ಒಂದೇ ಹೆಸರಿನ ಇಬ್ಬರು ಆಟಗಾರರು; ಆತುರಪಟ್ಟು ಪೇಚಿಗೆ ಸಿಲುಕಿದ ಪಂಜಾಬ್! ವಿಡಿಯೋ ನೋಡಿ

IPL Auction 2024: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಆತುರ ನಿರ್ಧಾರದಿಂದಾಗಿ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ತಾನು ಖರೀದಿಸಲು ಬಯಸಿದ್ದ ಆಟಗಾರನನ್ನು ಬಿಟ್ಟು, ತಮ್ಮ ಯೋಜನೆಯಲ್ಲಿಲ್ಲದ ಬೇರೊಬ್ಬ ಆಟಗಾರನಿಗೆ ಸುಮ್ಮನೆ 20 ಲಕ್ಷ ರೂಗಳನ್ನು ನೀಡಬೇಕಾಯಿತು.

ಒಂದೇ ಹೆಸರಿನ ಇಬ್ಬರು ಆಟಗಾರರು; ಆತುರಪಟ್ಟು ಪೇಚಿಗೆ ಸಿಲುಕಿದ ಪಂಜಾಬ್! ವಿಡಿಯೋ ನೋಡಿ
ಪಂಜಾಬ್ ಕಿಂಗ್ಸ್
Follow us
ಪೃಥ್ವಿಶಂಕರ
|

Updated on:Dec 20, 2023 | 6:36 PM

ಈ ಬಾರಿಯ ಮಿನಿ ಐಪಿಎಲ್ ಹರಾಜು (IPL Auction 2024) ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಐಪಿಎಲ್ ಇತಿಹಾಸದಲ್ಲೇ ಇಬ್ಬರು ಆಟಗಾರರು 20 ಕೋಟಿಗೂ ಅಧಿಕ ಮೊತ್ತ ಪಡೆದರು. ಇನ್ನು ಕೆಲವು ಆಟಗಾರರಿಗೆ ನಿರೀಕ್ಷಿತ ಬೆಲೆ ಸಿಗದಾದರೆ, ದೇಶಿ ಪ್ರತಿಭೆಗಳಿಗೆ ಭಾಗ್ಯದ ಬಾಗಿಲು ತೆರೆಯಿತು. ಹಲವು ಯುವ ಪ್ರತಿಭೆಗಳು ನಿರೀಕ್ಷೆಗೂ ಮೀರಿದ ಬಿಡ್ ಪಡೆದರು. ಈ ಮೂಲಕ ಒಂದೇ ರಾತ್ರಿಯಲ್ಲಿ ಕೋಟಿ ಒಡೆಯಾದರು. ಆದರೆ ಈ ನಡುವೆ ಪಂಜಾಬ್ ಕಿಂಗ್ಸ್ (Punjab Kings) ಫ್ರಾಂಚೈಸಿ ತನ್ನ ಆತುರದ ನಿರ್ಧಾರದಿಂದಾಗಿ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ತಾನು ಖರೀದಿಸಲು ಬಯಸಿದ್ದ ಆಟಗಾರನನ್ನು ಬಿಟ್ಟು, ತಮ್ಮ ಯೋಜನೆಯಲ್ಲಿಲ್ಲದ ಬೇರೊಬ್ಬ ಆಟಗಾರನಿಗೆ ಸುಮ್ಮನೆ 20 ಲಕ್ಷ ರೂಗಳನ್ನು ನೀಡಬೇಕಾಯಿತು.

ಖರೀದಿಸಿಲು ಬಯಸಿದ್ದ ಆಟಗಾರನೇ ಬೇರೆ

ವಾಸ್ತವವಾಗಿ ಮಿನಿ ಹರಾಜಿನ ಕೊನೆ ಹಂತದಲ್ಲಿ ದೇಶಿ ಕ್ರಿಕೆಟಿಗರ ಸೆಟ್​ ಹರಾಜಿಗೆ ಬಂದಿತ್ತು. ಈ ವೇಳೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಅವರು ಛತ್ತೀಸ್‌ಗಢ ಪರ ಆಡುತ್ತಿರುವ 32 ವರ್ಷದ ಶಶಾಂಕ್ ಸಿಂಗ್ ಅವರ ಹೆಸರನ್ನು ಹರಾಜಿನಲ್ಲಿ ತೆಗೆದುಕೊಂಡರು. ಪಂಜಾಬ್ ಕಿಂಗ್ಸ್ ಮೊದಲು ಶಶಾಂಕ್ ಸಿಂಗ್ ಅವರನ್ನು ಬಿಡ್ ಮಾಡಿತು. ವಿಶೇಷವೆಂದರೆ ಪಂಜಾಬ್ ಕಿಂಗ್ಸ್ ತಂಡವೇ ಶಶಾಂಕ್ ಅವರನ್ನು ಬಿಡ್ ಮಾಡಿ 20 ಲಕ್ಷ ಮೂಲ ಬೆಲೆಗೆ ಖರೀದಿಸಿತು. ಆದರೆ ಪಂಜಾಬ್ ಕಿಂಗ್ಸ್ ಖರೀದಿಸಿಲು ಬಯಸಿದ್ದ ಆಟಗಾರನೇ ಬೇರೆ. ಹರಾಜಿನಲ್ಲಿ ಖರೀದಿಯಾದ ಆಟಗಾರನೇ ಬೇರೆಯಾಗಿದ್ದ.

ಬಳಿಕ ಪಂಜಾಬ್ ಕಿಂಗ್ಸ್​ಗೆ ತನ್ನ ತಪ್ಪು ತಡವಾಗಿ ಅರಿವಿಗೆ ಬಂತು. ಕೂಡಲೇ ಹರಾಜನ್ನು ನಿಲ್ಲಿಸಿದ ಫ್ರಾಂಚೈಸಿ, ಬಿಡ್ ಮಾಡುವ ವೇಳೆ ಆದ ಎಡವಟ್ಟಿನ ಬಗ್ಗೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಅವರಿಗೆ ಮನವರಿಗೆ ಮಾಡಲು ಪ್ರಯತ್ನಿಸಿತು. ಆದರೆ ನಿಯಮಗಳ ಪ್ರಕಾರ, ಆಟಗಾರನನ್ನು ಒಮ್ಮೆ ಖರೀದಿಸಿದರೆ, ನಿರ್ಧಾರವನ್ನು ಬದಲಾಯಿಸಲಾಗುವುದಿಲ್ಲ ಎಂಬುದನ್ನು ಮಲ್ಲಿಕಾ ಸಾಗರ್ ಫ್ರಾಂಚೈಸಿಗೆ ತಿಳಿಸಿದರು. ಇದರಿಂದಾಗಿ ಪಂಜಾಬ್ ಬಯಸದಿದ್ದರೂ ಈ ಆಟಗಾರನನ್ನು ಖರೀದಿಸಬೇಕಾಯಿತು.

ಇಬ್ಬರು ಆಟಗಾರರ ಹೆಸರುಗಳು ಒಂದೇ

ವಾಸ್ತವವಾಗಿ 19 ವರ್ಷದ ಶಶಾಂಕ್ ಸಿಂಗ್ ಅವರನ್ನು ಖರೀದಿಸುವುದು ಫ್ರಾಂಚೈಸಿಯ ಉದ್ದೇಶವಾಗಿತ್ತು. ಈ ಗೊಂದಲಕ್ಕೆ ಕಾರಣವಾಗಿದ್ದು, ಇಬ್ಬರು ಆಟಗಾರರ ಹೆಸರುಗಳು ಒಂದೇ ಆಗಿದ್ದಲ್ಲದೆ, ಈ ಇಬ್ಬರ ಮೂಲ ಬೆಲೆ ಕೂಡ ಒಂದೇ ಆಗಿತ್ತು. ಹೀಗಾಗಿ 19 ವರ್ಷದ ಶಶಾಂಕ್ ಸಿಂಗ್ ಅವರನ್ನು ಖರೀದಿಸುವ ಇರಾದೆಯಲ್ಲಿದ್ದ ಪಂಜಾಬ್, ತಮ್ಮ ಯೋಜನೆಯಲ್ಲೇ ಇಲ್ಲದ 32 ವರ್ಷದ ಛತ್ತೀಸ್‌ಗಢ ಪರ ಆಡುತ್ತಿರುವ ಶಶಾಂಕ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾಯಿತು.

ಯಾರು ಈ ಶಶಾಂಕ್ ಸಿಂಗ್?

ಛತ್ತೀಸ್‌ಗಢದ 32 ವರ್ಷದ ಆಟಗಾರ ಶಶಾಂಕ್ ಸಿಂಗ್ ಒಬ್ಬ ಆಲ್ ರೌಂಡರ್. ಅವರು ಐಪಿಎಲ್‌ನಲ್ಲಿ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ. 2023ರ ಹರಾಜಿಗೂ ಮುನ್ನ ಅವರನ್ನು ಸನ್‌ರೈಸರ್ಸ್‌ ತಂಡ ಬಿಡುಗಡೆ ಮಾಡಿತ್ತು. ಆ ಬಳಿಕ 2023ರಲ್ಲಿ ನಡೆದಿದ್ದ ಹರಾಜಿನಲ್ಲಿ ಯಾವ ತಂಡವೂ ಅವರನ್ನು ಖರೀದಿಸಿರಲಿಲ್ಲ. ಇದೀಗ ಮತ್ತೊಮ್ಮೆ ಹರಾಜಿಗೆ ಹೆಸರನ್ನು ನೋಂದಾಯಿಸಿಕೊಂಡಿದ್ದ ಶಶಾಂಕ್, ಹರಾಜಿನ ವೇಳೆ ಪಂಜಾಬ್ ಮಾಡಿಕೊಂಡ ಎಡವಟ್ಟಿನಿಂದ ಖರೀದಿದಾರರನ್ನು ಪಡೆದುಕೊಂಡಿದ್ದಾರೆ. ಶಶಾಂಕ್ ಸಿಂಗ್ ಇದುವರೆಗೆ 10 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ ಕೇವಲ 69 ರನ್ ಬಾರಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ

ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್(ನಾಯಕ), ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಅಥರ್ವ ಟೇಡೆ, ಅರ್ಷದೀಪ್ ಸಿಂಗ್, ರಿಷಿ ಧವನ್, ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್ , ಹರಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ಪ್ರಿನ್ಸ್ ಚೌಧರಿ, ತನಯ್ ತ್ಯಾಗರಾಜನ್, ರಿಲೆ ರೋಸ್ಸೌ, ಶಶಾಂಕ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 20 December 23

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?