IPL 2022 Final: ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: May 29, 2022 | 3:14 PM

ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಪಾರುಪತ್ಯ ಮೆರೆದ ತಂಡವೆಂದರೆ ಚೆನ್ನೈ ಸೂಪರ್ ಕಿಂಗ್ಸ್​. ಆಗಿದ್ರೆ ಐಪಿಎಲ್​ನಲ್ಲಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳಾವುವು ನೋಡೋಣ...

IPL 2022 Final: ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?
IPL Teams
Follow us on

IPL 2022 Final: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಫೈನಲ್​ಗೆ ಬಂದು ನಿಂತಿದೆ. ಅಂತಿಮ ಮುಖಾಮುಖಿಯಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ಸೆಣಸಲಿದೆ. ವಿಶೇಷ ಎಂದರೆ ಹೊಸ ತಂಡವಾಗಿ ಐಪಿಎಲ್​ ಅಭಿಯಾನ ಆರಂಭಿಸಿದ ಗುಜರಾತ್ ಟೈಟಾನ್ಸ್ ಮೊದಲ ಸೀಸನ್​ನಲ್ಲೇ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ 14 ವರ್ಷಗಳ ಬಳಿಕ ರಾಜಸ್ಥಾನ್ ರಾಯಲ್ಸ್​ ಫೈನಲ್​ ಪ್ರವೇಶಿಸಿದೆ. ಅಂದರೆ 2008 ರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ರಾಜಸ್ಥಾನ್ ಮತ್ತೆ ಫೈನಲ್ ಆಡುತ್ತಿರುವುದು ಇದೇ ಬಾರಿ. ಹೀಗಾಗಿ ಒಂದಾರ್ಥದಲ್ಲಿ ಉಭಯ ತಂಡಗಳಿಗೂ ಇದು ಮೊದಲ ಫೈನಲ್ ಅನ್ನಬಹುದು. ಏಕೆಂದರೆ 2008 ರಲ್ಲಿ ಆರ್​ಆರ್​ ಪರ ಆಡಿದ ಯಾವುದೇ ಆಟಗಾರ ಇಂದು ತಂಡದಲ್ಲಿಲ್ಲ. ಹಾಗಾಗಿ ಎರಡೂ ತಂಡಗಳಲ್ಲಿರುವ ಆಟಗಾರರು ಹೊಸ ತಂಡದೊಂದಿಗೆ ಚೊಚ್ಚಲ ಬಾರಿ ಟ್ರೋಫಿ ಗೆಲ್ಲುವ ತವಕದಲ್ಲಿದ್ದಾರೆ.

ಇನ್ನು ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಪಾರುಪತ್ಯ ಮೆರೆದ ತಂಡವೆಂದರೆ ಚೆನ್ನೈ ಸೂಪರ್ ಕಿಂಗ್ಸ್​. ಏಕೆಂದರೆ ಐಪಿಎಲ್​ ಇತಿಹಾಸದಲ್ಲಿ ಸಿಎಸ್​ಕೆ ತಂಡವು ಅತೀ ಹೆಚ್ಚು ಬಾರಿ ಫೈನಲ್ ಪಂದ್ಯವಾಡಿದೆ. ಆಗಿದ್ರೆ ಐಪಿಎಲ್​ನಲ್ಲಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳಾವುವು ನೋಡೋಣ…

  1. ಚೆನ್ನೈ ಸೂಪರ್ ಕಿಂಗ್ಸ್​: ಸಿಎಸ್​ಕೆ ತಂಡವು ಐಪಿಎಲ್​ನಲ್ಲಿ 9 ಬಾರಿ ಫೈನಲ್ ಪ್ರವೇಶಿಸಿದೆ. ಈ ವೇಳೆ ಗೆದ್ದಿರುವುದು ಕೇವಲ 4 ಬಾರಿ ಮಾತ್ರ.
  2. ಮುಂಬೈ ಇಂಡಿಯನ್ಸ್​: ಮುಂಬೈ ತಂಡವು ಐಪಿಎಲ್​ನಲ್ಲಿ 6 ಬಾರಿ ಫೈನಲ್ ಆಡಿದೆ. ಈ ವೇಳೆ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
  3. ಇದನ್ನೂ ಓದಿ
    Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
    IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
    IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
    IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
  4. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡವು ಐಪಿಎಲ್​ನಲ್ಲಿ ಒಟ್ಟು 3 ಬಾರಿ ಫೈನಲ್ ಪ್ರವೇಶಿಸಿದೆ. ಇದಾಗ್ಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
  5. ಕೊಲ್ಕತ್ತಾ ನೈಟ್​ ರೈಡರ್ಸ್​: ಕೆಕೆಆರ್ ತಂಡವು ಮೂರು ಬಾರಿ ಫೈನಲ್​ ಆಡಿದೆ. ಈ ವೇಳೆ ಎರಡು ಸಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  6. ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್​ ತಂಡವು 2 ಬಾರಿ ಫೈನಲ್ ಆಡಿದ್ದು, ಈ ವೇಳೆ ಒಂದು ಸಲ ಟ್ರೋಫಿ ಗೆದ್ದುಕೊಂಡಿತ್ತು. ಹಾಗೆಯೇ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲೂ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
  7. ರಾಜಸ್ಥಾನ್ ರಾಯಲ್ಸ್: ರಾಜಸ್ಥಾನ್ ತಂಡವು 2 ಬಾರಿ ಫೈನಲ್ ಪ್ರವೇಶಿಸಿದೆ. ಚೊಚ್ಚಲ ಐಪಿಎಲ್​ ಸೀಸನ್​ನಲ್ಲಿ ಚಾಂಪಿಯನ್ ಆಗಿದ್ದ ಆರ್​ಆರ್ ಇದೀಗ ಈ ಬಾರಿ ಫೈನಲ್​ ಆಡುತ್ತಿದೆ.
  8. ಕಿಂಗ್ಸ್​ ಇಲೆವೆನ್ ಪಂಜಾಬ್: ಈಗಿನ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್​ನಲ್ಲಿ ಒಂದು ಬಾರಿ ಮಾತ್ರ ಫೈನಲ್ ಪ್ರವೇಶಿಸಿತ್ತು. ಇದಾಗ್ಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.
  9. ಡೆಲ್ಲಿ ಕ್ಯಾಪಿಟಲ್ಸ್​: ಡೆಲ್ಲಿ ತಂಡ ಕೂಡ ಐಪಿಎಲ್​ನಲ್ಲಿ ಒಂದು ಬಾರಿ ಫೈನಲ್​ ಆಡಿದ್ರೂ, ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
  10. ಗುಜರಾತ್ ಟೈಟಾನ್ಸ್: ಚೊಚ್ಚಲ ಐಪಿಎಲ್ ಸೀಸನ್​ ಆಡುತ್ತಿರುವ ಗುಜರಾತ್ ತಂಡವು ಇದೇ ಮೊದಲ ಬಾರಿ ಫೈನಲ್ ಆಡುತ್ತಿದೆ.

ಅಂದರೆ ಪ್ರಸ್ತುತ ಇರುವ ಐಪಿಎಲ್​ನ 10 ತಂಡಗಳ ಪೈಕಿ 9 ತಂಡಗಳು ಫೈನಲ್ ಪ್ರವೇಶಿಸಿದೆ. ಇನ್ನು ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ಮಾತ್ರ ಫೈನಲ್ ಪ್ರವೇಶಿಸಬೇಕಿದೆ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Sun, 29 May 22