ. ಗೋಪಾಲ್ ಮೊದಲು ರಾಜಸ್ಥಾನದ ಭಾಗವಾಗಿದ್ದರು.
ಕೆಸಿ ಕಾರಿಯಪ್ಪ ಅವರನ್ನು ರಾಜಸ್ಥಾನ್ ರಾಯಲ್ಸ್ 30 ಲಕ್ಷಕ್ಕೆ ಖರೀದಿಸಿದೆ. ಕರಿಯಪ್ಪ ಅವರ ಮೂಲ ಬೆಲೆ 20 ಲಕ್ಷ ರೂ.
ಇದೀಗ ಅನ್ ಕ್ಯಾಪ್ಡ್ ಸ್ಪಿನ್ನರ್ ಗಳ ಸರದಿ. 17 ವರ್ಷದ ಅಫ್ಘಾನಿಸ್ತಾನದ ಸ್ಪಿನ್ನರ್ ನೂರ್ ಅಹ್ಮದ್ ಅವರು 30 ಲಕ್ಷ ಮೂಲ ಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿದ ಮೊದಲ ಹೆಸರು.
ಲಕ್ನೋ ಸೂಪರ್ ಜೈಂಟ್ಸ್ ಯುಪಿ ವೇಗಿ ಅಂಕಿತ್ ಸಿಂಗ್ ರಜಪೂತ್ ಅನ್ನು 50 ಲಕ್ಷಕ್ಕೆ ಖರೀದಿಸಿದೆ. ಅಂಕಿತ್ ಮೊದಲು ರಾಜಸ್ಥಾನ ರಾಯಲ್ಸ್‌ನ ಭಾಗವಾಗಿದ್ದರು.
ಮುಂಬೈನ ವೇಗದ ಬೌಲರ್ ತುಷಾರ್ ದೇಶಪಾಂಡೆ ಅವರನ್ನು 20 ಲಕ್ಷ ಮೂಲ ಬೆಲೆಗೆ ಸಿಎಸ್‌ಕೆ ಖರೀದಿಸಿದೆ. ತುಷಾರ್ ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಲವು ಪಂದ್ಯಗಳನ್ನು ಆಡಿದ್ದರು.
ಲಕ್ನೋ ಸೂಪರ್ ಜೈಂಟ್ಸ್ ಅವೇಶ್ ಖಾನ್ ಅವರಿಗಾಗಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಲಕ್ನೋ ತೀವ್ರ ಪೈಪೋಟಿಯ ನಂತರ 10 ಕೋಟಿಗೆ ಈ ಪ್ರತಿಭಾವಂತ ವೇಗಿಯನ್ನು ಖರೀದಿಸಿದ್ದಾರೆ. ಈ ಬೆಲೆಯೊಂದಿಗೆ ಅವೇಶ್ ಖಾನ್ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದಾರೆ.
ಕೆಎಂ ಆಸಿಫ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಬಂಗಾಳದ ವೇಗದ ಬೌಲರ್ ಆಕಾಶ್ ದೀಪ್ ಅವರನ್ನು ಆರ್‌ಸಿಬಿ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ. ಕಳೆದ ಋತುವಿನಲ್ಲೂ ಆರ್‌ಸಿಬಿ ಆಕಾಶ್ ದೀಪ್ ಅವರನ್ನು ಬದಲಿ ಆಟಗಾರನಾಗಿ ಸೇರಿಸಿಕೊಂಡಿತ್ತು.
ಭಾರತದ ಯುವ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಅವರನ್ನು SRH 4 ಕೋಟಿಗೆ ಖರೀದಿಸಿದೆ. ಕಳೆದ ಋತುವಿನ ತನಕ, ಕಾರ್ತಿಕ್ ರಾಜಸ್ಥಾನ ರಾಯಲ್ಸ್‌ನ ಭಾಗವಾಗಿದ್ದರು.
ಅನ್‌ಕ್ಯಾಪ್ಡ್ ವೇಗದ ಬೌಲರ್‌ಗಳ ಪೈಕಿ ಬೆಸಿಲ್ ಥಂಪಿ ಮೊದಲ ಸ್ಥಾನ ಪಡೆದಿದ್ದಾರೆ. ಮೂಲ ಬೆಲೆ 30 ಲಕ್ಷ. ಮುಂಬೈ ಇಂಡಿಯನ್ಸ್ ಅವರನ್ನು ಮೂಲ ಬೆಲೆಗೆ ಖರೀದಿಸಿದೆ.
ಜಿತೇಶ್ ಶರ್ಮಾ ಅವರನ್ನು ಪಂಜಾಬ್ ಕಿಂಗ್ಸ್ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿದೆ.
ಶೆಲ್ಡನ್ ಜಾಕ್ಸನ್ ಮತ್ತೊಮ್ಮೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದಾರೆ. ಭಾರತದ ಈ ಅನುಭವಿ ಆಟಗಾರನಿಗಾಗಿ ಕೆಕೆಆರ್ 60 ಲಕ್ಷ ರೂಪಾಯಿ ಖರ್ಚು ಮಾಡಿದೆ.
ವಿಕೆಟ್ ಕೀಪರ್ ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಮತ್ತೆ ಖರೀದಿಸಿದೆ. ಅವರಿಗಾಗಿ ಪಂಜಾಬ್ 60 ಲಕ್ಷ ರೂ. ಖರ್ಚು ಮಾಡಿದೆ
ದೆಹಲಿಯ ರಣಜಿ ತಂಡದ ಭಾಗವಾಗಿರುವ ವಿಕೆಟ್‌ಕೀಪರ್ ಅನುಜ್ ರಾವತ್‌ಗೆ RCB ಅತಿ ಹೆಚ್ಚು 3.4 ಕೋಟಿ ಬಿಡ್ ಮಾಡಿದೆ. ಎಸ್‌ಆರ್‌ಎಚ್ ಮತ್ತು ಗುಜರಾತ್ ಸಹ ಪ್ರಯತ್ನಿಸಿದವು, ಆದರೆ ಬೆಂಗಳೂರಿಗೆ ಬಾಜಿ ಸಿಕ್ಕಿತು.
ಭಾರತದ ಉದಯೋನ್ಮುಖ ವಿಕೆಟ್‌ಕೀಪರ್ ಕೆಎಸ್ ಭರತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಭರತ್ ಕಳೆದ ವರ್ಷ ಆರ್‌ಸಿಬಿಯ ಭಾಗವಾಗಿದ್ದರು ಮತ್ತು ಡೆಲ್ಲಿ ವಿರುದ್ಧದ ಪಂದ್ಯವನ್ನು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗೆಲ್ಲಿಸಿದ್ದರು. ದೆಹಲಿ ಭರತ ಅವರನ್ನು 2 ಕೋಟಿಗೆ ಖರೀದಿಸಿದೆ.
ಕೆಕೆಆರ್ ಮಾಜಿ ಆಲ್ ರೌಂಡರ್ ಕಮಲೇಶ್ ನಾಗರಕೋಟಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 1.1 ಕೋಟಿ ರೂ.ಗೆ ಖರೀದಿಸಿದೆ.
ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ ರಾಜಸ್ಥಾನ ರಾಯಲ್ಸ್‌ನ ಮಾಜಿ ಆಲ್‌ರೌಂಡರ್ ರಾಹುಲ್ ಟಿಯೋಟಿಯಾಗೆ ಬಂಪರ್ ಹೊಡೆದಿದೆ. CSK ಮತ್ತು ಗುಜರಾತ್ ನಡುವಿನ ತೀವ್ರ ಪೈಪೋಟಿಯ ನಂತರ, ಗುಜರಾತ್ ಟೈಟಾನ್ಸ್ ಅಂತಿಮವಾಗಿ 9 ಕೋಟಿಗೆ ತೆವಾಟಿಯಾವನ್ನು ಖರೀದಿಸಿತು.
ತಮಿಳುನಾಡಿನ ಸ್ಫೋಟಕ ಬ್ಯಾಟ್ಸ್ ಮನ್ ಶಾರುಖ್ ಖಾನ್ ಮೇಲೆ ನಿರೀಕ್ಷೆಯಂತೆಯೇ ಹಣದ ಮಳೆ ಸುರಿದಿದೆ. ಪಂಜಾಬ್ ಕಿಂಗ್ಸ್ ಪರ ಆಡಿದ ಈ ಬ್ಯಾಟ್ಸ್‌ಮನ್‌ನನ್ನು ಮತ್ತೆ ಪಂಜಾಬ್ ಸ್ವತಃ 9 ಕೋಟಿ ಬೆಲೆಗೆ ಖರೀದಿಸಿದೆ.
ಕೆಕೆಆರ್ ಪರ ಆಡುತ್ತಿರುವ ವೇಗದ ಬೌಲರ್ ಶಿವಂ ಮಾವಿ ಈ ಬಾರಿಯೂ ಕೆಕೆಆರ್ ಪರ ಆಡಲಿದ್ದಾರೆ. 40 ಲಕ್ಷದ ಮೂಲ ಬೆಲೆಯಿಂದ ಏರಿದ ಮಾವಿಯನ್ನು ಕೆಕೆಆರ್ 7.25 ಕೋಟಿಗೆ ಖರೀದಿಸಿತು.
ದೆಹಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ಮಾಜಿ ಆಟಗಾರನನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ. ಸರ್ಫರಾಜ್ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು.
6.5 ಕೋಟಿಗೆ SRH ಸೇರಿದ ಅಭಿಷೇಕ್ ಶರ್ಮಾ, ಅಭಿಷೇಕ್ ಈ ಹಿಂದೆ ಅದೇ ತಂಡದ ಭಾಗವಾಗಿದ್ದರು. ಶರ್ಮಾಗಾಗಿ ಗುಜರಾತ್ ಹಾಗೂ ಹೈದರಾಬಾದ್ ನಡುವೆ ಬಾರಿ ಪೈಪೋಟಿ ನಡೆದಿತ್ತು.
ರಾಜಸ್ಥಾನಕ್ಕೆ ಮತ್ತೆ ರಿಯಾನ್ ಪರಾಗ್ ಸೇರಿಕೊಂಡಿದ್ದಾರೆ. ಬಲವಾದ ಬಿಡ್‌ಗಳ ನಂತರ, ರಾಜಸ್ಥಾನ ಅಂತಿಮವಾಗಿ ಅವರನ್ನು 3.80 ಕೋಟಿಗೆ ಖರೀದಿಸಿದೆ. ಕಳೆದ 3 ವರ್ಷಗಳಿಂದ ರಿಯಾನ್ ರಾಜಸ್ಥಾನದ ಭಾಗವಾಗಿದ್ದಾರೆ.
ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಹೊಸ ತಂಡ ಸೇರಿದ್ದಾರೆ. ಬಲವಾದ ಬಿಡ್ ನಂತರ, SRH ಅಂತಿಮವಾಗಿ ಅವರನ್ನು 8.5 ಕೋಟಿ ಬೆಲೆಗೆ ಖರೀದಿಸಿದೆ.
ಭಾರತದ ಅನ್ ಕ್ಯಾಪ್ಡ್ ಆಟಗಾರ ಅಶ್ವಿನ್ ಹೆಬ್ಬಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿದೆ.
ದಕ್ಷಿಣ ಆಫ್ರಿಕಾದ ಅಂಡರ್-19 ಸೆನ್ಸೇಷನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಮುಂಬೈ ಇಂಡಿಯನ್ಸ್ 3 ಕೋಟಿಗೆ ಖರೀದಿಸಿದೆ. ‘ಬೇಬಿ ಎಬಿ’ ಎಂದು ಕರೆಯಲ್ಪಡುವ ಈ ಬ್ಯಾಟ್ಸ್‌ಮನ್‌ನ ಮೂಲ ಬೆಲೆ 20 ಲಕ್ಷ, ಆದರೆ CSK ಪ್ರಬಲ ಬಿಡ್ ಮಾಡಿತು ಮತ್ತು ಅಂತಿಮವಾಗಿ ಮುಂಬೈ ಗೆದ್ದಿತು.
ಮೊದಲ ಅನ್‌ಕ್ಯಾಪ್ಡ್ ಆಟಗಾರ ಕರ್ನಾಟಕದ ಅಭಿನವ್ ಸದಾರಂಗನಿ ಅವರನ್ನು ಗುಜರಾತ್ ಖರೀದಿಸಿದೆ. ಗುಜರಾತ್ 2.6 ಕೋಟಿ ಬಿಡ್ ನೀಡಿ ಖರೀದಿಸಿದೆ.
ಭಾರತದ ಮಾಜಿ ಅಂಡರ್-19 ನಾಯಕ ಮತ್ತು ಮಾಜಿ SRH ಬ್ಯಾಟ್ಸ್‌ಮನ್ ಪ್ರಿಯಮ್ ಗಾರ್ಗ್ ಹೆಸರು ಕೇಳಿಬಂದಿದೆ. ಪ್ರಿಯಾಂ ಮೂಲ ಬೆಲೆ 20 ಲಕ್ಷ. SRH ಮೂಲ ಬೆಲೆಗೆ ಅವರನ್ನು ಖರೀದಿಸಿದೆ.
ರಾಜಸ್ಥಾನ್ ರಾಯಲ್ಸ್ ಯುಜುವೇಂದ್ರ ಚಹಾಲ್ ಅವರನ್ನು ಕೇವಲ 6 ಕೋಟಿಯ ಸಣ್ಣ ಬೆಲೆಗೆ ಖರೀದಿಸಿದೆ. ಮುಂಬೈ, ದೆಹಲಿ, ಹೈದರಾಬಾದ್ ಹಿಂದಿಕ್ಕಿ ರಾಯಲ್ಸ್ ಮಾಜಿ RCB ಲೆಗ್ ಸ್ಪಿನ್ನರ್ ಅವರನ್ನು ಖರೀದಿಸಿದೆ.
ಈ ಬಾರಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಂಪಾಗೆ ಯಾವುದೇ ಬಿಡ್ ಇರಲಿಲ್ಲ. ಅವರ ಮೂಲ ಬೆಲೆ 2 ಕೋಟಿ ರೂ. ಈ ಹಿಂದೆ ಅವರು ಆರ್‌ಸಿಬಿಯ ಭಾಗವಾಗಿದ್ದರು.
ಭಾರತದ ಚೀನಾಮನ್ ಬೌಲರ್ ಕುಲದೀಪ್ ಯಾದವ್ ಅವರ ಹೊಸ ತಂಡ ಸೇರಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಈ ಪ್ರತಿಭಾವಂತ ಸ್ಪಿನ್ನರ್ ಅನ್ನು ಕೇವಲ 2 ಕೋಟಿಗೆ ಖರೀದಿಸಿದೆ. ಈ ಹಿಂದೆ ಕುಲದೀಪ್ ಕೆಕೆಆರ್ ಭಾಗವಾಗಿದ್ದರು.
ಇದು ಸ್ಪಿನ್ನರ್‌ಗಳ ಸರದಿಯಾಗಿದ್ದು ಮೊದಲ ಹೆಸರು ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಆದಿಲ್ ರಶೀದ್. ಅವರ ಮೂಲ ಬೆಲೆ 2 ಕೋಟಿ, ಆದರೆ ಅವರಿಗೆ ಯಾವುದೇ ಖರೀದಿದಾರರು ಸಿಗಲಿಲ್ಲ.
ಬಾಂಗ್ಲಾದೇಶದ ಎಡಗೈ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಈ ಮೂಲ ಬೆಲೆಗೆ ದೆಹಲಿ ಅವರನ್ನು ಖರೀದಿಸಿದೆ. ಅವರು ಮೊದಲು ರಾಜಸ್ಥಾನದ ಭಾಗವಾಗಿದ್ದರು.
ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ. ಶಾರ್ದೂಲ್ ಗಾಗಿ ದೆಹಲಿ 10.75 ಕೋಟಿ ರೂ. ಖರ್ಚು ಮಾಡಿತು. ಶಾರ್ದೂಲ್ ಮೊದಲು ಚೆನ್ನೈನ ಭಾಗವಾಗಿದ್ದರು.
ಸನ್ ರೈಸರ್ಸ್ ಹೈದರಾಬಾದ್ ತನ್ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮತ್ತೊಮ್ಮೆ ಖರೀದಿಸಿದೆ. SRH ಭುವನೇಶ್ವರ್‌ಗೆ 4 ಕೋಟಿಯಷ್ಟು ಅತಿ ಹೆಚ್ಚು ಬಿಡ್ ಮಾಡಿದೆ.
ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಮೊದಲ ಬಾರಿಗೆ ಐಪಿಎಲ್‌ನ ಭಾಗವಾಗಲಿದ್ದಾರೆ. 7.50 ಕೋಟಿಗೆ ಅವರನ್ನು ಲಕ್ನೋ ಖರೀದಿಸಿದೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಇದೀಗ ಚೆನ್ನೈನಿಂದ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರು ಹೇಜಲ್ವುಡ್ ಅವರನ್ನು 7.75 ಕೋಟಿಗೆ ಖರೀದಿಸಿದೆ.
ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದೆ. ದೆಹಲಿ, ಬೆಂಗಳೂರು ಮತ್ತು ಲಕ್ನೋವನ್ನು ಹಿಂದಿಕ್ಕಿ ಗುಜರಾತ್ ಫರ್ಗುಸನ್ ಅವರನ್ನು 10 ಕೋಟಿಯಷ್ಟು ಹೆಚ್ಚಿನ ಮೊತ್ತಕ್ಕೆ ಖರೀದಿಸಿತು.
ರಾಜಸ್ಥಾನ್ ರಾಯಲ್ಸ್ ಮತ್ತೊಬ್ಬ ಉತ್ತಮ ವೇಗದ ಬೌಲರ್‌ನನ್ನು ಖರೀದಿಸಿದೆ. ಕೆಕೆಆರ್ ಮಾಜಿ ವೇಗದ ಬೌಲರ್ ಕೃಷ್ಣ ಅವರನ್ನು ರಾಜಸ್ಥಾನ 10 ಕೋಟಿಗೆ ಖರೀದಿಸಿದೆ. ಲಖನೌ ಕೂಡ ಸಾಕಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ.
ಭಾರತದ ಹಿರಿಯ ವೇಗಿ ಉಮೇಶ್ ಯಾದವ್ ಅವರನ್ನು ಈ ಬಾರಿ ಯಾರೂ ಖರೀದಿಸಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ನ ಮಾಜಿ ವೇಗದ ಬೌಲರ್ ಮುಂದಿನ ದಿನಕ್ಕಾಗಿ ಕಾಯಬೇಕಾಗಿದೆ.
CSK ಮತ್ತೊಮ್ಮೆ ತಮ್ಮ ಪ್ರಮುಖ ವೇಗದ ಬೌಲರ್ ದೀಪಕ್ ಚಹಾರ್ ಅವರನ್ನು ಖರೀದಿಸಿದೆ. ಚಹರ್‌ಗಾಗಿ ಚೆನ್ನೈ 14 ಕೋಟಿ ರೂಪಾಯಿ ಖರ್ಚು ಮಾಡಿದೆ. ದೆಹಲಿ, ಹೈದರಾಬಾದ್ ಮತ್ತು ರಾಜಸ್ಥಾನ ಕೂಡ ದೀಪಕ್ ಅವರ ಮೇಲೆ ಬಿಡ್ ಮಾಡಿದೆ.
ಎಡಗೈ ಭಾರತೀಯ ವೇಗದ ಬೌಲರ್ ಟಿ ನಟರಾಜನ್ ಅವರು SRH ತಂಡ ಸೇರಿದ್ದಾರೆ. ಹೈದರಾಬಾದ್ ನಟರಾಜನ್ ಅವರನ್ನು 4 ಕೋಟಿಗೆ ಖರೀದಿಸಿದೆ.
ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಿಕೋಲಸ್ ಪೂರನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿದೆ. SRH ಪೂರನ್‌ಗಾಗಿ ಬಿಡ್ಡಿಂಗ್ ಅನ್ನು ಪ್ರಾರಂಭಿಸಿ ಅವರನ್ನು 10.75 ಕೋಟಿಗೆ ಖರೀದಿಸಿತು.
2 ಕೋಟಿ ಮೂಲಬೆಲೆಯ ದಿನೇಶ್ ಕಾರ್ತಿಕ್ ಅವರ ಖರೀದಿಗೆ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಇವರು 5.50 ಕೋಟಿಗೆ ಬೆಂಗಳೂರು ಪಾಲಾದರು.
1.50 ಕೋಟಿ ಮೂಲಬೆಲೆ ಹೊಂದಿರುವ ಇಂಗ್ಲೆಂಡ್ ಆಟಗಾರ ಜಾನಿ ಬೈರ್ಸ್ಟೋ 6.75 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆಯ ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ಅವರ ಖರೀದಿಗೆ ಮುಂಬೈ ಮತ್ತು ಹೈದರಾಬಾದ್ ನಡುವೆ ಭರ್ಜರಿ ಪೈಪೋಟಿ ನಡೆದವು. ಅಂತಿಮವಾಗಿ ಇವರು ದಾಖಲೆ ಎಂಬಂತೆ ಬರೋಬ್ಬರಿ 15.25 ಕೋಟಿಗೆ ಮುಂಬೈಗೆ ಸೇರಿಕೊಂಡಿದ್ದಾರೆ.
2 ಕೋಟಿ ಮೂಲಬೆಲೆಯ ಅಂಬಟಿ ರಾಯುಡು ಖರೀದಿಗೆ ಸಿಎಸ್‌ಕೆ, ಹೈದರಾಬಾದ್ ಹಾಗೂ ಡೆಲ್ಲಿ ಮುಂದೆಬಂದವು. ಅಂತಿಮವಾಗಿ ರಾಯುಡು 6.75 ಕೋಟಿಗೆ ಚೆನ್ನೈ ಪಾಲಾದರು.
2 ಕೋಟಿ ಮೂಲಬೆಲೆಯ ಮ್ಯಾಥ್ಯೂ ವೇಡ್ ಅನ್ಸೋಲ್ಡ್
1 ಕೋಟಿ ಮೂಲಬೆಲೆಯ ಅಫ್ಘಾನ್ ಆಟಗಾರ ಮೊಹಮ್ಮದ್ ನಬಿ ಅವರು ಅನ್ಸೋಲ್ಡ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಕಾಳಗದಲ್ಲಿ 2 ಕೋಟಿ ಮೂಲಬೆಲೆಯ ಮಿಚೆಲ್ ಮಾರ್ಶ್ ಕೊನೆಯದಾಗಿ 6.50 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.
ಕ್ರುನಾಲ್ ಪಾಂಡ್ಯ ಖರೀದಿಗೆ ಚೆನ್ನೈ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಸನ್ರೈಸರ್ಸ್ ಹೈದರಾಬಾದ್ ಕೂಡ ಇದರ ಸಾಲಿಗೆ ಸೇರಿತು. ಅಂತಿಮವಾಗಿ ಇವರು 8.25 ಕೋಟಿಗೆ ಲಕ್ನೋ ಪಾಲಾದರು.
ವಾಷಿಂಗ್ಟನ್ ಸುಂದರ್ ಅವರನ್ನು ಬರೋಬ್ಬರಿ 8.75 ಕೋಟಿಗೆ ಖರೀದಿ ಮಾಡಿದ ಸನ್ರೈಸರ್ಸ್ ಹೈದರಾಬಾದ್
ವನಿಂದು ಹಸರಂಗ ಖರೀದಿಗೆ ಪಟ್ಟು ಹಿಡಿದ ಆರ್ಸಿಬಿಗೆ ಕೊನೆಗೂ ಗೆಲುವು ದಕ್ಕಿತು. ಪಂಜಾಬ್ ಕಿಂಗ್ಸ್ ಜೊತೆಗಿನ ಕಾಳಗದಲ್ಲಿ ಅಂತಿಮವಾಗಿ ಹಸರಂಗ 10 ಕೋಟಿ 75 ಲಕ್ಷಕ್ಕೆ ಆರ್‌ಸಿಬಿ ಪಾಲಾಗಿದ್ದಾರೆ.
ದಿಢೀರ್ ಸ್ಥಗಿತದ ಬಳಿಕ ಇದೀಗ ಐಪಿಎಲ್ 2022 ಹರಾಜು ಪ್ರಕ್ರಿಯೆ ಮತ್ತೆ ಆರಂಭಗೊಂಡಿದೆ. ಎಡ್‌ಮೀಡ್ಸ್ ಅವರ ಬದಲು ಹರಾಜನ್ನು ಚಾರು ಶರ್ಮಾ ಅವರು ನಡೆಸಿಕೊಡುತ್ತಿದ್ದಾರೆ.
IPL ಹರಾಜು 2022 ರ ಮೊದಲ ಸುತ್ತಿನಲ್ಲಿ, ಸುರೇಶ್ ರೈನಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಇವರ ಜೊತೆಗೆ ಸ್ಟೀವ್ ಸ್ಮಿತ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಡೇವಿಡ್ ಮಿಲ್ಲರ್ ಕೂಡ ಯಾವುದೇ ಖರೀದಿದಾರರನ್ನು ಕಾಣಲಿಲ್ಲ. ಶಕೀಬ್ ಅಲ್ ಹಸನ್ ಕೂಡ ಮೊದಲ ಸುತ್ತಿನಲ್ಲಿ ಯಾವುದೇ ಖರೀದಿದಾರರ ಹೃದಯ ಗೆಲ್ಲಲು ಸಾಧ್ಯವಾಗಲಿಲ್ಲ.
Nacho, nacho, nacho, nacho…… ??@klrahul11 @QuinnyDeKock69 #TATAIPLAuction #IPLAuction #LucknowSuperGiants pic.twitter.com/AgPiNdglzK
— Lucknow Super Giants (@LucknowIPL) February 12, 2022
ಹರಾಜು ನಿರೂಪಕ ಎಡ್‌ಮೀಡ್ಸ್ ಅವರ ಆರೋಗ್ಯ ಸ್ಥಿರವಾಗಿದ್ದರೂ ಅವರಿಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಮುಂದಿನ ಹರಾಜನ್ನು ಚಾರು ಶರ್ಮಾ ಅವರು ಮುಂದುವರೆಸುತ್ತಾರೆ.
Day 1️⃣ recap till now.
Bought: @faf1307: 7️⃣ Cr@HarshalPatel23: ?.7️⃣5️⃣ Cr
Remaining purse: 3️⃣9️⃣.2️⃣5️⃣ Cr#PlayBold #WeAreChallengers #IPLMegaAuction #IPL2022 #IPLAuction
— Royal Challengers Bangalore (@RCBTweets) February 12, 2022
ಐಪಿಎಲ್ 2022 ಹರಾಜು ಪ್ರಕ್ರಿಯೆ 3:45ಕ್ಕೆ ಪುನರಾರಂಭಗೊಳ್ಳಲಿದೆ. ಸದ್ಯಕ್ಕೆ ಬೋಜನಾ ವಿರಾಮದಲ್ಲಿ ಎಲ್ಲ ಫ್ರಾಂಚೈಸಿ ಸದಸ್ಯರಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ವೇದಿಕೆ ಮೇಳೆ ಕುಸಿದುಬಿದ್ದ ಹರಾಜು ನಿರೂಪಕ ಎಡ್‌ಮೀಡ್ಸ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ಬೋಜನಾ ವಿರಾಮವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತೆಗೆದುಕೊಳ್ಳಲಾಗಿದೆ.
ಐಪಿಎಲ್ ಹರಾಜು ನಡೆಸುತ್ತಿರುವಾಗ ದಿಢೀರ್ ಆಗಿ ಹರಾಜುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬ್ರಿಟನ್‌ನ ಹ್ಯೂ ಎಡ್‌ಮೀಡ್ಸ್ ಕುಸಿದುಬಿದ್ದಿದ್ದಾರೆ. ಇವರು 2018ರಿಂದಲೂ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕಳೆದ 3 ದಶಕಗಳಲ್ಲಿ ವಿಶ್ವದೆಲೆಡೆ 2,500ಕ್ಕೂ ಅಧಿಕ ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ.
ಇತ್ತೀಚೆಗಷ್ಟೆ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ದೀಪಕ್ ಹೂಡ ಅವರನ್ನು 5.75 ಕೋಟಿ ಕೊಟ್ಟು ಲಕ್ನೋ ಫ್ರಾಂಚೈಸಿ ಖರೀದಿ ಮಾಡಿದೆ. ಇವರ ಮೂಲಬೆಲೆ 75 ಲಕ್ಷ ರೂ. ಆಗಿತ್ತು
ಹರ್ಷಲ್ ಪಟೇಲ್ ಖರೀದಿಗೆ ಆರ್‌ಸಿಬಿ ಜೊತೆ ಸನ್ರೈಸರ್ಸ್ ಹೈದರಾಬಾದ್ ಪಟ್ಟುಬಿಡದೆ ನಿಂತಿತು. ಅಂತಿಮವಾಗಿ ಬರೋಬ್ಬರಿ 10.75 ಕೋಟಿಗೆ ಇವರನ್ನು ಆರ್‌ಸಿಬಿ ಖರೀದಿಸಿದೆ.
ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಖರೀದಿಗೆ ಹೆಚ್ಚಿನ ಫ್ರಾಂಚೈಸಿ ಮುಗಿಬಿದ್ದವು. ಅಂತಿಮವಾಗಿ ಇವರನ್ನು ಬರೋಬ್ಬರಿ 8.75 ಕೋಟಿ ಕೊಟ್ಟು ಲಕ್ನೋ ತಂಡ ಖರೀದಿ ಮಾಡಿದೆ.
1 ಕೋಟಿ ಮೂಲಬೆಲೆಯ ನಿತೀಶ್ ರಾಣ ಖರೀದಿಸಲು ಆರಂಭದಲ್ಲಿ ಕೆಕೆಆರ್, ಆರ್‌ಸಿಬಿ, ಲಕ್ನೊ ಮತ್ತು ಮುಂಬೈ ಮುಂದೆ ಬಂದವು. ಕೊನೆಯದಾಗಿ ರಾಣರನ್ನು ಬರೋಬ್ಬರಿ 8 ಕೋಟಿಗೆ ಕೆಕೆಆರ್ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಕೆರಿಬಿಯನ್ ಆಲ್ರೌಂಡರ್ ಡ್ವೇನ್ ಬ್ರಾವೋ ಅವರನ್ನು ಖರೀದಿಸಲು ಹೈದರಾಬಾದ್ ಮತ್ತು ಚೆನ್ನೈ ಕಾಳಗ ನಡೆಸಿದವು. ಅಂತಿಮವಾಗಿ ಇವರನ್ನು 4.40 ಕೋಟಿಗೆ ಸಿಎಸ್‌ಕೆ ಖರೀದಿ ಮಾಡಿದೆ.
ಆಸೀಸ್ ಬ್ಯಾಟರ್ ಸ್ಟೀವ್ ಸ್ಮಿತ್ ಕೂಡ ಸೇಲ್ ಆಗದೆ ಹೋಗಿದ್ದಾರೆ.
ಅಚ್ಚರಿ ಎಂಬಂತೆ ಸುರೇಶ್ ರೈನಾ ಅನ್ಸೋಲ್ಡ್ ಆಗಿದ್ದಾರೆ.
ದೇವದತ್ ಪಡಿಕ್ಕಲ್ ಖರೀದಿಸಲು ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಮುಂದೆ ಬಂದವು. ಅಂತಿಮವಾಗಿ ಇವರನ್ನು ರಾಜಸ್ಥಾನ್ ಬರೋಬ್ಬರಿ 7.75 ಕೋಟಿ ಕೊಟ್ಟು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
1 ಕೋಟಿ ಮೂಲ ಬೆಲೆಯ ಡೇವಿಡ್ ಮಿಲ್ಲರ್ ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ಮೂಲಬೆಲೆಯ ಜೇಸನ್ ರಾಯ್ ಅವರನ್ನು ಗುಜರಾತ್ ಟೈಟನ್ಸ್ ಅದೇ ಮೊತ್ತಕ್ಕೆ ಪಡೆದುಕೊಂಡಿದಎ.
ಚೆನ್ನೈ ಸೂಪರ್ ಕಿಂಗ್ಸ್ ರಾಬಿನ್ ಉತ್ತಪ್ಪ ಅವರನ್ನು 2 ಕೋಟಿಗೆ ಖರೀದಿ ಮಾಡಿದೆ.
ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮೇರ್ ಅವರು ಬರೋಬ್ಬರಿ 8.5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
1 ಕೋಟಿ ಮೂಲಬೆಲೆ ಹೊಂದಿರುವ ಮನೀಶ್ ಪಾಂಡೆ 4.6 ಕೋಟಿಗೆ ಲಕ್ನೋ ಫ್ರಾಂಚೈಸಿ ಪಾಲಾಗಿದ್ದಾರೆ.
ಡುಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸುವಲ್ಲಿ ಯಶಸ್ವಿಯಾಯಿತು. 7 ಕೋಟಿಗೆ ಬಿಡ್ ಮಾಡುವ ಮೂಲಕ ಆರ್‌ಸಿಬಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಫಾಫ್ ಡು ಪ್ಲೆಸಿಸ್ ಅವರ ಐಪಿಎಲ್ ವೃತ್ತಿಜೀವನ ಅದ್ಭುತವಾಗಿದೆ. ಅವರು ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಫೀಲ್ಡರ್ ಮತ್ತು ಉತ್ತಮ ನಾಯಕರೂ ಆಗಿದ್ದಾರೆ. ಅವರು ಐಪಿಎಲ್‌ನಲ್ಲಿ ದೀರ್ಘಕಾಲದವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಭಾಗವಾಗಿದ್ದರು
ಡೇವಿಡ್ ವಾರ್ನರ್ ಅವರ 6.25 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿರುವ ಡೇವಿಡ್ ವಾರ್ನರ್ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಮುಂದೆ ಬಂದಿದೆ.
2 ಕೋಟಿ ಮೂಲಬೆಲೆ ಹೊಂದಿರುವ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ರನ್ನು 6.75 ಕೋಟಿಗೆ ಖರೀದಿಸಿದ ಲಕ್ನೋ
ಫಾಫ್ ಡುಪ್ಲೆಸಿಸ್ ಅಂತಿಮವಾಗಿ ಬರೋಬ್ಬರಿ 7 ಕೋಟಿಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಇವರನ್ನು ಖರೀದಿಸಲು ಚೆನ್ನೈ, ಡೆಲ್ಲಿ ತಂಡ ಭಾರೀ ಪೈಪೋಟಿ ನಡೆಸಿದವು.
2 ಕೋಟಿ ಮೂಲಬೆಲೆ ಹೊಂದಿರುವ ಫಾಫ್ ಡುಪ್ಲೆಸಿಸ್ ಖರೀದಿಸಲು ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಭರ್ಜರಿ ಬಿಡ್ ನಡೆಯುತ್ತಿದೆ.
2 ಕೋಟಿ ಮೂಲಬೆಲೆ ಹೊಂದಿರುವ ಮೊಹಮ್ಮದ್ ಶಮಿ ಅವರನ್ನು ಖರೀದಿಸಲು ಆರ್‌ಸಿಬಿ ಹಾಗೂ ಪಂಜಾಬ್ ಪೈಪೋಟಿ ನಡೆಸಿದವು. ಇವರ ಮಧ್ಯ ಪ್ರವೇಶಿಸಿದ ಗುಜರಾತ್ ಅಂತಿಮವಾಗಿ ಇವರು 6.25 ಕೋಟಿಗೆ ಖರೀದಿಸಿದೆ.
ಭರ್ಜರಿ ಬೇಡಿಕೆ ಸೃಷ್ಟಿಸಿದ್ದ ಶ್ರೇಯಸ್ ಅಯ್ಯರ್ ಅಂತಿಮವಾಗಿ ಬರೋಬ್ಬರಿ 12.25 ಕೋಟಿಗೆ ಕೆಕೆಆರ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿರುವ ಶ್ರೇಯಸ್ ಅಯ್ಯರ್ ಖರೀದಿಗೆ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ.
ನ್ಯೂಜಿಲೆಂಡ್ ತಂಡದ ಘಾತಕ ವೇಗಿ ಟ್ರೆಂಟ್ ಬೌಲ್ಟ್ ಅವರು 8 ಕೋಟಿಗೆ ರಾಜಸ್ಥಾನ್ ರಾಯಲ್ಸ್ಗೆ ಹರಾಜಾಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿರುವ ಟ್ರೆಂಟ್ ಬೌಲ್ಟ್ ಮೇಲೆ ಆರ್‌ಸಿಬಿ ಕಣ್ಣಿಟ್ಟಿದ್ದು ಖರೀದಿಗೆ ಹಣದ ಮಳೆ ಸುರಿಸುತ್ತಿದೆ.
ಆಫ್ರಿಕಾ ಮಾರಕ ವೇಗಿ ಕಗಿಸೊ ರಬಾಡ ದಾಖಲೆ ಮೊತ್ತಕ್ಕೆ ಸೇಲ್ ಅಗಿದ್ದಾರೆ. ಇವರನ್ನು 9.25 ಕೋಟಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿ ಮಾಡಿದೆ.
2 ಕೋಟಿ ಮೂಲಬೆಲೆ ಹೊಂದಿರುವ ಆಫ್ರಿಕಾ ವೇಗಿ ಕಗಿಸೋ ರಬಾಡಗೆ ಭರ್ಜರಿ ಬೇಡಿಕೆ ಇದೆ.
7.25 ಕೋಟಿಗೆ ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾದ ಪ್ಯಾಟ್ ಕಮಿನ್ಸ್.
2 ಕೋಟಿ ಮೂಲಬೆಲೆ ಹೊಂದಿರುವ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ಗೂ ಬೇಡಿಕೆ ಭರ್ಜರಿ ಇದ್ದು, ಸಿಎಸ್‌ಕೆ ಖರೀದಿಸಲು ಎದುರು ನೋಡುತ್ತಿದೆ.
ಆರ್. ಅಶ್ವಿನ್ ಅಂತಿಮವಾಗಿ 5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿರುವ ಆರ್. ಅಶ್ವಿನ್ ಖರೀದಿಗೆ ಎಲ್ಲ ಫ್ರಾಂಚೈಸಿ ಮುಗಿ ಬೀಳುತ್ತಿದೆ. ಪ್ರಮುಖವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
8.25 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಶಿಖರ್ ಧವನ್. ಪಂಜಾಬ್ ಮತ್ತು ಡೆಲ್ಲಿ ನಡುವೆ ಧವನ್ ಖರೀದಿಗೆ ಸಾಕಷ್ಟು ಪೈಪೋಟಿ ನಡೆದವು. ಅಂತಿಮವಾಗಿ ಪಂಜಾಬ್ ಧವನ್ರನ್ನು ಖರೀದಿ ಮಾಡಿದೆ.
ಶಿಖರ್ ಧವನ್ಗೆ ಹರಾಜಿನಲ್ಲಿ ಭರ್ಜರಿ ಬೇಡಿಕೆ.
4 ಕೋಟಿ ದಾಟಿದ ಧವನ್ ಮೊತ್ತ.
ಐಪಿಎಲ್ 2022 ಹರಾಜಿನಲ್ಲಿ ಮೊದಲ ಆಟಗಾರ ಶಿಖರ್ ಧವನ್. ಇವರ ಬೇಸ್ಪ್ರೈಸ್ 2 ಕೋಟಿ.
ಐಪಿಎಲ್ ಭಾರತಕ್ಕೆ ಕಮ್ಬ್ಯಾಕ್ ಮಾಡಿರುವುದು ಖುಷಿ ನೀಡಿದೆ. ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲೇಬೇಕು. ಸಂಕಷ್ಟದಲ್ಲಿ ಸಮಯದಲ್ಲಿ ಸಹಕರಿಸಿದ ಆಟಗಾರರಿಗೆ ಧನ್ಯವಾದ – ಬ್ರಿಜೇಶ್ ಪಾಟೇಲ್
ಎಲ್ಲರನ್ನೂ ಸ್ವಾಗತಿಸುತ್ತಿರುವ ಬ್ರಿಜೆಶ್ ಪಾಟೀಲ್. ಎರಡು ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹ್ಮದಾಬಾದ್ ತಂಡಕ್ಕೆ ಶುಭಖೋರಿದರು ಪಾಟೀಲ್. ಹರಾಜಿನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಹಾಜರಿದ್ದಾರೆ.
Published On - 10:13 am, Sat, 12 February 22