CSK ಗೆ ರೋಹಿತ್ ಶರ್ಮಾ…? ಕೊನೆಗೂ ಮೌನ ಮುರಿದ ಸಿಇಒ

IPL 2024 Rohit Sharma: ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಕೂಡ ಮುನ್ನಲೆಗೆ ಬಂದಿದ್ದವು. ಧೋನಿಯ ಉತ್ತರಾಧಿಕಾರಿಯಾಗಿ ಹಿಟ್​ಮ್ಯಾನ್ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

TV9 Web
| Updated By: ಝಾಹಿರ್ ಯೂಸುಫ್

Updated on: Dec 20, 2023 | 3:23 PM

ಈ ಬಾರಿಯ ಐಪಿಎಲ್​ನಲ್ಲಿ (IPL 2024) ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ ಪಾಂಡ್ಯಗೆ ಕಪ್ತಾನನ ಪಟ್ಟ ನೀಡಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

1 / 7
ಅದರಲ್ಲೂ ಟ್ರೇಡ್ ವಿಂಡೋ ಮೂಲಕ ಹಿಟ್​ಮ್ಯಾನ್​ನನ್ನು ಖರೀದಿಸಲು ಗುಜರಾತ್ ಟೈಟಾನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಯತ್ನಿಸಿತ್ತು. ಆದರೆ ಮುಂಬೈ ಇಂಡಿಯನ್ಸ್​ ಜೊತೆ ಡೀಲ್ ಕುದುರಿಸಿಕೊಳ್ಳಲು ಎರಡು ಫ್ರಾಂಚೈಸಿಗಳು ವಿಫಲವಾಗಿದೆ.

2 / 7
ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಕೂಡ ಮುನ್ನಲೆಗೆ ಬಂದಿದ್ದವು. ಧೋನಿಯ ಉತ್ತರಾಧಿಕಾರಿಯಾಗಿ ಹಿಟ್​ಮ್ಯಾನ್ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

3 / 7
ಇದೀಗ ಈ ಸುದ್ದಿಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಮೌನ ಮುರಿದಿದ್ದಾರೆ. ರೋಹಿತ್ ಶರ್ಮಾಗಾಗಿ ಮುಂಬೈ ಇಂಡಿಯನ್ಸ್ ಮುಂದೆ ಸಿಎಸ್​ಕೆ ಫ್ರಾಂಚೈಸಿ ಯಾವುದೇ ಪ್ರಸ್ತಾಪವನ್ನಿಟ್ಟಿಲ್ಲ. ಈ ಬಗ್ಗೆ ಯಾವುದೇ ಚರ್ಚೆಯನ್ನೂ ಕೂಡ ನಡೆಸಿಲ್ಲ. ಇವೆಲ್ಲವೂ ಕೇವಲ ವದಂತಿ ಎಂದಿದ್ದಾರೆ.

4 / 7
ಸಿಎಸ್​ಕೆ ಫ್ರಾಂಚೈಸಿಯು ಯಾವುದೇ ಆಟಗಾರನಿಗಾಗಿ ಟ್ರೇಡ್ ಮಾಡಲು ಬಯಸುತ್ತಿಲ್ಲ. ಮುಂಬೈ ಇಂಡಿಯನ್ಸ್​ ಜೊತೆ ಟ್ರೇಡಿಂಗ್ ನಡೆಸುವಂತಹ ಆಟಗಾರರು ಕೂಡ ನಮ್ಮಲ್ಲಿ ಇಲ್ಲ. ಹೀಗಾಗಿ ರೋಹಿತ್ ಶರ್ಮಾ ಸಿಎಸ್​ಕೆಗೆ ಬರಲಿದ್ದಾರೆ ಎಂಬುದು ಕೇವಲ ಗಾಳಿ ಸುದ್ದಿಗಳಷ್ಟೇ ಎಂದು ಕಾಸಿ ವಿಶ್ವನಾಥನ್ ಹೇಳಿದ್ದಾರೆ.

5 / 7
ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್​ ರೋಹಿತ್ ಶರ್ಮಾಗಾಗಿ ಟ್ರೇಡ್ ಮಾಡಲು ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಇದಾಗ್ಯೂ ಈಗಾಗಲೇ ಟ್ರೇಡ್ ಮಾಡಲು ಯತ್ನಿಸಿರುವ​ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಗುಜರಾತ್ ಟೈಟಾನ್ಸ್​ ಫ್ರಾಂಚೈಸಿಗಳು ಮುಂದಿನ 29 ದಿನಗಳ ಒಳಗೆ ರೋಹಿತ್ ಶರ್ಮಾ ಅವರನ್ನು ಖರೀದಿಸಲಿದೆಯಾ ಕಾದು ನೋಡಬೇಕಿದೆ.

6 / 7
ಚೆನ್ನೈ ಸೂಪರ್ ಕಿಂಗ್ಸ್ ತಂಡ​​: ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಷೀದ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಝ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್, ರಚಿನ್ ರವೀಂದ್ರ.

7 / 7
Follow us