AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವತ್ತು ಸಂಡೇನಾ? ಪಾಕಿಗಳ ಕಾಲೆಳೆದ ಇರ್ಫಾನ್ ಪಠಾಣ್

ಮಹಿಳಾ ಏಷ್ಯಾ ಕಪ್ 2026ರ ಗ್ರೂಪ್-ಎ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 18.1 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 8.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ, 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಅದ್ಭುತ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಇವತ್ತು ಸಂಡೇನಾ? ಪಾಕಿಗಳ ಕಾಲೆಳೆದ ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್ - ಟೀಮ್ ಇಂಡಿಯಾImage Credit source: BCCI
ಝಾಹಿರ್ ಯೂಸುಫ್
|

Updated on: Sep 06, 2026 | 10:12 AM

Share

ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭಾರತ ಮಹಿಳಾ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಶನಿವಾರ (ಸೆಪ್ಟೆಂಬರ್ 5, 2026) ದುಬೈನಲ್ಲಿ ನಡೆದ ಗ್ರೂಪ್ ‘ಎ’ ಹಂತದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಏಕಪಕ್ಷೀಯವಾಗಿ ಪಾಕಿಸ್ತಾನ ತಂಡವನ್ನು ಸಂಪೂರ್ಣವಾಗಿ ಹತ್ತಿಕ್ಕಿತು. ಭಾರತ ತಂಡದ ಈ ಭರ್ಜರಿ ಗೆಲುವಿನ ಬೆನ್ನಲ್ಲೇ, ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಮಾಡಿದ ಒಂದು ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇವತ್ತು ಸಂಡೇನಾ? ಕಾಲೆಳೆದ ಪಠಾಣ್:

ಪಂದ್ಯ ಮುಗಿದ ತಕ್ಷಣ ಇರ್ಫಾನ್ ಪಠಾಣ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ, “ಆಜ್ ಸಂಡೇ ಹೈ ಕ್ಯಾ?” (ಇವತ್ತು ಭಾನುವಾರನಾ?) ಎಂದು ಕೇವಲ ನಾಲ್ಕು ಪದಗಳಲ್ಲಿ ಪೋಸ್ಟ್ ಹಾಕಿದರು. ಪಂದ್ಯ ನಡೆದಿದ್ದು ಶನಿವಾರವಾದರೂ, ಪಠಾಣ್ ಈ ರೀತಿ ಟ್ವೀಟ್ ಮಾಡಿರುವುದರ ಹಿಂದೆ ಒಂದು ರೋಚಕ ಇತಿಹಾಸವಿದೆ!

2025ರ ಪುರುಷರ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸತತ ಮೂರು ಭಾನುವಾರಗಳಂದು ಸೋಲಿಸಿತ್ತು. ಆಗ ಪಠಾಣ್ “ನೆರೆಹೊರೆಯವರೇ, ನಿಮ್ಮ ಭಾನುವಾರ ಹೇಗಿತ್ತು?” (Sunday kaisa raha padosiyo?) ಎಂದು ಕಾಲೆಳೆಯುತ್ತಿದ್ದರು.

ಆದರೆ ಈ ಬಾರಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದ್ದು ಶನಿವಾರದಂದು. ಹೀಗಾಗಿಯೇ ಇರ್ಫಾನ್ ಪಠಾಣ್ “ಆಜ್ ಸಂಡೇ ಹೈ ಕ್ಯಾ?” (ಇವತ್ತು ಭಾನುವಾರನಾ?)  ಎಂದು ಕೇಳಿ ಪಾಕ್ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದಾರೆ.

ಪಂದ್ಯದ ಮುಖ್ಯಾಂಶಗಳು:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡ, ಭಾರತದ ಮಾರಕ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು. ಇದು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ್ ದಾಖಲಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.

ಈ ಗುರಿಯನ್ನು ಟೀಮ್ ಇಂಡಿಯಾ 8.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್​ನ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಭಾರತ ಪ್ಲೇಯಿಂಗ್ 11: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಎನ್ ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ.

ಇದನ್ನೂ ಓದಿ: ಟಾಪ್-10 ಸರ್ವಶ್ರೇಷ್ಠ ವೇಗಿಗಳನ್ನು ಹೆಸರಿಸಿದ ಸ್ಟುವರ್ಟ್ ಬ್ರಾಡ್

ಪಾಕಿಸ್ತಾನ ಪ್ಲೇಯಿಂಗ್ 11: ಮುನೀಬಾ ಅಲಿ (ವಿಕೆಟ್ ಕೀಪರ್), ಶಾವಾಲ್ ಝುಲ್ಫಿಕರ್, ಗುಲ್ ಫಿರೋಝ, ಆಯೇಶಾ ಜಾಫರ್, ಸದಾಫ್ ಶಮಾಸ್, ಫಾತಿಮಾ ಸನಾ (ನಾಯಕಿ), ಉಮ್-ಎ-ಹನಿ, ಐಮನ್ ಫಾತಿಮಾ, ತುಬಾ ಹಸನ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.

Follow Us