IND vs IRE: ಭಾರತದ ಕ್ಲೀನ್ ಸ್ವೀಪ್ ಗುರಿಗೆ ಮಳೆ ಅಡ್ಡಿ? ಇಲ್ಲಿದೆ ಡಬ್ಲಿನ್‌ ಹವಾಮಾನ ವರದಿ

|

Updated on: Aug 23, 2023 | 7:21 AM

IND vs IRE 3rd T20, Weather Report: ಸರಣಿಯ ಮೊದಲ ಪಂದ್ಯಕ್ಕೆ ಮಳೆ ತೊಂದರೆ ನೀಡಿತ್ತು. ಹಾಗಾಗಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾ 2 ರನ್‌ಗಳ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣವಿತ್ತು. ಇನ್ನು ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ತೀರ ವಿರಳ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

IND vs IRE: ಭಾರತದ ಕ್ಲೀನ್ ಸ್ವೀಪ್ ಗುರಿಗೆ ಮಳೆ ಅಡ್ಡಿ? ಇಲ್ಲಿದೆ ಡಬ್ಲಿನ್‌ ಹವಾಮಾನ ವರದಿ
ಭಾರತ- ಐರ್ಲೆಂಡ್ 3ನೇ ಟಿ20 ಪಂದ್ಯ
Follow us on

ಆಗಸ್ಟ್ 23 ರಂದು ಅಂದರೆ ಇಂದು (ಬುಧವಾರ) ಐರ್ಲೆಂಡ್ ವಿರುದ್ಧ ನಡೆಯುವ ಕೊನೆಯ ಟಿ20 ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ (India vs Ireland)) ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿದೆ. ಜಸ್ಪ್ರೀತ್ ಬುಮ್ರಾ (Jasprit Bumrah) ನಾಯಕತ್ವದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಈಗಾಗಲೇ ಗೆದ್ದು ಬೀಗಿದೆ. ಇದೀಗ ಐರ್ಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸುವುದು ಟೀಂ ಇಂಡಿಯಾದ (Team India) ಗುರಿಯಾಗಿದೆ. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವು ಡಬ್ಲಿನ್‌ನ (Dublin) ದಿ ವಿಲೇಜ್‌ನಲ್ಲಿ ನಡೆಯಲಿದ್ದು, ಸರಣಿಯ ಮೊದಲ 2 ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದವು.

ಪಿಚ್ ಯಾರಿಗೆ ಸಹಕಾರಿ?

ಆರಂಭಿಕ ಜೋಡಿ ಹೊರತುಪಡಿಸಿದರೆ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಟೀಂ ಇಂಡಿಯಾದ ಬ್ಯಾಟ್ಸ್​ಮನ್ ಗಳಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಟಾಪ್ ಆರ್ಡರ್ ಸಂಪೂರ್ಣವಾಗಿ ಬ್ಯಾಟ್ ಬೀಸಿತ್ತು ಪರಿಣಾಮವಾಗಿ 185 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಆಗಿತ್ತು. ಹೀಗಾಗಿ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಪೂರಕವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.

IND vs IRE: ಟಿ20 ಕ್ರಿಕೆಟ್​ನಲ್ಲಿ ಹಾರ್ದಿಕ್- ಅಶ್ವಿನ್​ರನ್ನು ಹಿಂದಿಕ್ಕಿದ ಜಸ್ಪ್ರೀತ್ ಬುಮ್ರಾ..!

ಹವಾಮಾನ ಹೇಗಿರಲಿದೆ?

ಸರಣಿಯ ಮೊದಲ ಪಂದ್ಯಕ್ಕೆ ಮಳೆ ತೊಂದರೆ ನೀಡಿತ್ತು. ಹಾಗಾಗಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾ 2 ರನ್‌ಗಳ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣವಿತ್ತು. ಇನ್ನು ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ತೀರ ವಿರಳ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಹವಾಮಾನ ವರದಿಗಳ ಪ್ರಕಾರ, ಬುಧವಾರ ಮಳೆಯಾಗುವ ಸಾಧ್ಯತೆಗಳಿಲ್ಲ. ಆದಾಗ್ಯೂ, ಪಂದ್ಯದ ಕೊನೆಯ ಭಾಗದಲ್ಲಿ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಬಹುದಾಗಿದೆ. ಈ ದಿನದಂದು ತಾಪಮಾನವು ಹೆಚ್ಚಿರಲ್ಲಿದ್ದು, ಪರಿಣಾಮವಾಗಿ, ವೇಗದ ಬೌಲರ್‌ಗಳು ಹೊಸ ಚೆಂಡಿನಲ್ಲಿ ಸ್ವಿಂಗ್ ಪಡೆಯುವ ಸಾಧ್ಯತೆ ಇದೆ.

ಟಿ20 ಸರಣಿಗಾಗಿ ಐರ್ಲೆಂಡ್ ಕ್ರಿಕೆಟ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬರ್ನಿ, ಮಾರ್ಕ್ ಆಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಪ್ಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕೆರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವರ್ಕಮ್, ಬೆನ್ ವೈಟ್ ಮತ್ತು ಕ್ರೇಗ್ ಯಂಗ್.

ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ