AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಮೊದಲ ದಿನದ ಮೆಗಾ ಹರಾಜಿನಲ್ಲಿ ಎಷ್ಟು ಆಟಗಾರರನ್ನು ಹರಾಜು ಹಾಕಲಾಗುತ್ತದೆ ಗೊತ್ತಾ?

IPL 2022 Auction: ಇಂದು (ಶನಿವಾರ) ಕೇವಲ 161 ಕ್ರಿಕೆಟಿಗರ ಹರಾಜು ನಡೆಯಲಿದೆ. ಉಳಿದ 439 ಆಟಗಾರರ ಹರಾಜು ಭಾನುವಾರ ನಡೆಯಲಿದೆ. ಆದಾಗ್ಯೂ ಮೊದಲ ದಿನದ ನಂತರ 10 ಫ್ರಾಂಚೈಸಿಗಳಲ್ಲಿ ಎಷ್ಟು ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟೀಕರಣ ಸಿಗುತ್ತದೆ.

IPL 2022 Auction: ಮೊದಲ ದಿನದ ಮೆಗಾ ಹರಾಜಿನಲ್ಲಿ ಎಷ್ಟು ಆಟಗಾರರನ್ನು ಹರಾಜು ಹಾಕಲಾಗುತ್ತದೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 12, 2022 | 11:36 AM

Share

ಐಪಿಎಲ್ ಮೆಗಾ ಹರಾಜಿಗೆ (IPL 2022 Auction) ವೇದಿಕೆ ಸಿದ್ಧವಾಗಿದೆ . ಬಹು ನಿರೀಕ್ಷಿತ ಇಂಡಿಯನ್ ರಿಚ್ ಲೀಗ್ ಐಪಿಎಲ್ ಹರಾಜಿಗೆ ಆಟಗಾರರ ಜೊತೆಗೆ ಎಲ್ಲಾ ತಂಡಗಳು ಸಿದ್ಧವಾಗಿವೆ. ಯಾವ ಆಟಗಾರ ಯಾವ ತಂಡ ಸೇರುತ್ತಾನೆ, ಪ್ರತಿಯೊಬ್ಬ ಆಟಗಾರನಿಗೆ ಎಷ್ಟು ಹಣ ಸಿಗುತ್ತದೆ ಮತ್ತು ಯಾರಿಗೆ ಅದೃಷ್ಟ ಕೈಕೊಡಲಿದೆ ಎಂಬುದು ಸ್ವಲ್ಪ ಹೊತ್ತಿನಲ್ಲಿ ಸ್ಪಷ್ಟವಾಗಲಿದೆ. ನಾಲ್ಕು ವರ್ಷಗಳ ಅಂತರದ ನಂತರ ಬೆಂಗಳೂರು ಈ ಅದ್ಧೂರಿ ಮೆಗಾ ಹರಾಜಿಗೆ ಸಿದ್ಧವಾಗಿದೆ. ಮೊದಲ ದಿನ ಹರಾಜಿನಲ್ಲಿ ಎಷ್ಟು ಆಟಗಾರರನ್ನು ಹರಾಜು ಹಾಕಲಾಗುತ್ತದೆ?. ಹರಾಜಿನ ಎರಡನೇ ದಿನದ ಬದಲಾವಣೆಗಳೇನು ಎಂಬುದನ್ನು ಸ್ವಲ್ಪ ನೋಡೋಣ.

ಹರಾಜು ನಡೆಯುವ ಸ್ಥಳ: ಬೆಂಗಳೂರು ದಿನಾಂಕ: ಫೆಬ್ರವರಿ 12, 13

ಒಟ್ಟು ತಂಡಗಳು: ಐಪಿಎಲ್ 8 ತಂಡಗಳ ಜೊತೆಗೆ ಈ ವರ್ಷ ಇನ್ನೇರೆಡು ತಂಡಗಳು ಸೇರಿಕೊಂಡಿದ್ದು ಒಟ್ಟು 10 ತಂಡಗಳು ಬಿಡ್ ಮಾಡಲು ಸಿದ್ಧವಾಗಿವೆ.

ಹರಾಜಿನಲ್ಲಿ ಗರಿಷ್ಠ 227 ಆಟಗಾರರನ್ನು ಆಯ್ಕೆಮಾಡಲಾಗುತ್ತದೆ

ಪ್ರತಿ ತಂಡವು ಕನಿಷ್ಠ 18 ಮತ್ತು ಗರಿಷ್ಠ 25 ಜನರನ್ನು ಆಯ್ಕೆ ಮಾಡುಬಹುದಾಗಿದೆ. (ಇದರಲ್ಲಿ 8 ವಿದೇಶಿಯರಿರಬೇಕು)

ಪ್ರತಿ ತಂಡ ಎಷ್ಟು ಖರ್ಚು ಮಾಡಬೇಕು: ಗರಿಷ್ಠ ರೂ. 90 ಕೋಟಿವರೆಗೆ ಖರ್ಚು ಮಾಡಲು ಅವಕಾಶ ಇದೆ. ಕನಿಷ್ಠ ರೂ. 67.5 ಕೋಟಿ ಬಳಸಬೇಕಾಗುತ್ತದೆ.

ಮೊದಲ ದಿನ, ಫೆಬ್ರವರಿ 12: ಇಂದು (ಶನಿವಾರ) ಕೇವಲ 161 ಕ್ರಿಕೆಟಿಗರ ಹರಾಜು ನಡೆಯಲಿದೆ. ಉಳಿದ 439 ಆಟಗಾರರ ಹರಾಜು ಭಾನುವಾರ ನಡೆಯಲಿದೆ. ಆದಾಗ್ಯೂ ಮೊದಲ ದಿನದ ನಂತರ 10 ಫ್ರಾಂಚೈಸಿಗಳಲ್ಲಿ ಎಷ್ಟು ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟೀಕರಣ ಸಿಗುತ್ತದೆ. ಇದರ ನಂತರ, ಎರಡನೇ ದಿನ, 439 ಆಟಗಾರರ ಪೈಕಿ ಎಷ್ಟು ಆಟಗಾರರು ಹರಾಜಿಗೆ ಬರುತ್ತಾರೆ ಎಂಬುದನ್ನು ನಿರ್ಧರಿಸಲು ಎಲ್ಲಾ ತಂಡಗಳು ಬಿಸಿಸಿಐಗೆ ಕೇಳುತ್ತವೆ. ಫ್ರಾಂಚೈಸಿಗಳ ಕೋರಿಕೆಯ ಮೇರೆಗೆ ಮಾತ್ರ ಅವರುಗಳನ್ನು ಹರಾಜು ಮಾಡಲಾಗುತ್ತದೆ.

ಇದನ್ನೂ ಓದಿ:IND vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಚುಟುಕು ಸಮರದಿಂದ ರಾಹುಲ್, ಅಕ್ಷರ್ ಔಟ್!