IPL 2022: ಕೇವಲ 4 ಮೈದಾನಗಳಲ್ಲಿ ಈ ಬಾರಿಯ ಐಪಿಎಲ್; ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು? ಇಲ್ಲಿದೆ ಮಾಹಿತಿ

| Updated By: ಪೃಥ್ವಿಶಂಕರ

Updated on: Feb 25, 2022 | 4:53 PM

IPL 2022: ಕೋವಿಡ್ -19 ಸೋಂಕು ಹೆಚ್ಚಾಗಿ ಹರಡಲು ಅವಕಾಶವಿರುವ ವಿಮಾನ ಪ್ರಯಾಣವನ್ನು ತಪ್ಪಿಸಲು ಮತ್ತು ಬಯೋಬಬಲ್ ವಾತಾವರಣದಲ್ಲಿ ಐಪಿಎಲ್‌ನ 15 ನೇ ಆವೃತ್ತಿಯನ್ನು ಒಂದೇ ಹಬ್‌ನಲ್ಲಿ ಆಡಲಾಗುವುದು.

IPL 2022: ಕೇವಲ 4 ಮೈದಾನಗಳಲ್ಲಿ ಈ ಬಾರಿಯ ಐಪಿಎಲ್; ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು? ಇಲ್ಲಿದೆ ಮಾಹಿತಿ
IPL 2022 ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ ಮತ್ತು ಅದಕ್ಕೂ ಮೊದಲು ಪ್ರತಿಯೊಬ್ಬ ಅಭಿಮಾನಿಗಳು ತಿಳಿದುಕೊಳ್ಳಬೇಕಾದ ಕೆಲವು ಅಂಕಿಅಂಶಗಳಿವೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಹೊಂದಿದ್ದರೂ, ಬೌಲರ್‌ಗಳು ಪಂದ್ಯವನ್ನು ತಿರುಗಿಸುವಲ್ಲಿ ನಿಷ್ಣಾತರಾಗಿದ್ದಾರೆ. ಬೌಲಿಂಗ್‌ನಲ್ಲಿ ತನ್ನ ಛಾಪು ಮೂಡಿಸಿದ ಆಟಗಾರ ಯಾರು? ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಯಾರು? ಇಲ್ಲಿದೆ ವಿವರ.
Follow us on

ಐಪಿಎಲ್ 2022 (IPL-2022 ) ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದೆ. ಲೀಗ್‌ನ ಮುಂದಿನ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವು ಮೇ 29 ರಂದು ನಡೆಯಲಿದೆ. ಬಿಸಿಸಿಐ ನಾಲ್ಕು ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜಿಸಿದೆ. ಈ ನಾಲ್ಕು ಸ್ಥಳಗಳೆಂದರೆ – ಮುಂಬೈನ ವಾಂಖೆಡೆ ಸ್ಟೇಡಿಯಂ (Wankhede Stadium), ಬ್ರಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಸ್ಟೇಡಿಯಂ. ಈ ಬಾರಿ ತಂಡವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಬಿಸಿಸಿಐ ತನ್ನ ಹೇಳಿಕೆಯಲ್ಲಿ, ಕೋವಿಡ್ -19 ಸೋಂಕು ಹೆಚ್ಚಾಗಿ ಹರಡಲು ಅವಕಾಶವಿರುವ ವಿಮಾನ ಪ್ರಯಾಣವನ್ನು ತಪ್ಪಿಸಲು ಮತ್ತು ಬಯೋಬಬಲ್ ವಾತಾವರಣದಲ್ಲಿ ಐಪಿಎಲ್‌ನ 15 ನೇ ಆವೃತ್ತಿಯನ್ನು ಒಂದೇ ಹಬ್‌ನಲ್ಲಿ ಆಡಲಾಗುವುದು. ಪಂದ್ಯಾವಳಿಯು ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 70 ಲೀಗ್ ಪಂದ್ಯಗಳು ಮುಂಬೈ ಮತ್ತು ಪುಣೆಯ ನಾಲ್ಕು ಅಂತರರಾಷ್ಟ್ರೀಯ ಮೈದಾನಗಳಲ್ಲಿ ನಡೆಯಲಿವೆ.

ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು

ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ವಾಂಖೆಡೆಯಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲೂ ಇದೇ ಪರಿಸ್ಥಿತಿ. ಪ್ರತಿ ತಂಡವೂ ಈ ಮೈದಾನದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ. ಪುಣೆಯ ಬ್ರಬೋರ್ನ್ ಸ್ಟೇಡಿಯಂ ಮತ್ತು ಎಂಸಿಎ ಸ್ಟೇಡಿಯಂನಲ್ಲಿ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ.

10 ತಂಡಗಳು ಒಟ್ಟು ತಲಾ 14 ಲೀಗ್ ಪಂದ್ಯಗಳನ್ನು ಆಡಲಿವೆ. ಇದಾದ ಬಳಿಕ ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಐದು ತಂಡಗಳನ್ನು ಎರಡು ಬಾರಿ ಮತ್ತು ಉಳಿದ ನಾಲ್ಕು ತಂಡಗಳನ್ನು ತಲಾ ಒಂದು ಬಾರಿ ಎದುರಿಸಲಿವೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಕೋವಿಡ್‌ನಿಂದಾಗಿ, ಈ ಬಾರಿ ಪಂದ್ಯಗಳನ್ನು ಪ್ರತಿ ಫ್ರಾಂಚೈಸಿಗಳ ತವರು ಮೈದಾನದಲ್ಲಿಆಡಲಾಗುವುದಿಲ್ಲ. ಈ ಕಾರಣಕ್ಕಾಗಿ, ತಂಡಗಳು ನಾಲ್ಕು ಮೈದಾನಗಳಲ್ಲಿ ಮಾತ್ರ ಆಡಬೇಕಾಗುತ್ತದೆ. ಕೊನೆಯ ಐಪಿಎಲ್ ಭಾರತದಲ್ಲಿಯೂ ಪ್ರಾರಂಭವಾಯಿತು ಆದರೆ ಕೋವಿಡ್ ಉಲ್ಲಂಘನೆಯ ಕಾರಣ, ಅದನ್ನು ನಂತರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಕೋವಿಡ್ ಪರಿಸ್ಥಿತಿ ಇನ್ನೂ ಯಥಾಸ್ಥಿತಿಯಲ್ಲಿದೆ, ಆದ್ದರಿಂದ ಬಿಸಿಸಿಐ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.

ಈ ಬಾರಿ 10 ತಂಡಗಳ ಐಪಿಎಲ್

ಈ ಬಾರಿ 10 ತಂಡಗಳು ಐಪಿಎಲ್‌ನಲ್ಲಿ ಆಡಲಿವೆ. ಈ ಬಾರಿಯ ಐಪಿಎಲ್‌ನಲ್ಲಿ ಹಳೆಯ ಎಂಟು ತಂಡಗಳ ಹೊರತಾಗಿ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿವೆ. ಈ ತಂಡಗಳಲ್ಲಿ ಒಂದು ಲಕ್ನೋ ಸೂಪರ್‌ಜೈಂಟ್ಸ್, ಇನ್ನೊಂದು ತಂಡ ಗುಜರಾತ್ ಟೈಟಾನ್ಸ್. ಕೆಎಲ್ ರಾಹುಲ್ ಅವರನ್ನು ಲಕ್ನೋ ತಂಡಕ್ಕೆ ನಾಯಕರನ್ನಾಗಿ ಮಾಡಲಾಗಿದ್ದು, ಗುಜರಾತ್ ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ ಅವರ ಕೈಲಿದೆ.

ಇದನ್ನೂ ಓದಿ:IPL 2022: 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಣೆ; ಯಾವ ಗುಂಪಿನಲ್ಲಿ ಯಾವ್ಯಾವ ತಂಡಗಳಿವೆ ಗೊತ್ತಾ?

Published On - 4:53 pm, Fri, 25 February 22