
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ. ಐಪಿಎಲ್ 2025 (IPL 2025) ರ ಮಧ್ಯೆ ಬಿಸಿಸಿಐಗೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಕಳುಹಿಸಲಾಗಿದೆ. ದೆಹಲಿ ಕೋರ್ಟ್ ಬಿಸಿಸಿಐ ಮೇಲೆ ಈ ರೀತಿಯ ಕ್ರಮ ಜರುಗಿಸಲು ಕಾರಣ ಏನು ಎಂಬುದನ್ನು ನೋಡುವುದಾದರೆ.. ಅದಕ್ಕೆ ಉತ್ತರ ಇತ್ತೀಚೆಗಷ್ಟೇ ಬಿಸಿಸಿಐ, ಐಪಿಎಲ್‌ನಲ್ಲಿ ಪರಿಚಯಿಸಿದ್ದ ರೋಬೋ ಶ್ವಾನ (Robot Dog). ಈ ರೋಬೋ ಶ್ವಾನವನ್ನು ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುತ್ತದೆ. ಅಲ್ಲದೆ ಈ ಶ್ವಾನ ಅಭ್ಯಾಸದ ಸಮಯದಲ್ಲಿ ಆಟಗಾರರನ್ನು ಸಹ ಕವರ್ ಮಾಡುತ್ತದೆ. ಕೆಲವು ದಿನಗಳ ಹಿಂದೆ ಈ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡಲಾಗಿತ್ತು. ಇದೀಗ ಈ ಹೆಸರೇ ಬಿಸಿಸಿಐಗೆ ಒಂದು ಕಂಟಕವಾಗಿ ಪರಿಣಮಿಸಿದೆ.
ದೆಹಲಿ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದೆ. ವಾಸ್ತವವಾಗಿ, ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಹೆಸರು ಕೂಡ ಚಂಪಕ್ ಆಗಿದ್ದು, ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಬಿಸಿಸಿಐ ತನ್ನ ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡುವ ಮೂಲಕ ನೋಂದಾಯಿತ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ನಿಯತಕಾಲಿಕೆಯ ಆಡಳಿತ ಮಂಡಳಿ ಆರೋಪ ಹೊರಿಸಿದೆ.
High-Tech Robot Dog in IPL 2025#IPL #IPL2025 #IPLonJioStar pic.twitter.com/uV6DD2ge55
— IPO Investor Academy (@IPO_ACADEMY) April 18, 2025
ದೂರಿನನ್ವಯ ದೆಹಲಿ ಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು, ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಟ್ಟಿರುವ ಬಗ್ಗೆ ಉತ್ತರ ಕೇಳಿದೆ. ಹೈಕೋರ್ಟ್ ಆದೇಶಿಸಿರುವಂತೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ತನ್ನ ಲಿಖಿತ ಉತ್ತರವನ್ನು ನೀಡಬೇಕಾಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.
IPL 2025: ಬದಲಾಗಲಿದೆ ಐಪಿಎಲ್! ಕ್ರಿಕೆಟ್ ಫ್ಯಾನ್ಸ್ಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಬಿಸಿಸಿಐ
ರೋಬೋ ಶ್ವಾನ ಚಂಪಕ್‌ನ ವಿಶೇಷತೆಯೆಂದರೆ.. ಇದು ಬಹು ಕ್ಯಾಮೆರಾಗಳನ್ನು ಹೊಂದಿದ್ದು ಆಟವನ್ನು ಎಲ್ಲಾ ಆಯಾಮಗಳಲ್ಲು ಸೇರಿ ಹಿಡಿಯುವ ಸಾಮರ್ಥ್ಯ ಹೊಂದಿದೆ. ಇದು ಮಾತ್ರವಲ್ಲದೆ ಆಟಗಾರರ ಕಾರ್ಯಕ್ಷಮತೆಯ ಡೇಟಾವನ್ನು ಸಹ ನಿರ್ವಹಿಸುತ್ತದೆ. ರೋಬೋ ಶ್ವಾನ ಚಂಪಕ್‌ನ ಇನ್ನೊಂದು ದೊಡ್ಡ ವೈಶಿಷ್ಟ್ಯವೆಂದರೆ ಅದನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ, ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ.ಕೆಳಗೆ ಬಿದ್ದರೆ, ಅದು ತಾನಾಗಿಯೇ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿದೆ. ಈ ಶ್ವಾನವನ್ನು ಪಂದ್ಯದ ಮೊದಲು, ಆಟಗಾರರ ಅಭ್ಯಾಸದ ಸಮಯದಲ್ಲಿ ಮತ್ತು ಅರ್ಧಾವಧಿಯಲ್ಲಿ ಬಳಸಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Wed, 30 April 25